Assault on Police: ಅಣ್ತಮ್ಮ ವಿರುದ್ಧ ರೌಡಿಪಟ್ಟಿ: ಸಾಮಾಜಿಕ ಜಾಲತಾಣದಲ್ಲಿ ಟೀಕೆ

*    ದಾರಿ ಬಿಡುವ ವಿಚಾರಕ್ಕೆ ಎಸ್‌ಐ ಮೇಲೆ ಹಲ್ಲೆ ಮಾಡಿದ್ದ ಸಹೋದರರು
*    ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅಭಿಪ್ರಾಯಗಳು 
*    ಹಲ್ಲೆ ಘಟನೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ: ಡಿಸಿಪಿ

Criticism on Social Media against Bengaluru Police For Rowdy List Against Brothers grg

ಬೆಂಗಳೂರು(ಡಿ.11):  ನಾಲ್ಕು ದಿನಗಳ ಹಿಂದೆ ರಸ್ತೆಯಲ್ಲಿ ದಾರಿ ಬಿಡುವ ವಿಚಾರಕ್ಕೆ ಉಂಟಾದ ಬೀದಿ ಜಗಳದಲ್ಲಿ ಪೊಲೀಸರ(Police) ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತು ಜೈಲು ಸೇರಿದ್ದ ಇಬ್ಬರು ಸೋದರರ ವಿರುದ್ಧ ಯಲಹಂಕ ಉಪ ನಗರ ಠಾಣೆ ಪೊಲೀಸರು ರೌಡಿಪಟ್ಟಿ(Rowdy List) ತೆರೆದಿದ್ದಾರೆ.

ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಕೊನೆಯದಾಗಿ ಸಾದಂರ್ಭಿಕ ಪುರಾವೆಗಳ ಆಧಾರದ ಮೇರೆಗೆ ತನಿಖೆ(Investigation) ನಡೆಸಬೇಕಾಗುತ್ತದೆ. ಸಾಕ್ಷ್ಯ ಆಧಾರಿಸಿಯೇ ಐಪಿಸಿ 353 ಹಾಗೂ 506 ಸೇರಿದಂತೆ ಇತರೆ ಆರೋಪಗಳಡಿ ಪ್ರಕರಣ(Case) ದಾಖಲಿಸಿ ಹಲ್ಲೆ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿತ್ತು(Arrest). ಆರೋಪಿಗಳು(Accused) ವಿದ್ಯಾವಂತರಾಗಿದ್ದಾರೆ. ಒಬ್ಬಾತ ಸಾಫ್ಟ್‌ವೇರ್‌ ಕಂಪನಿ, ಮತ್ತೊಬ್ಬ ಸ್ವಿಗ್ಗಿಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.

Assault on Police: ಪೊಲೀಸರಿಗೇ ಹೊಡೆದ ಅಣ್ತಮ್ಮ ಅರೆಸ್ಟ್‌

ಈ ಹಲ್ಲೆ(Assault) ಪ್ರಕರಣದ ಬಗ್ಗೆ ರಾಜಿ ನಡೆಸಿಲ್ಲ. ಆರೋಪಿಗಳು ನೀಡಿರುವ ದೂರನ್ನು ನಾವು ಸ್ವೀಕರಿಸಿದ್ದೇವೆ. ಕರ್ತವ್ಯನಿರತ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧಿಸಿದ ವಿಡಿಯೋದಲ್ಲಿ ಪೊಲೀಸರಿಗೆ ಹೊಡೆಯುವ ದೃಶ್ಯವು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗಿದೆ. ಹಲ್ಲೆ ಘಟನೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ. ಬಂಧಿತರ ಹಿನ್ನೆಲೆ ನೋಡಿ ತನಿಖೆ ನಡೆಸುತ್ತಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.

ಯಲಹಂಕ 5ನೇ ಹಂತದ ನಿವಾಸಿಗಳಾದ ಮನೋಜ್‌ ಹಾಗೂ ಧೀರಜ್‌ ಬಂಧಿತರಾಗಿದ್ದರು. ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ದಾರಿ ಬಿಡುವ ವಿಚಾರವಾಗಿ ಡಿ.6ರಂದು ರಾತ್ರಿ ಯಲಹಂಕ ಉಪ ನಗರದ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಶ್ರೀಶೈಲ ಹಾಗೂ ಮೂವರ ಪೊಲೀಸರ ಜತೆ ಆರೋಪಿಗಳಿಗೆ ಜಗಳವಾಗಿತ್ತು. ಆಗ ಕೋಪಗೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಸೋದರರನ್ನು ಬಂಧಿಸಿದ್ದರು. ಈ ಬಂಧನ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮೇಲೆ ಸಾರ್ವಜನಿಕರು ಕಟುವಾಗಿ ಟೀಕಿಸಿದ್ದರು.

