ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ ವಿಡಿಯೋ ವೈರಲ್, ಪುತ್ರ ಆತ್ಮಹತ್ಯೆ!

ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ ವಿಡಿಯೋ ವೈರಲ್ ಹಿನ್ನೆಲೆ ಮನನೊಂದ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಿದೆ.

Dakshina Kannada youth self death after  father obscene  video goes viral on social media karnataka news gow

ಮಂಗಳೂರು (ಜು.4): ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ ವಿಡಿಯೋ ವೈರಲ್ ಹಿನ್ನೆಲೆ ಮನನೊಂದ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನಲ್ಲಿ ನಡೆದಿದೆ.

ವಿಡಿಯೋ ವೈರಲ್ ನಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತನ್ನ ತಂದೆ ಪರ ಸ್ತ್ರೀ ಜೊತೆ ದೈಹಿಕ ಸಂಪರ್ಕ ಮಾಡುವಾಗ ಸಿಕ್ಕಿ ಬಿದ್ದಿದ್ದರು. ಸ್ಥಳೀಯ ಯುವಕನೊಬ್ಬ ಇಬ್ಬರ ದೈಹಿಕ ಸಂಪರ್ಕದ ವಿಡಿಯೋ ಮಾಡಿದ್ದ.‌ ಆ ಬಳಿಕ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿ ಬಿಟ್ಟಿದ್ದ. ಇದರಿಂದ ಇಳಿ ವಯಸ್ಸಿನ ಮಹಿಳೆ ಮತ್ತು ಯುವಕನ ತಂದೆ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ತಂದೆಯ ಜೊತೆಗೂ ಜಗಳ ಮಾಡಿದ್ದ ಯುವಕ ಕುಟುಂಬದ ಮರ್ಯಾದೆ ಬಗ್ಗೆ ಬೇಸರ ಮಾಡಿಕೊಂಡಿದ್ದ ಎನ್ನಲಾಗಿದೆ.

ಹಾಸನದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ!

ಅಲ್ಲದೇ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿ ತೀವ್ರ ಮುಜುಗರ ಅನುಭವಿಸಿದ್ದ ಯುವಕ, ಇದೀಗ ಇದರಿಂದ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ ವಿಡಿಯೋ ಮಾಡಿ ವೈರಲ್ ಮಾಡಿದ ಆರೋಪಿ ಜಯಕುಮಾರ್ ಎಂಬಾತನ ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. 

ವೈರಲ್ ಹುಚ್ಚಿಗೆ ಬಲಿಯಾದ ಯುವಕ!
ಇನ್ನು ಈ ಯುವಕನ ಆತ್ಮಹತ್ಯೆಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಾಗಿರೋ ವೈರಲ್ ಹುಚ್ಚು ಕೂಡ ಒಂದು ಕಾರಣ ಅಂತ ಹೇಳಲಾಗ್ತಿದೆ. ಯುವಕನ ತಂದೆ ಮತ್ತೊಬ್ಬ ಮಹಿಳೆ ಜೊತೆ ಮೂಡಬಿದಿರೆಯ ನಿರ್ಜನ ಪ್ರದೇಶದಲ್ಲಿ ದೈಹಿಕ ಸಂಪರ್ಕದಲ್ಲಿ ತೊಡಗಿದ್ದ ವೇಳೆ ಸ್ಥಳೀಯನೊಬ್ಬ ಅದನ್ನ ವಿಡಿಯೋ ಮಾಡ್ತಾನೆ. ಆದರೆ ವಿಡಿಯೋ ಮಾಡಿದ್ದಲ್ಲದೇ ಅವರಿಬ್ಬರ ಮುಖ ಕಾಣುವ ಹಾಗಿದ್ದ ಆ ವಿಡಿಯೋವನ್ನ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದಾನೆ.

ಸಿಎಂ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ, ಸೂಜಿ ಚುಚ್ಚಿದ್ರು ಕಾಸು, 

ಇಷ್ಟಾಗಿದ್ದೇ ತಡ ಕಳೆದ ನಾಲ್ಕು ದಿನಗಳ ಅಂತರದಲ್ಲಿ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕರಾವಳಿಯಾದ್ಯಂತ ಈ ವಿಡಿಯೋ ಹರಿದಾಡಿದೆ. ಇದರಿಂದ ಆ ವ್ಯಕ್ತಿಯ ಪರಿಚಯಸ್ಥರು ಆಡಿಕೊಂಡು ನಕ್ಕಿದ್ದಾರೆ. ತಂದೆ ಮಾಡಿದ ತಪ್ಪಿಗೆ ಮಕ್ಕಳೂ ಅವಮಾನ ಎದುರಿಸಿದ್ದಾರೆ. ಇದೇ ಕಾರಣದಿಂದ ಯುವಕ ತೀವ್ರ ಮನನೊಂದಿದ್ದ ಎನ್ನಲಾಗಿದೆ. ಒಟ್ಟಾರೆ ಕೆಲವರ ವೈರಲ್ ಹುಚ್ಚಿಗೆ ಅಮಾಯಕ ಜೀವವೊಂದು ಬಲಿಯಾಗಿದೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios