Asianet Suvarna News Asianet Suvarna News

ಹಾವೇರಿಯಲ್ಲಿ ವಿಷ ಸೇವಿಸಿದ್ದ ರೈತ ಸಾವು: ಪರಿಸ್ಥಿತಿ ಉದ್ವಿಗ್ನ

ವಾರದ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ನಾಗೇನಹಳ್ಳಿ ಗ್ರಾಮದ ರೈತ ದರ್ಶನ್‌ ನಾಗಪ್ಪ ಮುದ್ದಪ್ಪನವರ (30) ಶುಕ್ರವಾರ ಮೃತಪಟ್ಟಿದ್ದಾರೆ. ‘ಸಮೀಪದ ಮಾಕನೂರಿನ ಯೂನಿಯನ್‌ ಬ್ಯಾಂಕಿನಿಂದ ಸಾಲ ಪಡೆದಿದ್ದ ದರ್ಶನ್‌, ಒಟಿಎಸ್‌ ಯೋಜನೆಯಿಂದ ವಂಚಿತರಾಗಿದ್ದರು. ಈ ಸಂಬಂಧ ರೈತರ ಹೋರಾಟದಲ್ಲೂ ಪಾಲ್ಗೊಂಡಿದ್ದರು. 

Death Of A Farmer Who Consumed Poison At Haveri gvd
Author
Bangalore, First Published Jul 30, 2022, 12:28 AM IST

ಹಾವೇರಿ (ಜು.30): ವಾರದ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ನಾಗೇನಹಳ್ಳಿ ಗ್ರಾಮದ ರೈತ ದರ್ಶನ್‌ ನಾಗಪ್ಪ ಮುದ್ದಪ್ಪನವರ (30) ಶುಕ್ರವಾರ ಮೃತಪಟ್ಟಿದ್ದಾರೆ. ‘ಸಮೀಪದ ಮಾಕನೂರಿನ ಯೂನಿಯನ್‌ ಬ್ಯಾಂಕಿನಿಂದ ಸಾಲ ಪಡೆದಿದ್ದ ದರ್ಶನ್‌, ಒಟಿಎಸ್‌ ಯೋಜನೆಯಿಂದ ವಂಚಿತರಾಗಿದ್ದರು. ಈ ಸಂಬಂಧ ರೈತರ ಹೋರಾಟದಲ್ಲೂ ಪಾಲ್ಗೊಂಡಿದ್ದರು. 

ಮನನೊಂದಿದ್ದ ದರ್ಶನ್‌ ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು’ ಎಂದು ರೈತ ಮುಖಂಡರು ಆರೋಪಿಸಿದರು. ದರ್ಶನ್‌ ಸಾವಿಗೆ ಮಾಕನೂರಿನ ಯೂನಿಯನ್‌ ಬ್ಯಾಂಕಿನ ಅಧಿಕಾರಿಗಳು ಕಾರಣ ಎಂದು ಆರೋಪಿಸಿದ ರೈತ ಮುಖಂಡರು,  ಬ್ಯಾಂಕಿನ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ್‌ ಸಂತೋಷ್‌ ಅವರು ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಮನವೊಲಿಸಲು ಯತ್ನಿಸಿದರು. 

ಆರ್‌ಎಸ್‌ಎಸ್‌ನವರು ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡಿದವರು: ಜಮೀರ್ ಅಹ್ಮದ್

ನಂತರ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದು, ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಹರಿಹರಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಎಚ್ಚೆತ್ತುಕೊಂಡ ಪೊಲೀಸರು ಹೋರಾಟಕ್ಕೆ ಮುಂದಾದ ಮುಖಂಡರನ್ನು ಹಲಗೇರಿ ಠಾಣೆಗೆ ಕರೆದೊಯ್ದರು.

ಕಾಲುವೆಗೆ ಬಿದ್ದ ಎತ್ತಿನ ಗಾಡಿ, ರೈತ ಸಾವು: ಎತ್ತಿಗಾಡಿಗೆ ಹಂದಿಗಳು ಅಡ್ಡಬಂದ್ದು ಎತ್ತುಗಳು ದಿಕ್ಕಾ ಪಾಲಾಗಿ ಓಡಿ, ಗಾಡಿ ಕಾಲುವೆಯೊಳಗೆ ಬಿದ್ದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ರಾಮಸಮುದ್ರ ನಾಲೆ ಬಳಿ ನಡೆದಿದೆ. ಘಟನೆಯಲ್ಲಿ ಕೆಸ್ತೂರುಕೊಪ್ಪಲು ಗ್ರಾಮದ ಚಂದ್ರೇಗೌಡ (60) ಎಂಬವರೆ ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಪತ್ನಿ ಹಾಗೂ ಮಗ ಹರೀಶ್‌ ಅವರೊಡಗೂಡಿ ಗದ್ದೆಯಲ್ಲಿ ಬೆಳೆದಿರುವ ಅಲಸಂದೆ ಬಿಡಿಸಿಕೊಂಡು ಬರಲು ತೆರಳಿದ್ದರು.

ರಮೇಶ್‌ ಕುಮಾರ್‌ ಹೇಳಿಕೆ ಬಾಯ್ತಪ್ಪಿನಿಂದ ಬಂದಿರಬೇಕು: ಕೋಳಿವಾಡ

ಅಲಸಂದೆ ಬಿಡಿಸಿ ಎತ್ತಿಗಾಡಿಗೆ ತುಂಬಿ ಮನೆಗೆ ವಾಪಸ್‌ ಬರುವಾಗ ಪತ್ನಿ ಮತ್ತು ಮಗ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಎತ್ತಿನಗಾಡಿಯಲ್ಲಿ ಚಂದ್ರೇಗೌಡ ಬರುತ್ತಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ ಹಂದಿಗಳು ಗಾಡಿಗೆ ಅಡ್ಡಬಂದು ದಿಕ್ಕಾಪಾಲಾಗಿ ಓಡಿದಾಗ ಗದರಿದ ಎತ್ತುಗಳು ಗಾಡಿಯೊಂದಿಗೆ ದಿಕ್ಕಾಪಾಲಾಗಿ ಓಡಿದ ಪರಿಣಾಮ ಗಾಡಿ ರಾಮಸಮುದ್ರ ನಾಲೆಗೆ ಬಿದ್ದಿದೆ. ಗಾಡಿ ನಾಲೆಗೆ ಬಿದ್ದಿದ್ದನ್ನು ಕಂಡ ಮಗ ಮತ್ತು ಪತ್ನಿ ಹಾಗೂ ಸಾರ್ವಜನಿಕರು ಕೂಡಲೆ ಚಂದ್ರೇಗೌಡರನ್ನು ಮೇಲಕ್ಕೆ ಎತ್ತಿದ್ದಾರೆ, ಆದರೆ ಅಷ್ಟರಲ್ಲಾಗಲೆ ಚಂದ್ರೇಗೌಡರ ಮೇಲೆ ಎತ್ತಿಗಾಡಿ ಬಿದ್ದು ಇಡಿ ದೇಹ ಕೆಸರುಮಯವಾದ ಕಾರಣ ಅವರು ಸ್ಥಳದಲ್ಲೆ ಮೃತಪಟ್ಟಿದ್ದರು. ಘಟನೆ ಸಂಬಂಧ ಮೃತ ಚಂದ್ರೇಗೌಡರ ಪುತ್ರ ಹರೀಶ್‌ ನೀಡಿರುವ ದೂರಿನನ್ವಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow Us:
Download App:
  • android
  • ios