ಮುಕ್ತಿಗಾಗಿ ತಿರುಪತಿ ತಿರುಮಲದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ/ ಚಲಿಸುವ ವಾಹನದ ಕೆಳಗೆ ಬೇಕಂತಲೇ ಬಿದ್ದು ಆತ್ಮಹತ್ಯೆ ಮಾಡಿಕೊಂಡ/ ಆತ್ಮಹತ್ಯೆಗೆ ಶರಣಾದ ತಮಿಳುನಾಡು ಮೂಲದ ವ್ಯಕ್ತಿ

ತಿರುಪತಿ (ಡಿ.13) ತಿರುಪತಿಯ ವೆಂಕಟೇಶ್ವರ ಸನ್ನಿಧಿಗೆ ಭೇಟಿ ನೀಡಿದ ಭಕ್ತರೊಬ್ಬರು ತಿರುಮಲದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ಮೂಲದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿರುಮಲಕ್ಕೆ ಹಾಲು ಸರಬರಾಜು ಮಾಡುತ್ತಿದ್ದ ವ್ಯಾನ್​ ಕೆಳಗೆ ಬೇಕಂತಲೇ ಬಿದ್ದಿದ್ದಾರೆ. ವೆಂಕಟೇಶ್ವರ ಸನ್ನಿಧಿ ಸಮೀಪವೇ ಈ ಘಟನೆ ನಡೆದಿದೆ.

ಶುಕ್ರವಾರ ಬೆಳಗಿನ ಜಾವ 5ಗಂಟೆಗೆ ಈ ಘಟನೆ ನಡೆದಿದ್ದು, ಈ ವಿಷಯ ತಿಳಿಯುತ್ತಿದ್ಧಂತೆ ದೇವರ ದರ್ಶನವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ದೇವಾಲಯ ಶುದ್ದಿ ಕಾರ್ಯದ ಬಳಿಕ ಮತ್ತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಗಮ ಸಲಹೆಗಾರ ರಮಣ ದೀಕ್ಷಿತ ತಿಳಿಸಿದ್ದರು.

ಘೋರ ಅವಘಡದ ವಿಡಿಯೋ ನೋಡಿ

ಮೂಢ ನಂಬಿಕೆಯೇ? ತಿರುಮಲದಲ್ಲಿ ಸಾವನ್ನಪ್ಪಿದ್ದರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಸಹ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಮೊದಲಿಗೆ ಇದನ್ನು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ನಂತರಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಆತ್ಮಹತ್ಯೆ ಎಂಬುದು ಗೊತ್ತಾಗಿದೆ.