ಸುಳ್ಳು ರೇಪ್ ಆರೋಪ ಮಾಡಿದ ಮಹಿಳಾ ದೂರುದಾರರ ಅತ್ಯಾಚಾರದ ಎಫ್‌ಐಆರ್‌ನ್ನು ದೆಹಲಿ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ
ನವದೆಹಲಿ (ಅ. 02): ಸುಳ್ಳು ರೇಪ್ ಆರೋಪ ಮಾಡಿದ ಮಹಿಳಾ ದೂರುದಾರರ ಅತ್ಯಾಚಾರದ ಪ್ರಥಮ ಮಾಹಿತಿ ವರದಿಯನ್ನು (FIR) ದೆಹಲಿ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಅಲ್ಲದೇ ಅಖಿಲ ಭಾರತ ಅಂಧರ ಒಕ್ಕೂಟದಲ್ಲಿ ಎರಡು ತಿಂಗಳ ಕಾಲ ಸಮಾಜ ಸೇವೆಯನ್ನು ಮಾಡುವಂತೆ ಮಹಿಳೆಗೆ ತಿಳಿಸಿದೆ. ನ್ಯಾಯಾಲಯವು ಎಫ್‌ಐಆರ್ ಮತ್ತು ನಂತರದ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ ಮತ್ತು ಮಹಿಳೆಗೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಂಧರ ಸಂಸ್ಥೆಯೊಂದಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದೆ ಮತ್ತು ಎಫ್‌ಐಆರ್‌ನಲ್ಲಿರುವ ಆರೋಪಿಗೆ 50 ಮರಗಳನ್ನು ನೆಡುವಂತೆ ಸೂಚಿಸಿದೆ.
"ಅರ್ಜಿದಾರರಿಗೆ (ಆರೋಪಿ) ಈ ಕೆಳಗಿನ ಅನುಸರಣೆಯೊಂದಿಗೆ 50 ಮರಗಳನ್ನು ನೆಡಲು ಸಹ ನಿರ್ದೇಶಿಸಲಾಗಿದೆ: ಅರ್ಜಿದಾರರು ತನಿಖಾ ಅಧಿಕಾರಿಯೊಂದಿಗೆ ಸಮಾಲೋಚಿಸಿ 50 ಮರಗಳನ್ನು ನೆಡುತ್ತಾರೆ, ಅಧಿಕಾರಿ ಎಂಸಿಡಿ, ರೋಹಿಣಿ ವಲಯದ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಮರಗಳನ್ನು ನೆಡಬೇಕಾದ ಪ್ರದೇಶವನ್ನು ಸೂಚಿಸುತ್ತಾರೆ, ”ಎಂದು ನ್ಯಾಯಾಲಯ ಹೇಳಿದೆ.
ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ಹಿಮಾಂಶು ಎನ್ನುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಹಿಳೆ ಅತ್ಯಾಚಾರದ ಕೇಸ್ ದಾಖಲಿಸಿದ್ದರು. ಈ ಬೆನ್ನಲ್ಲೇ ಹಿಮಾಂಶುವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮಹಿಳೆ ನಾಲ್ಕು ಮಕ್ಕಳ ತಾಯಿಯಾಗಿದ್ದು, ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು.
ರೆಸ್ಟೋರೆಂಟ್‌ಗಳಲ್ಲಿ ಸರ್ವೀಸ್ ಚಾರ್ಜ್ ನಿಷೇಧಕ್ಕೆ ದೆಹಲಿ ಹೈಕೋರ್ಟ್ ತಡೆ
ಆದರೆ ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ, ತಮ್ಮ ತಪ್ಪು ಏನೂ ಇಲ್ಲ ಎಂದು ಹಿಮಾಂಶು ಅವರು ಎಫ್ಐಆರ್ ರದ್ದತಿಗೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಎಫ್‌ಐಆರ್ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ ಹಿಮಾಂಶು ತಮಗೆ ತಂಪು ಪಾನೀಯವನ್ನು ನೀಡಿದ್ದು ನಂತರ ತಾನು ಪ್ರಜ್ಞಾಹೀನಳಾಗಿ ಬಿದ್ದಿದ್ದು, ನಂತರ ಅರ್ಜಿದಾರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ಹೇಳಿದ್ದರು.
ಇನ್ನು ರಾಜಿ ಪತ್ರದಲ್ಲಿ "ಮಹಿಳೆ ಹಾಗೂ ಹಿಮಾಂಶು ಹಣ ವಿವಾದ ಹೊಂದಿದ್ದು ಮತ್ತು ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಮತ್ತು ಕೆಲವು ತಪ್ಪು ಸಲಹೆ ಮತ್ತು ತಪ್ಪು ಮಾರ್ಗದರ್ಶನದಲ್ಲಿ ಅವರು ವಿಷಯದ ಎಫ್ಐಆರ್ ದಾಖಲಿಸಿದ್ದಾರೆ" ಎಂದು ಹೇಳಲಾಗಿದೆ. ಮಹಿಳೆಯ ನಡವಳಿಕೆಯು "ಅತ್ಯಂತ ಅನ್ಯಾಯ" ಮತ್ತು "ಸಂಪೂರ್ಣ ನಿಂದನೆ ಮತ್ತು ಕಾನೂನಿನ ಪ್ರಕ್ರಿಯೆಯ ದುರುಪಯೋಗ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವೈವಾಹಿಕ ಅತ್ಯಾಚಾರ ಅಪರಾಧವಲ್ಲ ಎಂದ ನ್ಯಾಯಮೂರ್ತಿ, ತೀರ್ಪಿನ ವಿರುದ್ಧ ಭಾರೀ ಆಕ್ರೋಶ!
"ಪ್ರತಿವಾದಿ ಸಂಖ್ಯೆ. 2 (ಮಹಿಳೆ) ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ, ಇದರ ಪರಿಣಾಮವಾಗಿ ಅವರು ತಪ್ಪು ಸಲಹೆಯ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ" ಎಂದು ಅದು ಹೇಳಿದೆ. ಸದ್ಯ ಎಫ್‌ಐಆರ್ ರದ್ದು ಪಡಿಸಿರುವ ಕೋರ್ಟ್ ಮಹಿಳಗೆ ಸಾಮಾಜಿಕ ಸೇವೆಯನ್ನು ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದ.
ಸಾಮಾಜಿಕ ಸೇವೆಯ ಅವಧಿಯಲ್ಲಿ ಮಹಿಳೆ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ ಮತ್ತು ವೈದ್ಯಕೀಯವಾಗಿ ವಿನಾಯಿತಿ ನೀಡದ ಹೊರತು ಸಂಪೂರ್ಣವಾಗಿ ಲಸಿಕೆ ಹಕಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ
