ಅನಾರೋಗ್ಯದಂದ ಬಳಲುತ್ತಿದ್ದ ತನ್ನ ತಾಯಿ ಮೃತಪಟ್ಟಿರಬೇಕೆಂಬ ಅನುಮಾನದಿಂದ ಮನೆಗೆ ಹೋಗುವ ಮೊದಲೇ ದಾರಿ ಮಧ್ಯೆ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೇಖಾ.

ಕಾರ್ಕಳ(ಮಾ.29): ತಾಯಿ ಅಕಾಲಿಕ ನಿಧನದ ಸುದ್ದಿ ತಿಳಿದ ಮಗಳು ಮನೆ ಸಮೀಪದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ನೂರಾಲ್‌ ಬೆಟ್ಟು ಕಜೆ ಎಂಬಲ್ಲಿ ನಡೆದಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಭಾಗಿ (65) ಎಂಬವರು ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಮನೆಯಲ್ಲಿ ಮೃತಪಟ್ಟಿದ್ದರು. ಈ ನಡುವೆ ಭಾಗಿ ಅವರ ಮಗಳು ರೇಖಾ (25) ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗಿದ್ದರು. ಪರಿಚಯದವರೊಬ್ಬರು ರೇಖಾ ಅವರಿಗೆ ಕರೆ ಮಾಡಿ ನಿಮ್ಮ ತಾಯಿಗೆ ಸೌಖ್ಯವಿಲ್ಲ ಮನೆಗೆ ಬಾ ಎಂದು ತಿಳಿಸಿದ್ದಾರೆ. ಮನೆಗೆ ವಾಪಸ್‌ ಬರುತ್ತಿದ್ದ ರೇಖಾ, ಅನಾರೋಗ್ಯದಂದ ಬಳಲುತ್ತಿದ್ದ ತನ್ನ ತಾಯಿ ಮೃತಪಟ್ಟಿರಬೇಕೆಂಬ ಅನುಮಾನದಿಂದ ಮನೆಗೆ ಹೋಗುವ ಮೊದಲೇ ದಾರಿ ಮಧ್ಯೆ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನೇಕಲ್‌ನಲ್ಲಿ 22 ವರ್ಷದ ವಿಲೇಜ್‌ ಅಕೌಂಟೆಂಟ್‌ ನೇಣಿಗೆ ಶರಣು: ಯುವತಿ ಸಾವಿನ ಸುತ್ತ ಅನುಮಾನ

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.