Asianet Suvarna News Asianet Suvarna News

ಡಿಲೀಟೆಡ್ ಫೋಟೋ ರಿಟ್ರೈವ್: ರಕ್ತಸಿಕ್ತ ದೇಹದಲ್ಲಿ ಕೈಮುಗಿದು ಪ್ರಾಣಭಿಕ್ಷೆ ಕೇಳಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್!

ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಡಿಲೀಟ್ ಮಾಡಿದ್ದ ಫೋಟೋಗಳು ರಿಟ್ರೈವ್ ಆಗಿವೆ. 

Darshan and gang deleted Renukaswamy murder case Photos have been retrieved sat
Author
First Published Aug 21, 2024, 8:59 PM IST | Last Updated Aug 21, 2024, 8:59 PM IST

ಬೆಂಗಳೂರು (ಆ.21): ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಭೀಕರವಾಗಿ ಥಳಿಸಿ ಕೊಲೆ ಮಾಡುವಾಗ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತವಾಗಿ ಖುಷಿ ಪಟ್ಟಿದ್ದರು. ನಂತರ, ಫೋಟೋಗಳನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶವನ್ನೂ ಮಾಡಿದ್ದರು. ಆದರೆ, ಈಗ ಮೊಬೈಲ್‌ನಿಂದ ಡಿಲೀಟ್ ಮಾಡಿದ್ದ ರೇಣುಕಾಸ್ವಾಮಿ ಕೊಲೆ ಸಂಬಂಧಿತ ನಾಲ್ಕು ಫೋಟೋಗಳು ರಿಟ್ರೈವ್ ಆಗಿವೆ.

ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಕಾರಣಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಥಳಿಸಿ ಕೊಲೆಗೈದು ಬೀದಿ ಹೆಣವಾಗಿ ಬೀಸಾಡಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದು ವಿಕೃತವಾಗಿ ಖುಷಿ ಅನುಭವಿಸಿದ್ದ ದರ್ಶನ್‌ ಅಂಡ್ ಗ್ಯಾಂಗ್‌ನಿಂದ ಸಾಕ್ಷಿ ಸಿಗದಂತೆ ಎಲ್ಲವನ್ನೂ ಡಿಲೀಟ್ ಮಾಡಿದ್ದರು. ನಂತರ, ಕೊಲೆ ಕೇಸಿನಲ್ಲಿ ಪೊಲೀಸರುಇಗೆ ಸರೆಂಡರ್ ಆಗಿ ಜೈಲಿಗೆ ಹೋಗುವಂತೆ ದರ್ಶನ್‌ನ ನಾಲ್ವರು ಅಭಿಮಾನಿಗಳಿಗೆ ಹಣ ಕೊಟ್ಟು ಕಳುಹಿಸಿದ್ದರು. ಅದರೆ, ಪಾಪದ ಕೊಡ ತುಂಬಿದ ನಂತರ ದೇವರೂ ಕೂಡ ಕೈ ಹಿಡಿಯಲಾರ ಎಂಬಂತೆ ಕೊಲೆ ಆರೋಪಿಗಳು ಪೊಲೀಸರು ಸಿಕ್ಕಿ ಬಿದ್ದಿದ್ದಾರೆ.

ಜಾಮೀನಿಗಾಗಿ ಪವಿತ್ರಾ ಗೌಡ ಅರ್ಜಿ ಸಲ್ಲಿಕೆ: ದರ್ಶನ್​ ಅರ್ಜಿ ಯಾವಾಗ?

