Asianet Suvarna News Asianet Suvarna News

ರಾಯಚೂರು: ಪ್ರೀತಿಗಾಗಿ ಮಗಳಿಂದ ಕಳವು, ಮರ್ಯಾದೆಗೆ ಅಂಜಿ ಹೆದರಿದ ಹೆತ್ತವರ ಆತ್ಮಹತ್ಯೆ!

ಪ್ರೀತಿಗಾಗಿ ಮಗಳು ಮಾಡಿದ ಕಳವಿಗೆ ಅಂಜಿ ಇಡೀ ಕುಟುಂಬವೇ ರೈಲಿಗೆ ತಲೆಕೊಟ್ಟಿದ್ದು, ದುರ್ಘಟನೆಯಲ್ಲಿ ಹೆತ್ತವರು ಸ್ಥಳದಲ್ಲೇ ಸಾವನ್ನಪ್ಪಿದರೆ ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

daughter Stolen gold for lover parents self death in  Raichuru gow
Author
First Published Mar 11, 2024, 11:52 AM IST

ರಾಯಚೂರು (ಮಾ.11): ಪ್ರೀತಿಗಾಗಿ ಮಗಳು ಮಾಡಿದ ಕಳವಿಗೆ ಅಂಜಿ ಇಡೀ ಕುಟುಂಬವೇ ರೈಲಿಗೆ ತಲೆಕೊಟ್ಟಿದ್ದು, ದುರ್ಘಟನೆಯಲ್ಲಿ ಹೆತ್ತವರು ಸ್ಥಳದಲ್ಲೇ ಸಾವನ್ನಪ್ಪಿದರೆ ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸ್ಥಳೀಯ ರಾಮಲಿಂಗೇಶ್ವರ ನಗರದ ನಿವಾಸಿಯಾಗಿದ್ದ ಸಮೀರ ಅಹ್ಮದ್ (50), ಪತ್ನಿ ಜುಲೇಖಾ ಬೇಗಂ(44) ಸ್ಥಳದಲ್ಲಿ ಮೃತಪಟ್ಟ ಪಾಲಕರಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಗಳು ಮೈಮೋನಾ ಬೇಗಂ (21) ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬೆಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಮುಖಂಡ ಸ್ಕೆಚ್, ರೌಡಿ ಶೀಟರ್‌ ಸಹಿತ ಗ್ಯಾಂಗ್ ಅರೆಸ್ಟ್!

ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳಲು ತಂದೆ, ತಾಯಿ ಮತ್ತು ಮಗಳು ಹೋಗುವಾಗ 12 ವರ್ಷ ಮಗ ಅಯಾನ್ ಕೂಡ ಹಿಂದೆ ಬಂದಿದ್ದಾನೆ. ಮಗನನ್ನೂ ತಮ್ಮೊಟ್ಟಿಗೆ ರೈಲ್ವೆ ಹಳಿಗೆ ತೆಲೆ ಕೊಟ್ಟು ಮಲಗಿದ್ದಾರೆ. ಆದರೆ, ಮಗ ರೈಲು ಬರುವಾಗ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪತಿ ಸಮೀರ ಅಹ್ಮದ್ ಟಾಟಾ ಏಸ್ ವಾಹನ ಬಾಡಿಗೆ ಹೊಡೆಯುತ್ತಿದ್ದರು. ಪತ್ನಿ ಜುಲೇಖಾ ಬೇಗಂ ಮನೆ ಗೆಲಸ ಮಾಡುತ್ತಿದ್ದರು. ಮಗಳು ಮೈಮೋನಾ ಬೇಗಂ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಮಹಿಮ್ಮುದ್ ಹುಸೇನ್ ಎಂಬುವವರ ಮನೆಗೆ ಹೋಗಿ ಅವರ ಮಗನಿಗೆ ಟ್ಯುಷನ್ ಹೇಳುತ್ತಿದ್ದಳು. ಮಹಿಮ್ಮುದ್ ಹುಸೇನ್‌ ಅವರ ಮನೆಯಲ್ಲಿ ಇತ್ತೀಚೆಗೆ ಡೈಮಂಡ್ ನಕ್ಲೇಸ್ ಹಾಗೂ ಚಿನ್ನವನ್ನು ಮೈಮೋನಾಬೇಗಂ ಕದ್ದಿದ್ದಳು. ಈ ಕುರಿತು ಮಹಿಮ್ಮುದ್ ಹುಸೇನ್ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ವಿಚಾರಣೆ ಆರಂಭಿಸುತ್ತಿದ್ದಂತೆ ಹೆದರಿದ ಮೈಮೋನಾಬೇಗಂ ತಾನು ಕದ್ದ ಚಿನ್ನವನ್ನು ಮರಳಿ ಕಿಟಕಿ ಮೂಲಕ ಎಸೆದಿದ್ದಳು. ಆದರೆ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು.

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!

ಈ ಬಗ್ಗೆ ಮೈಮೋನಾ ಬೇಗಂನನ್ನು ಕರೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಳು. ಸರ್ಫರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದು, ಕಳ್ಳತನ ಮಾಡಿದ ಆಭರಣಗಳನ್ನು ಪ್ರಿಯಕರನಿಗೆ ನೀಡಿದ್ದಾಗಿ ತಿಳಿಸಿದ್ದಾಳೆ. ಆಭರಣ ಮರಳಿ ಕೊಡುವಂತೆ ಸರ್ಫರಾಜ್‌ಗೆ ಕೇಳಿಕೊಂಡರೆ ಅವನು ಮೊಬೈಲ್ ಸ್ವೀಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಈ ವಿಷಯವನ್ನು ಮೈಮೋನಾ ಬೇಗಂ ಪಾಲಕರಿಗೆ ತಿಳಿಸಿದ್ದು, ಮಗಳ ಕುಕೃತ್ಯದ ನಡೆಯಿಂದ ನೊಂದು ಮರ್ಯಾದೆಗೆ ಹೆದರಿ ಮೂವರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಅಣಿಯಾಗಿದ್ದಾರೆ.

Follow Us:
Download App:
  • android
  • ios