ಮೂರು ವರ್ಷದ ಬಾಲಕಿಯ ಮೇಲೆ ರೇಪ್21 ವರ್ಷದ ವ್ಯಕ್ತಿಯ ಬಂಧನಪಶ್ಚಿಮ ದೆಹಲಿಯ ಪಂಜಾಬಿ ಬಾಘ್ ಪ್ರದೇಶದಲ್ಲಿ ನಡೆದ ಘಟನೆ
ನವದೆಹಲಿ (ಮಾ. 12): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಅತ್ಯಾಚಾರ (Rape) ಘಟನೆಗಳು ದಿನನಿತ್ಯ ವರದಿ ಆಗುತ್ತಲೇ ಇರುತ್ತದೆ. ಆದರೆ, ಶನಿವಾರ ನಡೆದಿರುವ ಘಟನೆ ದೆಹಲಿ ಜನತೆಯನ್ನು ಮತ್ತೊಮ್ಮೆ ಭೀತಿ ಹುಟ್ಟಿಸಿದೆ. ಎಳೆಯ ಕಂದಮ್ಮಗಳ ಮೇಲೂ ಕಾಮುಕರ ಕರಿದೃಷ್ಟಿ ಬಿದ್ದಿದೆ. 3 ವರ್ಷದ ಬಾಲಕಿಯ (3 Year Old) ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ( Punjabi Bagh) ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ನಂತರ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. "21 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ" ಎಂದು ಡಿಸಿಪಿ ಘನಶ್ಯಾಮ್ ಬನ್ಸಾಲ್ ( DCP Ghanshyam Bansal ) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಧಿಕಾರಿಯ ಪ್ರಕಾರ, ಆರೋಪಿಯು ಬಾಲಕಿಗೆ ಪರಿಚಿತರಾಗಿದ್ದು, ಹತ್ತಿರದ ಗುಡಿಸಲುಗಳಲ್ಲಿಯೇ ವಾಸವಿದ್ದರು ಎಂದು ಹೇಳಲಾಗಿದೆ.
ಅದರಂತೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣಕ್ಕೆ ಶಿಕ್ಷೆ) ಮತ್ತು 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ( Protection of Children from Sexual Offences Act ) (ಪೋಕ್ಸೊ) ಸೆಕ್ಷನ್ 6 (ಉಗ್ರವಾದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಮತ್ತು ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ” ಎಂದು ಡಿಸಿಪಿ ತಿಳಿಸಿದ್ದು, ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2021 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 1,969 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ, ಇದು ಹಿಂದಿನ ವರ್ಷಕ್ಕಿಂತ 21.69% ಹೆಚ್ಚಾಗಿದೆ. 2020 ರಲ್ಲಿ, ಈ ಸಂಖ್ಯೆ 1,618 ಆಗಿತ್ತು.
ಕೇವಲ ಅತ್ಯಾಚಾರವಲ್ಲ, ಮಹಿಳೆಯರ ವಿರುದ್ಧದ ಅಪರಾಧದ ಪ್ರತಿ ಅಂಕಿ ಅಂಶವು ವರ್ಷದಿಂದ ವರ್ಷಕ್ಕೆ ಮೇಲ್ಮುಖವಾಗಿ ಸಾಗುತ್ತಿದೆ.. ಮಹಿಳೆಯರ ಮೇಲಿನ ದೌರ್ಜನ್ಯ ಶೇ.17.51ರಷ್ಟು ಮತ್ತು ಈವ್ ಟೀಸಿಂಗ್ ಶೇ.17.51ರಷ್ಟು ಏರಿಕೆಯಾಗಿದೆ. ಆದಾಗ್ಯೂ, ದೆಹಲಿ ಪೊಲೀಸರು ಅಪರಾಧಗಳ ಅಂಕಿಅಂಶಗಳ ಹೆಚ್ಚಳವನ್ನು ನ್ಯಾಯಯುತ ಮತ್ತು ಸತ್ಯವಾದ ನೋಂದಣಿಯ ( Truthful Registration ) ಪ್ರಜ್ಞಾಪೂರ್ವಕ ನೀತಿಯಿಂದಾಗಿ ಆಗಿರುವುದು ಎಂದು ಹೇಳಿದ್ದಾರೆ.
ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ದೆಹಲಿ ಪೊಲೀಸರ ಪೂರ್ವಭಾವಿ ವಿಧಾನ ಮತ್ತು ಅತ್ಯಾಚಾರ ಪ್ರಕರಣಗಳ ಹೆಚ್ಚಿನ ಪರಿಹಾರದ ಪ್ರಮಾಣವನ್ನು ಹೊಂದಿದೆ. ರೇಪ್ ಕೇಸ್ ಗಳನ್ನು ಪರಿಹರಿಸುವಲ್ಲಿ ಶೇ 95.48 ಯಶಸ್ಸನ್ನು ದೆಹಲಿ ಪೊಲೀಸರು ಹೊಂದಿದ್ದಾರೆ,. ಮಹಿಳಾ ದೌರ್ಜನ್ಯ ಪ್ರಕರಣಗಳು ( molestation of women cases ) (ಶೇ 90.98) ಮತ್ತು ಮಹಿಳೆಯರ ನಮ್ರತೆಗೆ ಅವಮಾನ (ಶೇ 85.75), ಮಹಿಳೆಯರ ಮೇಲಿನ ಅಪರಾಧಗಳು ಇನ್ನೂ ಕಡಿಮೆಯಾಗಿಲ್ಲ.
ಒಂದು ಆಶ್ಚರ್ಯಕರ ಕಾರಣವೆಂದರೆ, ಹೆಚ್ಚಿನ ಸಮಯದಲ್ಲಿ, ಘೋರ ಅಪರಾಧವನ್ನು ಮಾಡುವ ವ್ಯಕ್ತಿಯು ಮೇಲೆ ಹೇಳಿದ ಪ್ರಕರಣದಂತೆ ಸಂತ್ರಸ್ಥೆಗೆ ತಿಳಿದ ವ್ಯಕ್ತಿಯೇ ಆಗಿರುತ್ತಾನೆ. 2021 ರಲ್ಲಿ, ಸುಮಾರು 98.78 ಪ್ರತಿಶತ ಅತ್ಯಾಚಾರ ಪ್ರಕರಣಗಳಲ್ಲಿ, ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದರು ಮತ್ತು ಅಪರಿಚಿತರು ಕೇವಲ 1.22 ಪ್ರತಿಶತ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
