ಕುಟುಂಬಸ್ಥರ ಮುಂದೆಯೇ ಹುಡುಗಿಯ ಕತ್ತು ಕುಯ್ದು ಕೊಲೆಕಳೆದ ಒಂದು ವರ್ಷದಿಂದ ಹುಡುಗಿಯ ಪೀಡಿಸುತ್ತಿದ್ದ ಯುವಕಕುಟುಂಬಸ್ಥರು ಗೋಗರೆದರೂ ಒಪ್ಪದ 21 ವರ್ಷ ಯುವಕನಿಂದ ಕೃತ್ಯ

ಸೂರತ್ (ಫೆ.15): ಪ್ರೇಮಿಗಳ ದಿನಕ್ಕೆ ಎರಡು ದಿನ ಮುನ್ನ 21 ವರ್ಷದ ಕಾಲೇಜು ವಿದ್ಯಾರ್ಥಿ, ತಾನು ಪ್ರೀತಿ ಮಾಡುತ್ತಿದ್ದ ಹುಡಿಗಿಯನ್ನು ಅವರ ಕುಟುಂಬಸ್ಥರ ಮುಂದೆಯೇ ಕತ್ತು ಕುಯ್ದು ಕೊಲೆ ಮಾಡಿದ ಭೀಕರ ಘಟನೆ ಸೂರತ್ ನಲ್ಲಿ ನಡೆದಿದೆ. ಇಬ್ಬರೂ ಬ್ಯಾಚ್ ಮೇಟ್ ಆಗಿದ್ದು, ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುವಂತೆ ಹುಡುಗಿಯ ಪಟ್ಟುಹಿಡಿದಿದ್ದ, ಆದರೆ, ಇದಕ್ಕೆ ಒಪ್ಪದ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿಯು ಬಾಲಕಿಯ ಕುತ್ತಿಗೆ ದೊಡ್ಡ ಚಾಕು ಇಟ್ಟುಕೊಂಡು ಮಧ್ಯಪ್ರವೇಶಿಸಲು ಬಂದ ಕುಟುಂಬಸ್ಥರನ್ನು ಹೆದರಿಸುತ್ತಿರುವ ಭಯಾನಕ ದೃಶ್ಯವನ್ನು ಕೆಲವರು ವಿಡಿಯೋ ಮಾಡಿದ್ದಾರೆ. ಆಕೆಯ ಕತ್ತು ಕೊಯ್ದು ಸ್ಥಳದಲ್ಲೇ ಕೊಂದು ಹಾಕುವ ಮುನ್ನ ಆಕೆಯನ್ನು ಹಲವು ನಿಮಿಷಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎನ್ನಲಾಗಿದೆ.

21 ವರ್ಷದ ಕಾಲೇಜು ವಿದ್ಯಾರ್ಥಿ ಫೆನಿಲ್ ಗೋಯಾನಿ ( Fenil Goyani) ಮತ್ತೆ ಕಿರುಕುಳ ನೀಡುತ್ತಿದ್ದಾನೆ ಎಂದು ಬಾಲಕಿ ತನ್ನ ಮನೆಯವರನ್ನು ಕಾಲೇಜಿನ ಬಳಿ ಕರೆಸಿಕೊಂಡಾಗ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕೊಲೆಯಾದ ಗ್ರೀಷ್ಮಾ ವೆಕಾರಿಯಾಳನ್ನು (Grishma Vekariya) ಕುಟುಂಬ ಸದಸ್ಯರು ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸೂರತ್ ಗ್ರಾಮಾಂತರದ ಕಮ್ರೇಜ್ ಪ್ರದೇಶದಲ್ಲಿನ ಲಕ್ಷ್ಮೀ ಧಾನ್ ಸೊಸೈಟಿಯಲ್ಲಿರುವ ಅವರ ನಿವಾಸದವರೆಗೂ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಗೋಯಾನಿ ಈ ಕೃತ್ಯ ಎಸಗಿದ್ದಾನೆ.

