Asianet Suvarna News Asianet Suvarna News

ಸಾವರ್ಕರ್ ಫೋಟೊ ತೆಗೆಯಿರಿ ನೋಡೋಣ; ಸರ್ಕಾರಕ್ಕೆ ಚಾಲೆಂಜ್ ಮಾಡಿದ ಛಲವಾದಿ ನಾರಾಯಣಸ್ವಾಮಿ!

ತೀವ್ರ ಬರಗಾಲಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆ ಮಾತನಾಡದೆ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ನಾಯಕರು ಸಾವರ್ಕರ್ ಫೋಟೊ ತೆಗೆಯುವ ಮಾತಾಡುತ್ತಿದ್ದಾರೆ. ನಾನು ಸರ್ಕಾರಕ್ಕೆ ಚಾಲೆಂಜ್ ಮಾಡುತ್ತೇನೆ, ಮಂತ್ರಿಗಳಿಗೆ ಚಾಲೆಂಜ್ ಮಾಡ್ತೇನೆ ಸಾವರ್ಕರ್ ಫೋಟೊ ತೆಗೆಯಿರಿ ನೋಡೋಣ ಎಂದು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದರು

Savarkar photo removal issue MLC Chalavadi Narayanaswamy outraged agains congress government at belagavi rav
Author
First Published Dec 8, 2023, 12:21 PM IST

ವಿಧಾನಪರಿಷತ್ (ಡಿ.8): ತೀವ್ರ ಬರಗಾಲಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆ ಮಾತನಾಡದೆ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ನಾಯಕರು ಸಾವರ್ಕರ್ ಫೋಟೊ ತೆಗೆಯುವ ಮಾತಾಡುತ್ತಿದ್ದಾರೆ. ನಾನು ಸರ್ಕಾರಕ್ಕೆ ಚಾಲೆಂಜ್ ಮಾಡುತ್ತೇನೆ, ಮಂತ್ರಿಗಳಿಗೆ ಚಾಲೆಂಜ್ ಮಾಡ್ತೇನೆ ಸಾವರ್ಕರ್ ಫೋಟೊ ತೆಗೆಯಿರಿ ನೋಡೋಣ ಎಂದು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದರು.

ರೈತರ ಪರಿಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರಿಗೆ ಬಿಡಿ ದನಕರುಗಳಿಗೆ ಮೇವು ನೀರು ಸಹ ಸಿಗುತ್ತಿಲ್ಲ. ರಾಜ್ಯದ ಜನರು ಇಂಥ ಪರಿಸ್ಥಿತಿಯಲ್ಲಿರುವಾಗ ರೈತರ ಬರಪರಿಹಾರದ ಚರ್ಚೆ ಮಾಡುವುದು ಬಿಟ್ಟು ತೆಲಂಗಾಣ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಸರ್ಕಾರ ಕರ್ನಾಟಕದ್ದು, ಸೇವೆ ಮಾತ್ರ ತೆಲಂಗಾಣದ್ದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ಶಾಸಕರೇ ಗರಂ! ಅಶೋಕ್‌ ಕಂಡು ಎಸ್ ಆರ್ ವಿಶ್ವನಾಥ ‘ಅಡ್ಜಸ್ಟ್‌ಮೆಂಟ್‌ ಗಿರಾಕಿ’ ಅಂದಿದ್ದೇಕೆ?

ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ:

ಕೆಟ್ಟ ಪರಂಪರೆಗೆ ನಾನು ನಾಂದಿ‌ಹಾಡಲ್ಲ ಎಂದು ಸ್ಪೀಕರ್ ಹೇಳ್ತಾರೆ. ಆದರೆ ಅವಕಾಶ ಕೊಟ್ಟರೆ ನಾನೇ ತೆಗೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಸಾವರ್ಕರ್ ಫೋಟೋ ತೆಗೆಯುವ ನಿಮ್ಮ ಮನಸ್ಥಿತಿ ಎಂತದ್ದು?  ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಎಣ್ಣೆ ತೆಗೆದರಲ್ಲಾ,‌ಅದರ ಒಂದು ಶೇಕಡಾ ಸಮಾನಲ್ಲ ನೀವು. ಸವಾರ್ಕರ್ ಬಗ್ಗೆ ಹಗುರವಾಗಿ ಮಾತಾಡ್ತಿರಲ್ಲ, ಸಾರ್ವರ್ಕರ್ ಎಂತ ದೇಶ ಭಕ್ತ ಅನ್ನೋದು ಗೊತ್ತಿದ್ಯಾ? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು. ಮುಂದುವರಿದು, ನಾನು ಸರ್ಕಾರಕ್ಕೂ ಚಾಲೆಂಜ್ ಮಾಡ್ತೇನೆ. ಮಂತ್ರಿಗಳಿಗೂ ಚಾಲೆಂಜ್ ಮಾಡ್ತೇನೆ ನೀವು ಸಾವರ್ಕರ್ ಫೋಟೊ ತೆಗೆಯಿರಿ ನೋಡೋಣ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.

ಪ್ರಿಯಾಂಕ್ ಬದಲು ಪ್ರಿಯಾಂಕಾ ಎಂದ ಆರ್ ಆಶೋಕ್ ಎಡವಟ್ಟು; ನಾನು ಪ್ರಿಯಾಂಕ್ ಎಂದ ಖರ್ಗೆ

Follow Us:
Download App:
  • android
  • ios