ಇನ್ನು ಪೊಲೀಸರಿಗೆ ಸರೆಂಡರ್ ಆಗಿದ್ದ ದರ್ಶನ್ ಅಭಿಮಾನಿಗಳೇ ನಟ ದರ್ಶನ್ ಹಾಗೂ ಆತನೊಂದಿಗೆ ಇದ್ದ 13 ಜನರ ಹೆಸರನ್ನೂ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಆದರೆ, ಕೊಲೆ ಕೇಸಿನಲ್ಲಿ ಪೊಲೀಸರು ಎಲ್ಲ ಸಾಕ್ಷಿಗಳನ್ನು ಸಂಗ್ರಹ ಮಾಡಿಕೊಂಡಿದ್ದರೂ, ಹೆಚ್ಚುವರಿ ಸಾಕ್ಷಿಗಳಿಗಾಗಿ ನಟ ದರ್ಶನ್ ಅವರ ಐಫೋನ್, ಪ್ರದೂಶ್ ಹಾಗೂ ಮತ್ತೊಬ್ಬ ಆರೋಪಿಯ ಫೋನ್‌ಗಳನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿ ಡಿಲೀಟ್ ಮಾಡಲಾದ ಫೋಟೋಗಳನ್ನು ರಿಟ್ರೈವ್ ಮಾಡಲು ಮನವಿ ಮಾಡಲಾಗಿತ್ತು. ಈಗ ಪ್ರದೂಶ್ ಸೇರಿದಂತೆ ಮತ್ತೊಬ್ಬ ಆರೋಪಿಯ ಮೊಬೈಲ್‌ನಲ್ಲಿ ಡಿಲೀಟ್ ಮಾಡಲಾಗಿದ್ದ ನಾಲ್ಕು ಪೋಟೋಗಳು ಸಿಎಫ್‌ಎಸ್‌ಎಲ್‌ನಲ್ಲಿ ರಿಟ್ರೈವ್ ಆಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಜೈಲಿನಲ್ಲಿದ್ದರೂ ನಟಿ ಪವಿತ್ರಾ ಗೌಡ ಧಿಮಾಕು ಕಮ್ಮಿಯಾಗಿಲ್ಲ!

ರಕ್ತಸಿಕ್ತ ದೇಹದಲ್ಲಿ ಕೈ ಮುಗಿದರೂ ಕರುಣೆ ತೋರದ ಪಾಪಿಗಳು: ನಟಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಕೋಪಕ್ಕೆ ಕಂಠಪೂರ್ತಿ ಕುಡಿದ ನಟ ದರ್ಶನ್ ಅಂಡ್‌ ಗ್ಯಾಂಗಿನ ಸದಸ್ಯರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಸಿ ಬೆಂಗಳೂರಿನ ಶೆಡ್‌ನಲ್ಲಿ ಕೂಡಿಹಾಕಿ ಭೀಕರವಾಗಿ ಥಳಿಸಿದ್ದಾರೆ. ಇನ್ನು ಭೀಕರವಾಗಿ ಥಳಿಸುವ ಹೊಡೆತಕ್ಕೆ ಮೊದಲೇ ಸಣಕಲು ಕಟ್ಟಿಗೆಯಂತಿದ್ದ ರೇಣುಕಾಸ್ವಾಮಿ ಥರಗುಟ್ಟಿ ಹೋಗಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಪಾಪಿಗಳು ಮನಸೋ ಇಚ್ಛೆ ಕಬ್ಬಿಣದ ರಾಡ್‌ಗಳಿಂದ ಹೊಡೆದುಮ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದಿದ್ದಾರೆ. ಆಗ ರೇಣುಕಾಸ್ವಾಮಿ ನನಗೆ ಕುಟುಂಬವಿದೆ, ಹೆಂಡತಿ ಗರ್ಭಿಣಿಯಾಗಿದ್ದಾಳೆ, ನನ್ನನ್ನು ಬಿಟ್ಟುಬಿಡಿ ಎಂದು ರಕ್ತಸಿಕ್ತ ದೇಹದಲ್ಲಿಯೇ ಕೈ ಮುಗಿದು ಪ್ರಾಣಭಿಕ್ಷೆ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೂ, ಕರುಣೆ ತೋರದೇ ಆತನ ವೃಷಣಕ್ಕೆ ಒದ್ದು, ಆತನನ್ನು ಗೋಡೆಗೆ ಹೊಡೆದು ಪ್ರಾಣವನ್ನೇ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios