* ಕರ್ತವ್ಯ ಲೋಪ ಹಿನ್ನೆಲೆ ಆರು ಮಂದಿ ಪೊಲೀಸರ ಅಮಾನತು* ಪಾಂಡೇಶ್ವರ ಮಹಿಳಾ ಠಾಣೆ ಪಿಎಸ್ಸೈ ರೋಸಮ್ಮ ಸೇರಿ ಆರು ಮಂದಿ ‌ಅಮಾನತು* ಮಂಗಳೂರು ನಗರ ಪೊಲೀಸ್ ‌ಕಮಿಷನರ್ ಶಶಿಕುಮಾರ್ ಆದೇಶ* ಪೋಕ್ಸೋ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ತಾಳಿದ ಆರೋಪದಡಿ ಪಿಎಸ್ಸೈ ಸಸ್ಪೆಂಡ್* ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ದವೇ ದೂರು ಬಂದಾಗ ನಿರ್ಲಕ್ಷ್ಯ ತಾಳಿದ್ದ ಪಿಎಸ್ಸೈ

ಮಂಗಳೂರು(ಜ. 06) ಕರ್ತವ್ಯ ಲೋಪ ಹಿನ್ನೆಲೆ ಆರು ಮಂದಿ ಪೊಲೀಸರ (Karnataka POlice) ಅಮಾನತು (Suspend)ಮಾಡಲಾಗಿದೆ. ಪಾಂಡೇಶ್ವರ ಮಹಿಳಾ (Woman) ಠಾಣೆ ಪಿಎಸ್ಸೈ ರೋಸಮ್ಮ ಸೇರಿ ಆರು ಮಂದಿ ಸಿಬ್ಬಂದಿ ಅಮಾನತು ಮಾಡಲಾಗಿದ್ದು ಮಂಗಳೂರು(Mangaluru) ನಗರ ಪೊಲೀಸ್ ‌ಕಮಿಷನರ್ ಶಶಿಕುಮಾರ್ ಆದೇಶ ನೀಡಿದ್ದಾರೆ.

ಪೋಕ್ಸೋ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ತಾಳಿದ ಆರೋಪದಡಿ ಪಿಎಸ್ಸೈ ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ದವೇ ದೂರು ಬಂದಾಗ ನಿರ್ಲಕ್ಷ್ಯ ತಾಳಿದ್ದು ಪ್ರಕರಣದ ಮೂಲ. ಮತ್ತೊಂದು ‌ಪ್ರತ್ಯೇಕ ಪ್ರಕರಣದಲ್ಲಿ ಮಹಿಳಾ ಠಾಣೆಯ ಐವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ‌ಮದ್ಯಪಾನ ಮಾಡಿ ಅನುಚಿತ ವರ್ತನೆ ಹಿನ್ನೆಲೆ ‌ ಇನ್ನೊಬ್ಬ ಪುರುಷ ಸಿಬ್ಬಂದಿ ಅಮಾನತು ಮಾಡಲಾಗಿದೆ.

IPS Promotion : ವರ್ಷಾಂತ್ಯಕ್ಕೆ ಮೇಜರ್ ಸರ್ಜರಿ.. 10 ಹಿರಿಯ ಅಧಿಕಾರಿಗಳಿಗೆ ಬಹುದೊಡ್ಡ ಗಿಫ್ಟ್!

ಇಬ್ಬರು ಎಎಸ್ಸೈ, ಇಬ್ಬರು ಹೆಡ್ ಕಾನ್ಸ್‌ಟೇಬಲ್, ಒಬ್ಬ ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಎಸಿಪಿ ಹಾಗೂ ಡಿಸಿಪಿ ವರದಿಯನ್ವಯ ಕ್ರಮ ತೆಗೆದುಕೊಳ್ಳಲಾಗಿದೆ.

ಚಾಮರಾಜನಗರ ಪ್ರಕರಣ: ಜೂಜಾಟದಲ್ಲಿ ಸಿಕ್ಕಿ ಬಿದ್ದಿದ್ದ ಎಎಸ್ಐ (ASI) ಸೇರಿ ಮೂವರು ನೌಕರರು ಸೇವೆಯಿಂದ ಅಮಾನತಾಗಿದ್ದಾರೆ. ಡಿ 21 ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ ಜೂಜಾಟವಾಡುತ್ತಿದ್ದ ಪೊಲೀಸರು (Police) ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು. ಚಾಮರಾಜನಗರದ (Chamarajanagar) ಕರಿನಂಜನ ಪುರದಲ್ಲಿ ಜೂಜಾಟ ನಡೆಸಲಾಗಿತ್ತು.

ಇದೀಗ ಘಟನೆಗೆ ಸಂಬಂಧಿಸಿದಂತೆ ಎಎಸ್ಐ (ASI), ಹೆಡ್ ಕಾನ್ಸ್ ಟೇಬಲ್ , ತಹಶೀಲ್ದಾರ್ (Tahasildar) ಚಾಲಕನನ್ನು ಸಸ್ಪೆಂಡ್ ಮಾಡಲಾಗಿದೆ. ಮೀಸಲು ಪಡೆಯ ಎಎಸ್ಐ (ASI) ಪ್ರದೀಪ್, ಹೆಡ್ ಕಾನ್ಸ್‌ ಟೇಬಲ್ ಮರಿಸ್ವಾಮಿ, ಚಾಮರಾಜನಗರ (Chamarajanagar) ತಹಶೀಲ್ದಾರ್ ಚಾಲಕ ಕಮಲೇಶ್ ಅವರನ್ನು ಅಮಾನತು ಮಾಡಲಾಗಿದೆ. 

ಕಳ್ಳರ ಗ್ಯಾಂಗಿಗೆ ಪೊಲೀಸಪ್ಪನೇ ನಾಯಕ : ಖಾಕಿ ತೊಟ್ಟು ಕಳ್ಳರ ಹಿಡಿಯಬೇಕಾದ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬ(Police Constable), ಶೋಕಿ ಬದುಕಿನ ಮೋಹಕ್ಕೆ ಸಿಲುಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಒಳಗೊಂಡ ಬೈಕ್‌ ಕಳ್ಳರ ತಂಡಕ್ಕೆ ಬಾಸ್‌ ಆದ. ಕಡೆಗೆ ತನ್ನ ಶಿಷ್ಯರು ಬಾರ್‌ನಲ್ಲಿ ಹೇಳಿದ ‘ಸತ್ಯ’ದ ಪರಿಣಾಮ ಇದೀಗ ಜೈಲು(Jail) ಸೇರಿದ್ದ. 

ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ ಕಾನ್‌ಸ್ಟೇಬಲ್‌ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್‌ ರವಿ ಎಂಬಾತನೇ ಬೈಕ್‌ ಕಳ್ಳರ ಗ್ಯಾಂಗ್‌(Gang of Thieves) ಸ್ಟಾರ್‌ ಆಗಿದ್ದು, ಕದ್ದ ಬೈಕ್‌ಗಳ ವಿಲೇವಾರಿಗೆ ಸಹಕರಿಸಿದ ಆರೋಪದ ಮೇರೆಗೆ ರಾಜಸ್ಥಾನ(Rajasthan) ಮೂಲದ ಚಿನ್ನಾಭರಣ ವ್ಯಾಪಾರಿ ರಮೇಶ್‌ ಕೂಡಾ ಜೈಲು ಸೇರುವಂತಾಗಿದೆ. ಈ ಕೃತ್ಯದಲ್ಲಿ ಹೊನ್ನಪ್ಪನ ಸಹಚರರಾದ 17 ವರ್ಷದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು(Police) ವಿಚಾರಣೆ ನಡೆಸಿದ್ದಾರೆ.

