ರಸ್ತೆ ಮಧ್ಯದಲ್ಲೇ ಮಹಿಳೆಗೆ ಥಳಿತ; ಬಲವಂತವಾಗಿ ಕ್ಯಾಬ್‌ನೊಳಗೆ ತಳ್ಳಿದ ಕಿರಾತಕ..! ವಿಡಿಯೋದಲ್ಲಿ ಸೆರೆ..
ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿರುವುದಾಗಿ ದೆಹಲಿ ಪೊಲೀಸರು ಹೇಳಿಕೊಂಡಿದ್ದು, ಅಲ್ಲದೆ ಮೂವರು ಪ್ರಯಾಣಿಕರು ಎಲ್ಲಿ ಇಳಿದಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಸಹ ಪ್ರಯತ್ನಿಸುತ್ತಿದ್ದಾರೆ.
ನವದೆಹಲಿ (ಮಾರ್ಚ್ 19, 2023): ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅನ್ನುವ ಬಗ್ಗೆ ಸಾಕಷ್ಟು ಆರೋಪಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ದೆಹಲಿಯಲ್ಲಿಶನಿವಾರ ರಾತ್ರಿ ಘಟನೆಯೊಂದು ನಡೆದಿದೆ. ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿಯ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸಿ ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಈ ಘಟನೆಗೆ ಸಂಬಂಧಿಸಿದಂತೆ ಆ ವಾಹನ ಮತ್ತು ಚಾಲಕನನ್ನು ಸಹ ಪತ್ತೆ ಹಚ್ಚಲಾಗಿದೆ. ವಾಯವ್ಯ ದೆಹಲಿಯಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಮಹಿಳೆಗೆ ಹೊಡೆದು ಕ್ಯಾಬ್‌ಗೆ ತಳ್ಳುತ್ತಿರುವಾಗ ಆತನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ನೋಡುತ್ತಿದ್ದ ಎಂಬುದು ಸೆರೆಯಾಗಿದೆ.
ವೈರಲ್ ಆದ ವಿಡಿಯೋ..
ಬರಿಗಾಲಿನಲ್ಲಿದ್ದ ವ್ಯಕ್ತಿ, ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಹಿಳೆಯನ್ನು ಥಳಿಸುವುದನ್ನು ನೋಡಬಹುದು. ಅಲ್ಲದೆ, ಆಕೆಯನ್ನು ಬಲವಂತವಾಗಿ ಕ್ಯಾಬ್‌ಗೆ ತಳ್ಳಿದ್ದು, ಬಳಿಕ ಕ್ಯಾಬ್‌ನೊಳಗೆ ಹಲವು ಬಾರಿ ಆಕೆಗೆ ಪಂಚ್ ಮಾಡಿದ್ದಾನೆ. ಪಕ್ಕದಲ್ಲೇ ಇನ್ನೊಬ್ಬ ವ್ಯಕ್ತಿ ನಿಂತಿದ್ದರೂ ಆತ ತಾಣು ಏನೂ ನೋಡೇ ಇಲ್ಲ ಎನ್ನುವಂತೆ ಸುಮ್ಮನೆ ನಿಂತಿದ್ದ. ನಂತರ ಇಬ್ಬರೂ ಕ್ಯಾಬ್‌ನೊಳಗೆ ಪ್ರವೇಶಿಸಿದ್ದು, ಬಳಿಕ ಕ್ಯಾಬ್ ಮುಂದಕ್ಕೆ ಹೋಗಿದೆ. ಕ್ಯಾಬ್ ಡ್ರೈವರ್ ಸೇರಿದಂತೆ ಯಾರೂ ಮಹಿಳೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿಲ್ಲ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು, ಈ ಘಟನೆಯನ್ನು ನೋಡಿದ ಜನರು ಘಟನೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದು, ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನು ಓದಿ: ಅಯ್ಯೋ ಪಾಪಿ: ಗಂಡನ ಉದ್ಯೋಗ ಪಡೆಯಲು ಪತಿಯನ್ನೇ ಕೊಲೆ ಮಾಡಿ ಫ್ಯಾನ್‌ಗೆ ನೇತು ಹಾಕಿದ ಮಹಿಳೆ..!
ಕೆಳಗಿನ ವಿಡಿಯೋವನ್ನು ಒಮ್ಮೆ ನೋಡಿ..
ವಿಡಿಯೋದಲ್ಲಿ ಬಿಳಿ ಟೀ-ಶರ್ಟ್‌ನಲ್ಲಿರುವ ವ್ಯಕ್ತಿ ಮಹಿಳೆಯ ಕಾಲರ್ ಹಿಡಿದು, ಆಕೆಯನ್ನು ಥಳಿಸುತ್ತಿರುವುದನ್ನು ಮತ್ತು ಕಾರಿನೊಳಗೆ ತಳ್ಳುವುದನ್ನು ಕಾಣಬಹುದು. ನಂತರ, ಆತ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಹೋದಾಗ ಕಪ್ಪು ಟೀ ಶರ್ಟ್ ಧರಿಸಿದ್ದ ಇನ್ನೊಬ್ಬ ವ್ಯಕ್ತಿ ಕಾರಿನೊಳಗೆ ಬಂದು ಮಹಿಳೆಯ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ.
ಇನ್ನು, ಪೊಲೀಸರು ಈ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಶನಿವಾರ ರಾತ್ರಿ ತನಿಖೆ ಆರಂಭಿಸಿರುವುದಾಗಿ ದೆಹಲಿ ಪೊಲೀಸ್ ಔಟರ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿಯ ತಂಡವನ್ನು ಗುರುಗ್ರಾಮದ ರತನ್ ವಿಹಾರ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ 11:30 ಕ್ಕೆ ಗುರುಗ್ರಾಮ್‌ನ IFFCO ಚೌಕ್‌ನ ಸುತ್ತಲೂ ಕ್ಯಾಬ್ ಕೊನೆಯದಾಗಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ಕತ್ತು ತಾನೇ ಕೊಯ್ಕೊಂಡ: ಚಾಕು, ಪಿಸ್ತೂಲ್ ಹಿಡಿದು ಗಾಳೀಲಿ ಗುಂಡು ಹಾರಿಸುತ್ತಾ ಓಡಿದ ಭೂಪ..!
ಈ ಮಧ್ಯೆ, ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿರುವುದಾಗಿ ದೆಹಲಿ ಪೊಲೀಸರು ಹೇಳಿಕೊಂಡಿದ್ದು, ಅಲ್ಲದೆ ಮೂವರು ಪ್ರಯಾಣಿಕರು ಎಲ್ಲಿ ಇಳಿದಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಸಹ ಪ್ರಯತ್ನಿಸುತ್ತಿದ್ದಾರೆ. ತನಿಖೆಯ ನಂತರ, ಪೊಲೀಸರು ವಾಹನವನ್ನು ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿರುವುದು ಕಂಡುಬಂದಿದೆ. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಯಿತು. ವಾದದ ನಂತರ, ಹುಡುಗಿ ಕಾರಿನಿಂದ ಹೊರಗೆ ಹೋಗಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ಹುಡುಗ ಬಾಲಕಿಯನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್ ಸೆಕ್ಸ್: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!