ಮಹಿಳೆಗೆ 1.71 ಲಕ್ಷ ವಂಚಿಸಿದ ಸೈಬರ್‌ ಕಳ್ಳರು| ಬೆಂಗಳೂರಿನಲ್ಲಿ ನಡೆದ ಘಟನೆ| ಸಂತ್ರಸ್ತೆಗೆ ಫೇಸ್‌ಬುಕ್‌ ಮೂಲಕ ವಿಲಿಯಂ ಸ್ಟೀಫನ್‌ ಎಂಬಾತನ ಪರಿಚಯ| ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತೆ|

ಬೆಂಗಳೂರು(ಜು.17): ವಿದೇಶಿಯರಿಗೆ ವೈದ್ಯಕೀಯ ನೆರವು ಒದಗಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಸೈಬರ್‌ ಕಳ್ಳರು 1.71 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಪದ್ಮನಾಭ ನಗರದಲ್ಲಿ ನೆಲೆಸಿರುವ ಮಹಿಳೆ ಮೋಸ ಹೋಗಿದ್ದಾರೆ. ದಕ್ಷಿಣ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಣ: ವಿದೇಶಿಗರ ಸೋಗಿನಲ್ಲಿ ಬಂದು 18 ಸಾವಿರ ಎಗರಿಸಿದ ಚಾಲಾಕಿಗಳು..!

ಕೆಲ ದಿನಗಳ ಹಿಂದೆ ಸಂತ್ರಸ್ತೆಗೆ ಫೇಸ್‌ಬುಕ್‌ ಮೂಲಕ ವಿಲಿಯಂ ಸ್ಟೀಫನ್‌ ಎಂಬಾತನ ಪರಿಚಯವಾಗಿದೆ. ಆಗ ನನ್ನ ಮಗಳ ಚಿಕಿತ್ಸೆ ಸಲುವಾಗಿ ಜರ್ಮನಿಯಿಂದ ಭಾರತಕ್ಕೆ ಬರುವುದಾಗಿ ಆತ ತಿಳಿಸಿದ್ದ. ಇದಾದ ಬಳಿಕ ಜು.13ರಂದು ದೂರುದಾರರಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ, ತಾನು ದೆಹಲಿ ವಿಮಾನ ನಿಲ್ದಾಣದಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ. ಜರ್ಮನಿಯಿಂದ ಬಂದಿರುವ ವೃದ್ಧ ಹಾಗೂ ಒಂದು ಹೆಣ್ಣು ಮಗು ವಿಮಾನ ನಿಲ್ದಾಣದಲ್ಲಿದ್ದಾರೆ. ಆದರೆ ಅವರ ಬಳಿ ಯೂರೋ ಕರೆನ್ಸಿ ಇದ್ದು, ಭಾರತದ ಕರೆನ್ಸಿ ಇಲ್ಲ. ಹಾಗಾಗಿ ನೀವು ಅವರಿಗೆ ಸಹಾಯ ಮಾಡಿ. ಕಸ್ಟಮ್ಸ್‌ ಶುಲ್ಕವನ್ನು ಭರಿಸುವಂತೆ ತಿಳಿಸಿದ್ದ ಎಂದು ಮಹಿಳೆ ದೂರಿದ್ದಾರೆ.