Asianet Suvarna News Asianet Suvarna News

ಕ್ರೆಡಿಟ್ ಕಾರ್ಡ್‌ಗೂ ಕನ್ನ, ಲಕ್ಷ ಕಳೆದುಕೊಂಡ ವಕೀಲ... ಇಂಥ ಸಂದೇಶ ಬಂದ್ರೆ ಜೋಕೆ!

ಲಾಯರ್‌ ಗೆ ಕ್ರೆಡಿಟ್ ಕಾರ್ಡ್ ಮೋಸ/ ಒಂದು ಲಕ್ಷ ರೂ ಕಳೆದುಕೊಂಡರು/ ಈ ರೀತಿಯ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ತೆರೆಯಬೇಡಿ/ ಡೆಬಿಟ್ ಕಾರ್ಡ್ ಗೆ ಕನ್ನ ಹಾಕುತ್ತಿದ್ದವರು ಈಗ ಕ್ರೆಡಿಟ್ ಕಾರ್ಡ್ ಗುರಿ ಮಾಡಿಕೊಂಡಿದ್ದಾರೆ

Delhi lawyer loses Rs 1 lakh in credit card fraud 21-year-old youth arrested mah
Author
Bengaluru, First Published Mar 3, 2021, 8:03 PM IST

ನವದೆಹಲಿ (ಮಾ. 03)  ರಾಜಧಾನಿಯಲ್ಲಿ ವಕೀಲರೊಬ್ಬರು ವಂಚನೆಗೆ  ಒಳಗಾಗಿದ್ದಾರೆ.  ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಿ ಒಂದು ಲಕ್ಷ ರೂ. ಕಳೆದುಕೊಂಡಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 21 ವರ್ಷದ ತುಸಾರ್ ತ್ಯಾಗಿ ಎಂಬಾತನ ಬಂಧಿಸಿದ್ದಾರೆ.  ಅಡ್ವೋಕೆಟ್ ಸದಾಬ್ ಖಾನ್ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

 ವಂಚನೆ  ಹೇಗೆ: ನಿಮ್ಮ ಕ್ರೆಡಿಟ್ ಕಾರ್ಡ್ ಪಾಯಿಂಟ್ ಗಳನ್ನು ರೀಡಿಮ್ ಮಾಡಿಕೊಳ್ಳಿ ಎಂದು ವಕೀಲರ ಮೊಬೈಲ್‌ ಗೆ ಟೆಕ್ಸ್ಟ್ ಸಂದೇಶವೊಂದು ಬಂದಿದೆ.  ಅದನ್ನು ಒಪನ್ ಮಾಡಿ ಡಿಟೇಲ್ಸ್ ತುಂಬಿದಾಗ ವಕೀಲರ ಕ್ರೆಡಿಟ್ ಕಾರ್ಡ್ ನಿಂದ ಒಂದು ಲಕ್ಷ ರೂ. ಕಡಿತವಾಗಿದೆ.

ಹಣ ಕದ್ದು ಪ್ರೆಯಸಿಯೊಂದಿಗೆ ಟೂರ್‌ ಗೆ ಹಾರಿದ್ದ

ಮೆಸೇಜ್ ಸರ್ವೀಸ್ ಒಂದನ್ನು ಬಳಸಿಕೊಂಡು ಆರೋಪಿ ಸಂದೇಶ ರವಾನೆ ಮಾಡಿದ್ದಾನೆ.  ವಕೀಲರು ಸಂದೇಶ ತೆರೆದಾಗ ಅವರ ಖಾತೆ ಸ್ಕಾನ್ ಆಗಿದ್ದು ಅಲ್ಲಿಂದ ಈತನ ಪೆಟಿಎಂ ಖಾತೆಗೆ ಹಣ  ಹಾಕಿಸಿಕೊಂಡಿದ್ದಾನೆ. ಕೆಲವನ್ನು ಗಿಫ್ಟ್ ವೋಚರ್ ಗಳಾಗಿ, ಬ್ರ್ಯಾಂಡೆಡ್ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಬಳಿಸಿದ್ದಾನೆ.

ತನಿಖೆಯಲ್ಲಿ ಮೊದಲಿಗೆ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನ ವಿಚಾರಣೆ ಮಾಡಿದ್ದು ನೀನು ಈ ವೋಚರ್ ಗಳನ್ನು ಎಲ್ಲಿಂದ ಪಡೆದುಕೊಂಡೆ ಎಂದಾಗ  ಒಂದೊಂದೆ ಮಾಹಿತಿ ಗೊತ್ತಾಗುತ್ತ ಹೋಗಿದೆ. 

ಲಾಕ್ ಡೌನ್ ಸಂದರ್ಭ ಪರಿಚಯವಾದ ವಿಶಾಲ್ ಕ್ರೆಡಿಟ್ ಕಾರ್ಡ್ ಹಣ ಹೇಗೆ ವಂಚನೆ ಮಾಡಬೇಕು ಎಂಬ ವಿಚಾರ ಹೇಳಿಕೊಟ್ಟಿದ್ದ ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ.

Follow Us:
Download App:
  • android
  • ios