ಬೆಂಗಳೂರು(ಜು.19): ಕೊರೋನಾ ಸೋಂಕಿತರ ಸೇವೆಗೆ ಉಡುಗೊರೆ ನೀಡುವ ನೆಪದಲ್ಲಿ ವೈದ್ಯರೊಬ್ಬರಿಗೆ ಸೈಬರ್‌ ಕಳ್ಳರು ವಂಚಿಸಿದ್ದಾರೆ.

ವೈಟ್‌ಫೀಲ್ಡ್‌ ಸಮೀಪದ ಬ್ರಿಗೇಡ್‌ ಲೇಕ್‌ ಫ್ರಾಂಟ್‌ ಅಪಾರ್ಟ್‌ಮೆಂಟ್‌ ನಿವಾಸಿ ವೈದ್ಯ ಮೋಸ ಹೋಗಿದ್ದು, ವಿದೇಶದಿಂದ ಉಡುಗೊರೆ ರೂಪದಲ್ಲಿ ಆರೋಗ್ಯ ಸಂರಕ್ಷಕಗಳು ಹಾಗೂ ನಗದು ಕಳುಹಿಸುವುದಾಗಿ ಹೇಳಿ .25 ಸಾವಿರವನ್ನು ದುಷ್ಕರ್ಮಿಗಳು ಟೋಪಿ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ..!

ಇತ್ತೀಚಿಗೆ ಲಿಂಕಡ್‌ ಇನ್‌ ಮೂಲಕ ವೈದ್ಯರಿಗೆ ಮಹಿಳೆಯೊಬ್ಬ ಪರಿಚಯವಾಗಿದೆ. ಚಾರಿಟಿಯಿಂದ 200 ಕೆ.ಜಿ. ಎನ್‌​-95 ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಇಮ್ಯುನಿಟಿ ಮಾತ್ರೆಗಳ ಜೊತೆಗೆ ಕೆಲವು ವೈಯಕ್ತಿಕ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದಳು. ಈ ವಸ್ತುಗಳನ್ನು ಪಡೆದುಕೊಳ್ಳು ಕಸ್ಟಮ್‌ ಶುಲ್ಕ .25 ಸಾವಿರ ಭರಿಸಬೇಕು ಎಂದಿತ್ತು. ಅಂತೆಯೇ ಶುಲ್ಕವನ್ನು ವೈದ್ಯರು ಪಾವತಿಸಿದ್ದರು. 

ಇದಾದ ನಂತರ ಕೊರಿಯರ್‌ ಬಾಯ್‌ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ, ಮತ್ತೆ ವೈದ್ಯರಿಗೆ ಕರೆ ಮಾಡಿ ನಿಮಗೆ ಬಂದಿರುವ ಉಡುಗೊರೆ ಹಣ ರೂಪದಲ್ಲಿದೆ. ಹಾಗಾಗಿ ನೀವು ಮನಿ ಲಾಂಡರಿಂಗ್‌ ಸರ್ಟಿಫಿಕೇಟ್‌ ತೆಗೆದುಕೊಳ್ಳಬೇಕು. ಇದಕ್ಕೆ ನೀವು 98,500 ಪಾವತಿಸಬೇಕೆಂದಿದ್ದ. ಈ ಮಾತಿನಿಂದ ಅನುಮಾನಗೊಂಡ ವೈದ್ಯರು, ತಮಗೆ ವಂಚಿಸಿದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.