ಬೆಂಗಳೂರು: ಹೆಬ್ಬಗೋಡಿ ರೇವ್ ಪಾರ್ಟಿ ಕೇಸ್‌ನ ತನಿಖೆ ಸಿಸಿಬಿಗೆ ಹಸ್ತಾಂತರಿಸಿದ ಡಿಜಿ

ಎರಡು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಮೀಪದ ಜಿ.ಆರ್‌.ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆದರೆ ಈ ಫಾರ್ಮ್‌ ಹೌಸ್‌ ಹೆಬ್ಬಗೋಡಿ ಠಾಣಾ ಸಹರದ್ದಿಗೆ ಸೇರಿದ ಕಾರಣ ದಾಳಿ ಬಳಿಕ ಪ್ರಕರಣವನ್ನು ಆ ಠಾಣೆಗೆ ಸಿಸಿಬಿ ವರ್ಗಾವಣೆ ಮಾಡಿತ್ತು. ಈಗ ಪ್ರಕರಣದ ಮುಂದಿನ ತನಿಖೆ ಹೊಣೆಗಾರಿಕೆ ಸಿಸಿಬಿ ಹೆಗಲಿಗೆ ಬಿದ್ದಿದೆ.

DG handed over Investigation of Bengaluru Rave Party Case to CCB grg

ಬೆಂಗಳೂರು(ಮೇ.23):  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್ ಹೌಸ್‌ನ ರೇವ್‌ ಪಾರ್ಟಿ ಮೇಲಿನ ದಾಳಿ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.

ಎರಡು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಮೀಪದ ಜಿ.ಆರ್‌.ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆದರೆ ಈ ಫಾರ್ಮ್‌ ಹೌಸ್‌ ಹೆಬ್ಬಗೋಡಿ ಠಾಣಾ ಸಹರದ್ದಿಗೆ ಸೇರಿದ ಕಾರಣ ದಾಳಿ ಬಳಿಕ ಪ್ರಕರಣವನ್ನು ಆ ಠಾಣೆಗೆ ಸಿಸಿಬಿ ವರ್ಗಾವಣೆ ಮಾಡಿತ್ತು. ಈಗ ಪ್ರಕರಣದ ಮುಂದಿನ ತನಿಖೆ ಹೊಣೆಗಾರಿಕೆ ಸಿಸಿಬಿ ಹೆಗಲಿಗೆ ಬಿದ್ದಿದೆ.

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

ಪಾರ್ಟಿಯಲ್ಲಿ ಮತ್ತೊಬ್ಬ ತೆಲುಗು ನಟಿ

ಇನ್ನು ಈ ರೇವ್ ಪಾರ್ಟಿಯಲ್ಲಿ ಮತ್ತೊಬ್ಬ ತೆಲುಗು ನಟಿ ಪಾಲ್ಗೊಂಡಿದ್ದ ಸಂಗತಿ ಬಯಲಾಗಿದೆ. ಅಲ್ಲದೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸ್ವತಃ ನಟಿ ಆಶಿ ರಾಯ್‌ ಅವರೇ ಬುಧವಾರ ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ‘ನಾನು ಹುಟ್ಟುಹಬ್ಬದ ಪಾರ್ಟಿ ಎಂದು ತಿಳಿದು ಆ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ನಾನು ಆತನನ್ನು (ವಾಸು) ಸೋದರ ಎಂದೇ ಕರೆಯುತ್ತೇನೆ. ಆದರೆ ಅಲ್ಲಿ ಏನಾಯಿತು ಎಂಬುದು ತನಗೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದೇನೆ’ ಎಂದು ಅಭಿಮಾನಿಗಳಿಗೆ ಕೈ ಮುಗಿದು ನಟಿ ಆಶಿ ರಾಯ್ ಮನವಿ ಮಾಡಿದ್ದಾರೆ.

ಇದೇ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ಪೋಷಕ ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಬಳಿಕ ತಾವು ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ ಎಂದು ಫಾರ್ಮ್‌ ಹೌಸ್‌ನಿಂದಲೇ ಅವರು ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದರು. ಕೊನೆಗೆ ಹೇಮಾ ಪಾರ್ಟಿಯಲ್ಲಿದ್ದ ಸಂಗತಿಯನ್ನು ನಗರ ಪೊಲೀಸ್ ಆಯುಕ್ತರು ಖಚಿತಪಡಿಸಿದ್ದರು.

Latest Videos
Follow Us:
Download App:
  • android
  • ios