ವಿಲ್ಲುಪುರಂ(ಜ. 01) ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ  ನಟ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ನಿರಾಶೆಗೊಂಡ  ಪನಂಪಟ್ಟು ಮೂಲದ 34 ವರ್ಷದ ಅಭಿಮಾನಿಯೊಬ್ಬ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜೆ.ರಾಜ್‌ಕುಮಾರ್ ಬುಧವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್  ಹಾಕಿ ರಜನಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.  ರಜಿನಿಕಾಂತ್ ಅವರೇ ನನ್ನ ಜೀವ ಮತ್ತು ಜೀವನ ಇದು ನನ್ನ ಕೊನೆಯ ಪೋಸ್ಟ್  ಎಂದು ಬರೆದುಕೊಂಡಿದ್ದಾನೆ.  ಇದಾದ ಮೇಲೆ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ರಾಜ್ ಕುಮಾರ್ ನನ್ನು ಆತನ ಗೆಳೆಯರು ಛೇಡಿಸಿದ್ದಾರೆ.  ರಜನಿಕಾಂತ್ ನಿರ್ಧಾರದ ಬಗ್ಗೆಯೂ ಟೀಕೆ ಮಾಡಿದ್ದಾರೆ.

ತಲೈವಾ ರಾಜಕಾರಣಕ್ಕೆ ಬರಲ್ವಂತೆ!

 ಗುರುವಾರ ಬೆಳಿಗ್ಗೆ ಶವವಾಗಿ ರಾಜ್ ಕುಮಾರ್ ಪತ್ತೆಯಾಗಿದ್ದಾನೆ.  ಆದರೆ ಪೊಲೀಸರು ಇದು ಆತ್ಮಹತ್ಯೆ ಅಲ್ಲ ಎಂದಿದ್ದಾರೆ. ಬೇರೆ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ರಾಜ್ ಕುಮಾರ್ ಹೂಮಾಲೆ ಖರೀದಿಗಾಗಿ ರಾತ್ರಿ ಮಾರುಕಟ್ಟೆಗೆ ಸ್ನೇಹಿತರೊಂದಿಗೆ ತೆರಳಿದ್ದಾನೆ. ಅಲ್ಲಿ ಮೂರ್ಛೆ ಹೋಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಕೊನೆ ಉಸಿರು  ಎಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.  ರಾಜ್ ಕುಮಾರ್ ಕುಟುಂಬ ಸಹ ಯಾವುದೇ ದೂರು ನೀಡಿಲ್ಲ.