Asianet Suvarna News Asianet Suvarna News

ಭದ್ರಾವತಿ; ಒಂದೇ ಸೀರೆ ತಾಯಿ ಮಗಳ ನೇಣಾಯಿತು.. ಸಾಲಕ್ಕೆ ಹೆದರಿ ಸುಸೈಡ್!

* ಗಂಡನ ಸಾಲಕ್ಕೆ ಹೆದರಿ ಪತ್ನಿ ಆತ್ಮಹತ್ಯೆ
* ಮಗಳನ್ನು ನೇಣಿಗೆ ಒಡ್ಡಿದ ತಾಯಿ
* ಭದ್ರಾವತಿಯಿಂದ ಘೋರ ಪ್ರಕರಣ ವರದಿ
* ಕೊರೋನಾ ಕಾಲದಲ್ಲಿ ವ್ಯಾಪಾರ ಕುಂದಿತ್ತು

Depressed mother, daughter commit suicide Bhadravathi Shivamogga mah
Author
Bengaluru, First Published Sep 7, 2021, 11:30 PM IST
  • Facebook
  • Twitter
  • Whatsapp

ಶಿವಮೊಗ್ಗ(ಸೆ. 07)  ಗಂಡ ಮಾಡಿಕೊಂಡಿದ್ದ ಸಾಲದ ಶೂಲಕ್ಕೆ ಹೆದರಿದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಸುಸೈಡ್ ಮಾಡಿಕೊಳ್ಳುವುದಲ್ಲದೆ ಮಗಳನ್ನು ನೇಣಿಗೆ ಹಾಕಿದ್ದಾಳೆ.

ಭದ್ರಾವತಿಯಿಂದ ಘೋರ ಪ್ರಕರಣ ವರದಿಯಾಗಿದೆ.   ಗಂಡನ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭದ್ರಾವತಿಯ  ಸುಭಾಷ್ ನಗರದಲ್ಲಿ ಮಂಗಳವಾರ  ದುರಂತವೇ ನಡೆದಿದೆ. 

ಸಂಗೀತಾ (35) ಹಾಗೂ ಮಧುಶ್ರೀ (11) ಮೃತ ದುರ್ದೈವಿಗಳು. ಸಂಗೀತಾ ಪತಿ ಧನಶೇಖರ್ ಹೋಲ್​ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 

ಪ್ರೀತಿಸಿದವಳು ದೂರ.. ಪೊಲೀಸರ ಹೆಸರು ಬರೆದಿಟ್ಟು ರಾಯಚೂರು ಯುವಕ ಸುಸೈಡ್!

ಸೀರೆಯ ಒಂದು ಬದಿಯಿಂದ ಕುಣಿಕೆ ಹೆಣೆದು ಮಧುಶ್ರೀಯನ್ನು ನೇಣಿಗೇರಿಸಿದ ಸಂಗೀತಾ , ಮತ್ತೊಂದು ತುದಿಗೆ ತಾನು ನೇಣು ಬಿಗಿದುಕೊಂಡಿದ್ದಾರೆ . ಸಂಗೀತಾ ಮತ್ತು ಮಧುಶೀ ಸಾವಿಗೆ ಸಾಲದ ಭೀತಿಯೇ ಕಾರಣ ಎಂದು ಹೇಳಲಾಗುತ್ತಿದೆ   ಸಂಗೀತಾ ಪತಿ ಧನಶೇಖರ್ ಅವರು ಹೋಲ್ ಸೇಲ್ ವ್ಯಾಪಾರ ನೆಡಸುತ್ತಿದ್ದರು .  ಲಾಕ್ ಡೌನ್‌ ಹಿನ್ನೆಲೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು . 

ಇದರಿಂದ ಸಂಗೀತ ಮಾನಸಿಕವಾಗಿ ಕುಗ್ಗಿದ್ದರು . ಅಲ್ಲದೆ ಪತಿ ಮಾಡಿದ್ದ ಸಾಲ ತೀರಿಸಲು ಆಗುತ್ತದೆಯೋ ಇಲ್ಲವೋ ಎಂದು ಚಿಂತೆಗೀಡಾಗಿದ್ದರು . ಭದ್ರಾವತಿಯ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios