Ballari: ಗೋದಾಮಿನಲ್ಲಿದ್ದ ಕೋಟ್ಯಾಂತರ ಬೆಲೆ ಜೋಳ ನಾಪತ್ತೆ: ಪ್ರಕರಣ ದಾಖಲು
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ. ಯಾಕಂದ್ರೇ, ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ ಜೋಳವನ್ನು ಸಂರಕ್ಷಿಸಿ ಜನರಿಗೆ ನೀಡಬೇಕಾದ ಕೆಎಸ್ಎಫ್‌ಸಿ ಅಧಿಕಾರಿಗಳ ಕರಾಮತ್ತಿನಿಂದ ಕೋಟಿ ಕೋಟಿ ಬೆಲೆಯ ಜೋಳವೇ ನಾಪತ್ತೆಯಾಗಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ಜು.09): ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ. ಯಾಕಂದ್ರೇ, ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ ಜೋಳವನ್ನು ಸಂರಕ್ಷಿಸಿ ಜನರಿಗೆ ನೀಡಬೇಕಾದ ಕೆಎಸ್ಎಫ್‌ಸಿ ಅಧಿಕಾರಿಗಳ ಕರಾಮತ್ತಿನಿಂದ ಕೋಟಿ ಕೋಟಿ ಬೆಲೆಯ ಜೋಳವೇ ನಾಪತ್ತೆಯಾಗಿದೆ. ಇದು ಒಂದು ದಿನದಲ್ಲಿ ನಡೆದ ಕೆಲಸವಲ್ಲ ಇದಕ್ಕಾಗಿ ಮೇಲಿನಿಂದ ಕೆಳ ಹಂತದ ಎಲ್ಲ ಅಧಿಕಾರಿಗಳು ಸಹಕಾರ ನೀಡರೋ ಹಿನ್ನೆಲೆ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಮೇಲ್ನೊಟಕ್ಕೆ ಇಲ್ಲಿ ಕೆಎಸ್ಎಫ್‌ಸಿ ಗೋದಾಮಿನ ಅಧಿಕಾರಿಗಳು ಕಳ್ಳಾಟ ಮಾಡಿದ್ದು, ಗೊತ್ತಾದ ಹಿನ್ನೆಲೆ ಅಧಿಕಾರಿಗಳ ವಿರುದ್ಧವೇ ದೂರು ದಾಖಲು ಮಾಡಲಾಗಿದೆ.
ರೈತರಿಂದ ಖರೀದಿ ಮಾಡಿದ್ರೋ ಇಲ್ಲೋ?: ಹೌದು! ಬಳ್ಳಾರಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಜೋಳಕ್ಕೆ 2738 ರೂಪಾಯಿಯಂತೆ ಬಳ್ಳಾರಿ ತಾಲೂಕಿನಲ್ಲಿ 10,9986.85 ಕ್ವಿಂಟಾಲ್ ಜೋಳ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 13,0978.00 ಕ್ವಿಂಟಾಲ್ ಜೋಳ ಖರೀದಿಸಲಾಗಿತ್ತು. ಇದರಲ್ಲಿ ಸಿರುಗುಪ್ಪ ಗೋದಾಮಿನಿಂದ 7282 ಕ್ವಿಂಟಾಲ್ ಮತ್ತು ಬಳ್ಳಾರಿ ಗೋದಾಮಿನಿಂದ 1030 ಕ್ವಿಂಟಾಲ್ ಸೇರಿ ಒಟ್ಟು 8312 ಕ್ವಿಂಟಾಲ್ ಜೋಳ ನಾಪತ್ತೆಯಾಗಿದೆ. ಇದರ ಮೌಲ್ಯ ಸರಿಸುಮಾರ 2.30ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ರೈತರಿಗೆ ಗುಡ್‌ನ್ಯೂಸ್, ಅವಧಿಗೂ ಮುನ್ನವೇ ಭರ್ತಿಯಾಗಲಿದೆ ತುಂಗಭದ್ರೆಯ ಒಡಲು
ಇದೆಲ್ಲವನ್ನು ಇಲ್ಲಿರುವ ಅಧಿಕಾರಿಗಳೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಇಲ್ಲಿರೋ ರೈತರು ಹೇಳೋ ಪ್ರಕಾರ ಇಲ್ಲಿ ಸಮರ್ಪಕವಾಗಿ ಜೋಳವನ್ನು ರೈತರಿಂದ ಖರೀದಿಯೇ ಮಾಡಿಲ್ಲ. ನಕಲಿ ಪಹಣಿಯನ್ನು ಬಳಸಿ ಖರೀಧಿಯ ನಾಟಕವಾಡಿದ್ದಾರೆ. ಒಂದು ಕಡೆ ರೈತರಿಗೆ ಮೋಸ ಮಾಡೋದ್ರ ಜೊತೆ ಮತ್ತೊಂದು ಕಡೆ ಸರ್ಕಾರಕ್ಕೂ ವಂಚನೆ ಮಾಡಿ ಕೋಟಿಗಟ್ಟಲೇ ಹಣವನ್ನು ಕೊಳ್ಳೆ ಹೊಡೆಯಲಾಗಿದೆ ಎನ್ನುವುದು ರೈತರ ಆರೋಪವಾಗಿದೆ.
ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು: ಇನ್ನೂ ಪ್ರತಿ ರೈತರಿಂದ ಖರೀದಿ ಮಾಡಿದ ಜೋಳವನ್ನು ದಾಸ್ತಾನು ಮಾಡೋದ್ರ ಜೊತೆ ಅದನ್ನು ಸಮರ್ಪಕವಾಗಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ನೀಡಬೇಕು. ಅಲ್ಲಿಂದ ಅದು ಪಡಿತರ ವಿತರಕರ ಮೂಲಕ ಜನರ ಕೈಸೇರಬೇಕು ಆದ್ರೇ, ಇಲ್ಲಿರುವ ಅಧಿಕಾರಿಗಳು ಅದನ್ಯಾವುದನ್ನು ಮಾಡದೇ ಕೇವಲ ಜೋಳ ಗೋದಾಮಿನಲ್ಲಿದೆ ಅನ್ನೋ ನಾಟಕವಾಡಿ ಸರಿಸುಮಾರು ಎರಡುವರೆ ಕೋಟಿಯಷ್ಟು ಜೋಳದ ಹಣವನ್ನು ಲೂಟಿ ಮಾಡಿದ್ದಾರೆ. ಇದಕ್ಕೆಲ್ಲ ನಕಲಿ ಪಹಣಿಗಳನ್ನು ಬಳಸಿ ಹಣವನ್ನು ಲಪಟಾಯಿಸೋ ಕೆಲಸ ಮಾಡಿದ್ದು, ಇದೀಗ ಪ್ರಕರಣ ಹೊರ ಬಂದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಇಬ್ಬರು ಅಧಿಕಾರಿಗಳ ಬಂಧನ, ಓರ್ವ ಪರಾರಿ: ಜೋಳ ನಾಪತ್ತೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಬಳ್ಳಾರಿ ಕೆಎಫ್‌ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕರಾದ ನಾರಾಯಣಸ್ವಾಮಿ. ಎಮ್, ಬಳ್ಳಾರಿ ತಾಲೂಕಿನ ಖರೀದಿ ಅಧಿಕಾರಿಯಾದ ಕೆಎಫ್‌ಸಿಎಸ್‌ಸಿಯ ಕಿರಿಯ ಸಹಾಯಕ ಶಿವೇಗೌಡ, ಸಿರಗುಪ್ಪ ಗೋದಾಮು ವ್ಯವಸ್ಥಾಪಕರು/ಖರೀದಿ ಅಧಿಕಾರಿ ಬಸವರಾಜ ಅವರ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದ ಅನುಸಾರ ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ನಿರ್ದೇಶಕರಾದ ಶ್ರೀದರ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. ಆದ್ರೇ, ಇದರಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದ್ದು, ನಾರಾಯಣ ಸ್ವಾಮಿ ಎನ್ನುವ ಅಧಿಕಾರಿ ಮಾತ್ರ ನಾಪತ್ತೆಯಾಗಿದ್ದಾರೆ.
ಕಲ್ಯಾಣ ಕರ್ನಾಟಕ ಶಿಕ್ಷಣ ಇಲಾಖೆಯ ಸಭೆ, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಾಗೇಶ್
ಸರಬರಾಜಿನಲ್ಲಿ ಕೊರತೆ: ಇನ್ನೂ ಗೋದಾಮಿನಲ್ಲಿ ಜೋಳ ನಾಪತ್ತೆಯಾದ ಹಿನ್ನೆಲೆಯಲ್ಲಿ ಈ ಬಾರಿ ಜನರ ಕೈಗೆ ಸೇರಬೇಕಿದ್ದ ಜೋಳ ನಿಗದಿತ ಸಮಯಕ್ಕೆ ಸೇರೋದಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯಾರೋ ಮಾಡಿದ ತಪ್ಪಿಗೆ (ಸಾಮಾನ್ಯ ಜನರು) ಮತ್ತಿನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ.