ಸಾಲ ಭಾದೆಯಿಂದ ಆತಂಕಗೊಂಡ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನ ಕೆಂಭಾವಿ ಸಮೀಪದ ಯುಕ್ತಪುರ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ (ಜ.1): ಸಾಲ ಭಾದೆಯಿಂದ ಆತಂಕಗೊಂಡ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನ ಕೆಂಭಾವಿ ಸಮೀಪದ ಯುಕ್ತಪುರ ಗ್ರಾಮದಲ್ಲಿ ನಡೆದಿದೆ. ಮಾನಪ್ಪ ಬಸಪ್ಪ ಕೋರವಾರ (52) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣಿಬೆನ್ನೂರುನಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ಗುರುವಾರ ತಾಲೂಕಿನ ಕುಸಗೂರ ಗ್ರಾಮದಲ್ಲಿ ಸಂಭವಿಸಿದೆ. ಹಸನ್‌ಸಾಬ್‌ ಜಮಾಲಸಾಬ್‌ ನಾಸಿಪುಡಿ (38) ಮೃತನು. ಈತನು ಕೃಷಿಗಾಗಿ ತಾಲೂಕಿನ ಸುಣಕಲ್‌ಬಿದರಿ ಕೆವಿಜಿ ಬ್ಯಾಂಕಿನಲ್ಲಿ . 3.09 ಲಕ್ಷ, ರಾಣಿಬೆನ್ನೂರಿನ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ . 25 ಸಾವಿರ ಒಟ್ಟು . 4.34 ಲಕ್ಷ ಸಾಲ ಮಾಡಿದ್ದನು. ಆದರೆ ಕಳೆದ ಮೂಲ್ಕು ವರ್ಷಗಳಿಂದ ಅತೀವೃಷ್ಟಿಯಿಂದ ಫಸಲು ಕೈಕೊಟ್ಟಹಿನ್ನೆಲೆಯಲ್ಲಿ ಸಾಲ ತೀರಿಸುವ ಚಿಂತೆಯಲ್ಲಿ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಳಗಿಯಲ್ಲಿ ಸಾಲ ಬಾಧೆಗೆ ರೈತ ಆತ್ಮಹತ್ಯೆ
ತಾಲೂಕಿನ ಕೊಡದೂರ ಗ್ರಾಮದ ರೈತ ಬಸಪ್ಪ ಚಿನ್ನ (75) ಸಾಲಭಾಧೆ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ ಇಬ್ಬರು ಮಕ್ಕಳು ಇದ್ದಾರೆ. ಎಸ್ಬಿಐ ಶಾಖೆಯಲ್ಲಿ 2.50 ಲಕ್ಷ ರು., ಖಾಸಗಿಯಾಗಿ 10 ಲಕ್ಷ ರು. ಸಾಲ ಮಾಡಿಕೊಂಡಿದ್ದ. ನೆಟೆ ರೋಗದಿಂದ ತೊಗರಿ ಬೆಳೆ ಕೈಕೊಟ್ಟಹಿನ್ನೆಲೆಯಲ್ಲಿ ಬೇಸತ್ತ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಂಜನಗೂಡಿನಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿದೆ. ಗ್ರಾಮದ ರೈತ ಸಣ್ಣಪ್ಪ (50) ಆತ್ಮಹತ್ಯೆ ಮಾಡಿಕೊಂಡವರು. ಸಣ್ಣಪ್ಪ ಅವರಿಗೆ ಪತ್ನಿ, ಓರ್ವ ಮಗ ಹಾಗೂ ಮಗಳು ಇದ್ದಾರೆ.

ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ

ಸಣ್ಣಪ್ಪ ಅವರಿಗೆ ಗ್ರಾಮದಲ್ಲಿ 20 ಗುಂಟೆ ಜಮೀನು ಹೊಂದಿದ್ದು, ಬೆಳೆ ಕೈಗೆ ಹತ್ತದೆ, ಕೈಸಾಲ ತೀರಿಸಲಾಗದೆ ಮನನೊಂದು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಶಿವನಂಜಶೆಟ್ಟಿತಿಳಿಸಿದ್ದಾರೆ.