ಕುಡಿತದ ಚಟದಿಂದ ಎರಡನೇ ಹೆಂಡತಿಯನ್ನು ಕೊಲೆಗೈದ ಕ್ರೂರಿ

ಕುಡಿತಕ್ಕೆ ದಾಸನಾದ ವ್ಯಕ್ತಿಯೊಬ್ಬ ತನ್ನ ಮೈಮೇಲೆ ಪರಿವಿಲ್ಲದೇ ತನ್ನ ಎರಡನೇ ಹೆಂಡತಿಯನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಆರೋಪಿ ತನ್ನ ಮೊದಲ ಹೆಂಡತಿಯನ್ನೂ ಕೊಲೆ ಮಾಡಿ ಜೈಲು ವಾಸ ಅನುಭವಿಸಿ ಬಂದಿದ್ದರೂ ಪಾಠ ಕಲಿತಿರಲಿಲ್ಲ.

Cruel man killed his second wife due to alcoholism

ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್

ರಾಮನಗರ (ನ.22): ಅವರಿಬ್ಬರು ಎರಡು ವರ್ಷಗಳ ಕೆಳಗೆ ವಿವಾಹವಾಗಿ ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಕ್ರೂರಿ ಪತಿ ಕುಡಿತದ ಚಟಕ್ಕೆ ದಾಸನಾಗಿದ್ದ. ಪ್ರತಿನಿತ್ಯ ಪತ್ನಿ ಜೊತೆ ಜಗಳವಾಡುತ್ತಿದ್ದ. ನೆನ್ನೆ ರಾತ್ರಿ ಅದು ವಿಕೋಪಕ್ಕೆ ತಿರುತ್ತಿತ್ತು. ಹೀಗಾಗಿ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಅಮ್ಮನಪುರ ಗ್ರಾಮದ (Ammanapura Village) ಬಳಿ ನಡೆದಿದೆ. ಭದ್ರಮ್ಮ(40) ಮೃತ ಮಹಿಳೆ. ಇನ್ನು ಬೋರಯ್ಯ(53) ಎಂಬ ಕ್ರೂರಿ ಕೊಲೆಗೈದ ವ್ಯಕ್ತಿ. ಅಂದಹಾಗೆ ಬೋರಯ್ಯ ಹಾಗೂ ಭದ್ರಮ್ಮ ಕಳೆದ ಎರಡು ವರ್ಷದ ಕೆಳಗೆ ವಿವಾಹವಾಗಿದ್ದರು. ಭದ್ರಮ್ಮಳಿಗೆ ಬೋರಯ್ಯ ನಾಲ್ಕನೇ ಗಂಡ. ಇನ್ನು ಬೋರಯ್ಯನಿಗೆ ಭದ್ರಮ್ಮ ಎರಡನೇ ಹೆಂಡತಿ (Second wife). ಹೀಗಾಗಿ ಇಬ್ಬರು ವಿವಾಹವಾಗಿ ರಾಮನಗರ ತಾಲೂಕಿನ ಅಮ್ಮನಪುರ ಗ್ರಾಮದ ಬಳಿಯ ಆನಂದ್ ನಾಯ್ಕ್ ಎಂಬುವವರ ತೋಟವೊಂದರಲ್ಲಿ ಚಿಕ್ಕದಾದ ಶೆಡ್ ಮಾಡಿಕೊಂಡು ವಾಸವಾಗಿದ್ದರು. ಇಬ್ಬರು ಕೂಲಿ ಕೆಲಸಕ್ಕೆ ಹೋಗಿ ಬದುಕು ಸಾಗಿಸುತ್ತಿದ್ದವರು.

ದೊಣ್ಣೆಯಿಂದ ಹೊಡೆದು ಕೊಲೆ: ಬೋರಯ್ಯ ಹಾಗೂ ಭದ್ರಮ್ಮ ಇಬ್ಬರು ಕುಡಿತಕ್ಕೆ (alcoholism) ದಾಸರಾಗಿದ್ದರು. ಆರೋಪಿ ಬೋರಯ್ಯ ಪ್ರತಿನಿತ್ಯ ಕುಡಿದು ಭದ್ರಮ್ಮಳ ಜೊತೆ ಗಲಾಟೆ (uproar) ಮಾಡುತ್ತಿದ್ದ. ನೆನ್ನೆ ರಾತ್ರಿ ಸಹಾ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಮಾವಿನ ತೋಟದಲ್ಲಿ ದೊಣ್ಣೆಯಿಂದ ಭದ್ರಮ್ಮಳಿಗೆ ಹೊಡೆದು (Beaten) ಹತ್ಯೆ ಮಾಡಿದ್ದಾನೆ. ಆನಂತರ ಅಲ್ಲಿಯೇ ರಾತ್ರಿ ಮಲಗಿದ್ದಾನೆ. ಬೆಳಗ್ಗೆ ಗ್ರಾಮಸ್ಥರು ಹೋಗಿ ನೋಡಿದಾಗ ಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಸಂಶಯದಿಂದ 6 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಕಿತಾ'ಪತಿ'

ಮೊದಲ ಪತ್ನಿಯನ್ನೂ ಕೊಲೆ ಮಾಡಿದ್ದ: ಮೂಲತಃ ರಾಮನಗರ ಜಿಲ್ಲೆ ಕನಕಪುರ (Kanakapura) ತಾಲೂಕಿನ ಹೊಸಕೋಟೆ ಗ್ರಾಮದ ಆರೋಪಿ ಬೋರಯ್ಯ ಏನು ಸಾಮಾನ್ಯದವನಲ್ಲ. 2014ರಲ್ಲಿ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಮೊದಲ ಪತ್ನಿ ಬಸಮ್ಮ (First Wife Basamma) ಎಂಬಾಕೆಯನ್ನ ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಭೀಕರವಾಗಿ ಹತ್ಯೆ ಮಾಡಿ ಜೈಲುಪಾಲಾಗಿದ್ದ. ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ಈತನಿಗೆ ಜೀವವಾಧಿ ಶಿಕ್ಷೆ ಸಹಾ ನೀಡಿತ್ತು. ಆದರೆ ಹೈಕೋರ್ಟ್ ನಲ್ಲಿ ಕೇಸ್ ಅನ್ನ ಖುಲಾಸೆ ಮಾಡಿಕೊಂಡು ಜೈಲಿನಿಂದ ಹೊರಬಂದು, ಭದ್ರಮ್ಮಳ ವಿವಾಹವಾಗಿದ್ದನು. ಆದರೆ, ನಿನ್ನೆ ರಾತ್ರಿ ಪುನಃ ಎರಡನೇ ಹೆಂಡತಿ ಜೊತೆ ಗಲಾಟೆ ತೆಗೆದು ಹತ್ಯೆ ಮಾಡಿದ್ದಾನೆ.  ಒಟ್ಟಾರೆ ಕುಡಿತಕ್ಕೆ ದಾಸನಾಗಿದ್ದ ಆರೋಪಿ ಬೋರಯ್ಯ, ಕುಡಿದ ಮತ್ತಿನಲ್ಲಿ ಕಟ್ಟಿಕೊಂಡ ಹೆಂಡತಿಯನ್ನ ಹತ್ಯೆ ಮಾಡಿ, ಮತ್ತೆ ಜೈಲು ಪಾಲಾಗಿದ್ದಾನೆ.

Latest Videos
Follow Us:
Download App:
  • android
  • ios