ಪೊಲೀಸರ ಕಾರ್ಯಾಚರಣೆ: ನಾಲ್ವರು ಆರೋಪಿಗಳ ಬಂಧನ

ಹೊಸಪೇಟೆ(Hosapete): ಸ್ಥಳೀಯ ಚಿತ್ತವಾಡ್ಗಿ ಠಾಣೆ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಮೊಬೈಲ್‌ ಹಾಗೂ 2 ಸಾವಿರ ನಗದು ದೋಚಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ(Arrest). 

ಬಂಧಿತರಿಂದ 10 ಸಾವಿರ ಮೌಲ್ಯದ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ನಗರದ ಅಜ್ಜಿ ಹೊನ್ನೂರಸ್ವಾಮಿ (18), ಜಾಲಿ ಬಸವರಾಜ (19), ಎಂ. ಸುದೀಪ್‌ (18) ಮತ್ತು ನಜೀರ್‌ ಅಹಮ್ಮದ್‌ (21) ಬಂಧಿತ ಆರೋಪಿಗಳು. ಘಟನೆ ವಿವರ: ನಗರದ ನಿವಾಸಿ ಇಮಾಮ್‌ ಅಲಿ ಎಂಬವರು ನ. 8ರ ರಾತ್ರಿ 11.20ಕ್ಕೆ ನಗರದ ಬಸವೇಶ್ವರ ಬಡಾವಣೆಯ ಬಸವಣ್ಣ ಕಾಲುವೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ತನ್ನ ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಬೆದರಿಸಿ ಮೊಬೈಲ್‌ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದರು.  ಈ ಬಗ್ಗೆ ಪ್ರಕರಣ ಚಿತ್ತವಾಡ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿತ್ತವಾಡ್ಗಿ ಠಾಣೆ ಪಿಐ ಜಯಪ್ರಕಾಶ ಮತ್ತು ಪಿಎಸ್‌ಐ ಸರೋಜಮ್ಮ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Loan Fraud: 100 ಕೋಟಿ ಸಾಲದಾಸೆ ತೋರಿಸಿ 1.8 ಕೋಟಿ ಧೋಖಾ: ಕಂಗಾಲಾದ ಉದ್ಯಮಿ..!

ಪೂಜೆ ಹೆಸರಲ್ಲಿ ವಂಚನೆ: ಪೂಜಾರಿ ಬಂಧನ

ಹೊನ್ನಾಳಿ(Honnali): ಪೂಜೆ ಮಾಡಿಸುವ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಪೂಜಾರಿಯನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಹಳದಮ್ಮ ದೇವಸ್ಥಾನದ ಹಿಂಭಾಗದ ನಿವಾಸಿ ಎಂ.ಜಿ.ಚಂದ್ರು (31) ಬಂಧಿತ ಆರೋಪಿ. ಬಂಧಿತನಿಂದ ಮಹಿಳೆಗೆ ವಂಚಿಸಿದ್ದ 120 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ(Judicial Custody) ಒಪ್ಪಿಸಲಾಗಿದೆ.

ಪಟ್ಟಣ ಮಹಿಳೆ ಬಿ.ವಿ.ಪ್ರಮೀಳಾ ಎಂಬುವರಿಗೆ ಆರೋಪಿಯು ನಿಮ್ಮ ಗಂಡನ ಮನೆಯವರಿಗೆ ಗಂಡಾಂತರವಿದೆ. ಪೂಜೆ ಮಾಡಿಸಿದರೆ ಎಲ್ಲ ಸರಿ ಹೋಗುತ್ತದೆ ಎಂದು ನಂಬಿಸಿ ಅವರಿಂದ ಪೂಜೆಗಾಗಿ ಒಡವೆಗಳನ್ನು ಪಡೆದು ವಂಚಿಸಿದ್ದ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
 

Latest Videos
Follow Us:
Download App:
  • android
  • ios