ಇತ್ತೀಚಿಗೆ ಬಾರ್‌ನಲ್ಲಿ ಮದ್ಯ(Alcohol) ಸೇವಿಸುವಾಗ ಅಪ್ರಾಪ್ತರರು, ತಮ್ಮ ಕಳ್ಳತನಕ್ಕೆ ಪೊಲೀಸ್‌ ಬಾಸ್‌ ಎಂದಿದ್ದರು. ಈ ಮಾತು ಕೇಳಿಸಿಕೊಂಡ ಬಾತ್ಮೀದಾರನೊಬ್ಬ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ಹುಡುಗರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕ್‌ ಕಳ್ಳತನ ಕೃತ್ಯ ಬಯಲಾಗಿದೆ.

ಹುಡುಗರ ದಾರಿ ತಪ್ಪಿಸಿದ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹೊನ್ನಪ್ಪ ದುರದಪ್ಪ ಮಾಳಗಿ, 2016ರಲ್ಲಿ ಕಾನ್‌ಸ್ಟೇಬಲ್‌ ಹುದ್ದೆಗೆ ಆಯ್ಕೆಯಾಗಿದ್ದ. ಆನಂತರ ವಿದ್ಯಾರಣ್ಯಪುರ ಠಾಣೆಗೆ ನೇಮಕಗೊಂಡಿದ್ದ ಆತ, 2019ರಲ್ಲಿ ಓಓಡಿ ಮೇರೆಗೆ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದ. ವಿದ್ಯಾರಣ್ಯಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಒಂದೂವರೆ ವರ್ಷದ ಹಿಂದೆ ಬೈಕ್‌ ಸರ್ವೀಸ್‌ ಸ್ಟೇಷನ್‌ನಲ್ಲಿ ಆತನಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗರ ಪರಿಚಯವಾಗಿದೆ. ಆಗ ಆ ಹುಡುಗರಿಗೆ ‘ನೀವೇಷ್ಟು ದುಡಿಯುತ್ತೀರಿ. ನಾನು ಹೇಳಿದಂತೆ ಮಾಡಿದರೆ ನಿಮಗೆ ಕೈ ತುಂಬ ಹಣ ಸಿಗುತ್ತೆ’ ಎಂದು ಉಪದೇಶ ಮಾಡಿದ್ದ. ಈ ಮಾತು ಒಪ್ಪಿದ ಬಾಲಕರಿಗೆ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುವ ಬೈಕ್‌ಗಳನ್ನು ಕಳವು ಮಾಡುವಂತೆ ಕಾನ್‌ಸ್ಟೇಬಲ್‌ ಹೊನ್ನಪ್ಪ ಸೂಚಿಸಿದ್ದ.

ಬಳಿಕ ಕದ್ದ ಬೈಕ್‌ಗಳಿಗೆ(Bike) ನಕಲಿ ಆರ್‌ಸಿ ಸೇರಿದಂತೆ ದಾಖಲೆ ಸೃಷ್ಟಿಸಿ ಕಡಿಮೆ ಬೆಲೆಗೆ ಹೊನ್ನಪ್ಪ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಬೈಕ್‌ ಕಳವು ಮಾಡುವ ಅಪ್ರಾಪ್ತ ಬಾಲಕಿಗೆ ಸ್ಪಲ್ಪ ಹಣ ಕೊಟ್ಟು ಇನ್ನುಳಿದ ಹಣದಲ್ಲಿ ಹೊನ್ನಪ್ಪ ಬಿಂದಾಸ್‌ ಜೀವನ ಸಾಗಿಸುತ್ತಿದ್ದ. ಆತನಿಗೆ ಬೈಕ್‌ ವಿಲೇವಾರಿಗೆ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ರಮೇಶ್‌ ನೆರವು ಕೊಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬೈಕ್‌ ಕಳ್ಳರ ತಂಡವನ್ನು ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ಹಾಗೂ ಮಾಗಡಿ ರಸ್ತೆ ಠಾಣೆ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ನೇತೃತ್ವದ ತಂಡ ಬಂಧಿಸಿದೆ.