Asianet Suvarna News Asianet Suvarna News

'ದಲಿತರು ಕುದುರೆ ಏರೋ ಹಾಗಿಲ್ಲ..' ವರನಿಗೆ ಹಲ್ಲೆ ಮಾಡಿ ಕುದುರೆಯಿಂದ ಕೆಳಗಿಳಿಸಿದ ಮೇಲ್ಜಾತಿ ಯುವಕರು!

ಇನ್ನೇನು ಮದುವೆಯ ಮರವಣಿಗೆ ಹೊರಡಬೇಕು ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವೊಂದಿಷ್ಟು ಜನ ವರನಿಗೆ ಹೊಡೆಯಲು ಆರಂಭಿಸುತ್ತಿದ್ದಾರೆ. ಬಳಿಕ ಕುದುರೆಯಿಂದ ಕೆಳಗಿಳಿಯಲು ಹೇಳುತ್ತಾರೆ. ವರ ದಲಿತನಾಗಿದ್ದೇ ಇದಕ್ಕೆ ಕಾರಣ.
 

Dalit groom forced off horse by upper castes men in Uttara Pradesh Agra san
Author
First Published May 11, 2023, 6:38 PM IST

ನವದೆಹಲಿ (ಮೇ.11): ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಿದ ಕೆಲ ವ್ಯಕ್ತಿಗಳು ರಾಡ್‌ಗಳು ಹಾಗೂ ಸ್ಟಿಕ್‌ಗಳಿಂದ ಕುದುರೆಯ ಮೇಲೆ ಕುಳಿತಿದ್ದ ವರನ ಮೇಲೆ ಹಲ್ಲೆ ನಡೆಸಿದ್ದಾರೆ. ದಲಿತ ವ್ಯಕ್ತಿಯಾಗಿದ್ದ ಕಾರಣಕ್ಕೆ ವರ ಕುದುರೆಯ ಮೇಲೆ ಮೆರವಣಿಗೆ ಹೋಗುವಂತಿಲ್ಲ ಎಂದು ಈ ವೇಳೆ ಹೇಳಲಾಗಿದೆ. ಮೇ 4 ರಂದು ಸೋಹಲ್ಲಾ ಜಾತವ್ ಬಸ್ತಿಯಲ್ಲಿರುವ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, 24 ವರ್ಷದ ವರನ ಮೇಲೆ ಕನಿಷ್ಠ 25 "ಮೇಲ್ಜಾತಿ" ಪುರುಷರು ಹಲ್ಲೆ ನಡೆಸಿದ್ದಾರೆ. ವರನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಮದುವೆ ಮೆರವಣಿಗೆಯಲ್ಲಿ ಹಾಜರಿದ್ದ ಮಹಿಳಾ ಅತಿಥಿಗಳಿಗೆ ಕಿರುಕುಳವನ್ನೂ ನೀಡಿದ್ದಾರೆ. ವರನ ಅತ್ತೆ ಗೀತಾದೇವಿ ನೀಡಿದ ದೂರಿನ ಆಧಾರದ ಮೇಲೆ ಮೇ 9 ರಂದು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. “ನನ್ನ ಅಳಿಯ ಮತ್ತು ಅವನೊಂದಿಗೆ ಬಂದ ಅತಿಥಿಗಳು ಮದುವೆಯ ಸ್ಥಳಕ್ಕೆ ಪ್ರವೇಶಿಸಿದ ಕೂಡಲೇ, ಅವರ ಮೇಲೆ ಕನಿಷ್ಠ 25 ಜನರು, ಮುಖ್ಯವಾಗಿ ಠಾಕೂರ್‌ಗಳು ದಾಳಿ ಮಾಡಿದರು. ಅವರು ನನ್ನ ಅಳಿಯನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ‘ನಮ್ಮ ಹಳ್ಳಿಯಲ್ಲಿ ದಲಿತರ ಮದುವೆಗಳಲ್ಲಿ ಕುದುರೆ ಸವಾರಿ ಮಾಡುವುದಿಲ್ಲ, ನಿಮಗೆ ಇದನ್ನು ಮಾಡಲು ಎಷ್ಟು ಧೈರ್ಯ?’ ಎಂದು ಪ್ರಶ್ನೆ ಮಾಡಿದ್ದಾರೆ. ಅದಲ್ಲದೆ, ಮದುವೆ ವಿದ್ಯುತ್‌ ಸರಬರಾಜಿಗೂ ಅಡ್ಡಿಪಡಿಸಿದ್ದಾರೆ' ಎಂದು ವರದಿಯಾಗಿದೆ.

ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ ವರನ ಸಹೋದರ ಮನೀಶ್ ಕುಮಾರ್, ಅವರನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಗುಂಪು ದೊಣ್ಣೆಗಳಿಂದ ಥಳಿಸಿತು ಎಂದು ಹೇಳಿದರು. "ನಮ್ಮ ಕುಟುಂಬದವರೊಬ್ಬರು ಪೊಲೀಸರಿಗೆ ಕರೆ ಮಾಡಿದ ಬಳಿಕ ಸ್ಥಳಕ್ಕೆ ಬಂದ ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು" ಎಂದು ಅವರು ಹೇಳಿದರು.

ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್ ಮತ್ತು ಕುನಾಲ್ ಠಾಕೂರ್ ಮತ್ತು ಇತರ ಹಲವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ನೀರಜ್ ಶರ್ಮಾ ತಿಳಿಸಿದ್ದಾರೆ.

ಅತ್ಯಾಚಾರವೆಸಗಲು ಬಂದ ಧರ್ಮಗುರು: ಮರ್ಮಾಂಗ ಕತ್ತರಿಸಿದ ಮಹಿಳೆ

“ಇಲ್ಲಿಯವರೆಗೆ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಪತ್ತೆಗೆ ದಾಳಿ ನಡೆಸಲಾಗುತ್ತಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ, ”ಎಂದು ವೃತ್ತ ಅಧಿಕಾರಿ ಅರ್ಚನಾ ಸಿಂಗ್ ಅವರನ್ನು ಉಲ್ಲೇಖಿಸಿದ ವರದಿ ಮಾಡಲಾಗಿದೆ.

ತನ್ನ ಮರ್ಮಾಂಗವನ್ನೇ ಕೊಯ್ದುಕೊಂಡ ಭೂಪ!

Follow Us:
Download App:
  • android
  • ios