Asianet Suvarna News Asianet Suvarna News

ದೊಡ್ಡ ಡಾನ್ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡಿದ್ದ ಬಿಲ್ಡಪ್ ದಾಸ ಅರೆಸ್ಟ್!

ರೀಲ್ಸ್ ಇನ್ಸಸ್ಟಾಗ್ರಾಂನಲ್ಲಿ ದೊಡ್ಡ ಡಾನ್ ರೀತಿ ಹವಾ ಮಾಡಿದ್ದ ಸಾವಿರಾರು ಫಾಲೋವರ್ಸ್ ಹೊಂದಿದ್ದ ಬಿಲ್ಡಪ್ ದಾಸ, ಇದೀಗ ಬೇರೆಯವರ ಪ್ರಾಪರ್ಟಿ ವಿಚಾರದಲ್ಲಿ ಮೂಗು ತೂರಿಸಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತಿದ್ದಾನೆ. ಯಾರೀತ ಬಿಲ್ಡಪ್ ದಾಸ?

Dasa arrest was showing a buildup on social media in yalahanka at bengaluru rav
Author
First Published Dec 8, 2023, 1:34 PM IST

ಬೆಂಗಳೂರು (ಡಿ.8) ಮೈತುಂಬಾ ಗೋಲ್ಡ್, ತಲೆಮೇಲಿಂದ ಬೆನ್ನಿಗೆ ಇಳಿಬಿದ್ದ ಕೂದಲು, ಸುತ್ತಲೂ ಬಾಡಿಗಾರ್ಡ್ ರೀತಿ ಐದಾರು ಹುಡುಗರು.. ಅಬ್ಬಬ್ಬಾ ಅವನನ್ನ ನೋಡ್ತಿದ್ರೆ ಹಾಲಿವುಡ್ ಬಾಲಿವುಡ್ ಡಾನ್‌ಗಳೇ ಸಪ್ಪೇ ಅನಿಸಿಬಿಡ್ತಾರೆ. ಅವನು ನಡೆದುಹೋಗ್ತಿದ್ರೆ ಬೆಂಗಳೂರಿಗೇ ಇವನೇ ದೊಡ್ಡ ಡಾನ್ ಏನೋ ಅಂದ್ಕೊಬೇಕು ಏರಿಯಾದಲ್ಲಿ ಫುಲ್ ಹವಾ ಎಬ್ಬಿಸಿ ಓಡಾಡ್ಕೊಂಡಿದ್ದ ಬಿಲ್ಡಪ್ ದಾಸ ಇದೀಗ ಯಲಹಂಕ ಪೊಲೀಸರ ಮುಂದೆ ಕೈಕಟ್ಟಿಸಿಕೊಂಡು ಕುಕ್ಕರುಗಾಲಿನಲ್ಲಿ ಕುಂತವ್ನೆ! 

ಹುಬ್ಬಳ್ಳಿ: ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ: ಎಸ್‌ಬಿಐ ಬ್ಯಾಂಕ್ ವಿರುದ್ಧ FIR

ಯಾರು ಈ ಬಿಲ್ಡಪ್ ದಾಸ?

ಅವನದೋ, ಅವರಪ್ಪ ಗಳಿಸಿದ ಆಸ್ತಿನೋ ಒಟ್ಟಿನಲ್ಲಿ ಅವನು ಹಾಕೋ ಚೈನು, ವಾಚ್ ಉಂಗುರ ಎಲ್ಲವೂ ಬಂಗಾರದ್ದೇ. ಕೊರಳಿಗೆ ತೆಂಗಿನನಾರಿನ ಹಗ್ಗದ ಗಾತ್ರದಷ್ಟು ದಪ್ಪಗೆ ಇರುವ ಬಂಗಾರದ ಚೈನುಗಳು, ಹಾಕಿಕೊಂಡು ಓಡಾಡ್ತಿದ್ದ ದಾಸ. ಅವನನ್ನು ನೋಡ್ತಿದ್ರೆ ಬದುಕಿದ್ರೆ ಹಿಂಗ ಬದುಕಬೇಕಪ್ಪ ಅನಿಸಬೇಕು ಅಷ್ಟು ಐಷಾರಾಮಿ ಜೀವ್ನ ಅವಂದು. ಇಂತಹ ಬಿಲ್ಡಪ್ ದಾಸನಿಗೆ ಅವನ ಸ್ಟೇಟಸ್ ತಕ್ಕಂತೆ ದೊಡ್ಡ ದೊಡ್ಡವರ ಜೊತೆ ಫೋಟೊದಲ್ಲಿ ಕಾಣಿಸಿಕೊಳ್ಳೋದು ಅವನ್ನು ರೀಲ್ಸ್  ಇನ್ಸ್ಟಾಗ್ರಾಮ್‌ಗೆ ಹಾಕಿ ದೊಡ್ಡಮಟ್ಟ ಫಾಲೋವರ್ಸ್ ಹೊಂದಿದ್ದ ಆಸಾಮಿ, ನೋಡೋಕೂ ಆಜಾನುಬಾಹು ದೇಹ. ಅವನ ಸ್ಟೈಲ್, ಹವಾ ನೋಡಿನೇ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಫೋಲೋವರ್ಸ್ ಗಳಿಸಿದ್ದ ಬಿಲ್ಡಪ್ ದಾಸ್. ಹಿಂಬಾಲಕರು ಅಣ್ಣಾ, ಡಾನ್ ಅನ್ನೋದು ಕೇಳಿನೇ ಉಬ್ಬಿ ಹೋಗಿದ್ದ ಆಗಲೇ ಎಡವಟ್ಟು ಮಾಡಿಕೊಂಡು ಪೊಲೀಸರ ಮುಂದೆ ಮಂಡಿಯೂರುವಂತಾಗಿದ್ದು. 

ಸಾವರ್ಕರ್ ಫೋಟೊ ತೆಗೆಯಿರಿ ನೋಡೋಣ; ಸರ್ಕಾರಕ್ಕೆ ಚಾಲೆಂಜ್ ಮಾಡಿದ ಛಲವಾದಿ ನಾರಾಯಣಸ್ವಾಮಿ!

ತನ್ನನ್ನು ಯಾರೂ ಏನೂ ಮಾಡೋದಿಲ್ಲ ಎಂಬ ಹುಂಬುತನ ತೋರಿಸಿ ಬೇರೆಯವರ ಪ್ರಾಪರ್ಟಿ ಜಗಳದಲ್ಲಿ ತನ್ನ ಕಡೆಯ ಯುವಕರನ್ನು ಕಳಿಸಿಕೊಟ್ಟಿದ್ದ ದಾಸ. ಪ್ರಾಪರ್ಟಿ ವಿಚಾರವಾಗಿ ಮಹಿಳೆ ಓರ್ವ ವ್ಯಕ್ತಿ ನಡುವೆ ಜಗಳವಾಗಿತ್ತು. ಆ ವ್ಯಕ್ತಿ ಬಿಲ್ಡಪ್ ದಾಸನ ಸಂಪರ್ಕಿಸಿದ್ದ ಬಳಿಕ ವ್ಯಕ್ತಿಯ ಪರವಾಗಿ ಹೋಗಿದ್ದ ಬಿಲ್ಡಪ್ ದಾಸನ ಹುಡುಗರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆ. ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದ ಪೊಲೀಸರು. ಹುಡುಗರನ್ನು ಕಳಿಸಿರುವುದಾಗಿ ಗೊತ್ತಾಗಿ ಬಿಲ್ಡಪ್ ದಾಸನ ಬಂಧಿಸಿದ ಯಲಹಂಕ ಪೊಲಿಸರು.

Follow Us:
Download App:
  • android
  • ios