Scroll to load tweet…


ಶನಿವಾರ ರಾತ್ರಿ ಈ ಕುರಿತಂತೆ ಎಫ್ ಐಆರ್ ದಾಖಲಾಗಿದೆ. ಗ್ರೀಷ್ಮಾಳ ಸಹೋದರ 17 ವರ್ಷದ ಧ್ರುವ ಅವರ ಹೇಳಿಕೆಯನ್ನು ಇಲ್ಲಿ ದಾಖಲಿಸಲಾಗಿದೆ. ಸೊಸೈಟಿಯ ಮುಂದೆ ಗೋಯಾನಿ ನಿಂತಿರುವ ಬಗ್ಗೆ ಧ್ರುವ ಅವರ ಅಂಕಲ್ ಸುಭಾಷ್ ವೆಕೆರಿಯಾಗೆ ಮಾಹಿತಿ ನೀಡಿದ್ದರು. ಬಳಿಕ ಇಬ್ಬರೂ ಆತನ ಬಳಿ ಹೋಗಿ, ಗ್ರೀಷ್ಮಾಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದರು.

ತನಗೆ ಎಚ್ಚರಿಕೆ ನೀಡಲು ಬಂದ ಸುಭಾಷ್ ವೆಕೆರಿಯಾ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ ಗೋಯಾನಿ, ಚಾಕು ಕಿತ್ತುಕೊಳ್ಳಲು ಬಂದ ಧ್ರುವನ ಮಣಿಕಟ್ಟನ್ನು ಚಾಕುವಿನಿಂದ ಕತ್ತರಿಸಿದ್ದಲ್ಲದೆ, ತಲೆಗೂ ಹೊಡೆದಿದ್ದ. ಈ ಭಯಾನಕ ದೃಶ್ಯವನ್ನು ನೋಡಿದ ಗ್ರೀಷ್ಮಾ ತನ್ನ ಕುಟುಂಬದವರನ್ನು ಕಾಪಾಡುವ ಸಲುವಾಗಿ ಮನೆಯ ಹೊರಗಡೆಓಡಿ ಬಂದಿದ್ದರು. ಈ ವೇಳೆ ಗ್ರೀಷ್ಮಾಳನ್ನು ಗೋಯಾನಿ ಬಲವಾಗಿ ಹಿಡಿದುಕೊಂಡಿದ್ದ. ಆಕೆಯನ್ನು ಬಿಡುವಂತೆ ಮನೆಯವರು ಪರಿಪರಿಯಾಗಿ ಬೇಡಿಕೊಂಡರೂ ಆಕೆಯ ಕತ್ತಿಗೆ ಚಾಕುವಿನಿಂದ ಇರಿದಿದ್ದು ಮಾತ್ರವಲ್ಲದೆ, ಆಕೆ ಸಾಯುವವರೆಗೂ ಅಲ್ಲಿಯೇ ನಿಂತುಕೊಂಡಿದ್ದ.

ಮಕ್ಕಳು ಆಟವಾಡುತ್ತಿದ್ದ ವೇಳೆ ಜವರಾಯನಂತೆ ಬಂದ ಕಾರು, ಮೂವರ ದುರ್ಮರಣ
"ನಂತರ ತಪ್ಪಿಸಿಕೊಳ್ಳುವ ಸಲುವಾಗಿ ಖಾಲಿ ಜಾಗದ ಕಡೆ ಗೋಯಾನಿ ಓಡಿದ್ದ. ಆದರೆ, ಆತನ ಪ್ರಯತ್ನ ವಿಫಲವಾಗಿತ್ತು. ಯಾವುದೇ ಶಸ್ತ್ರಗಳಿಲ್ಲದೆ ಗೋಯಾನಿಯನ್ನು ಪೊಲೀಸರು ಬಂಧಿಸಿದ್ದರು. ತನ್ನ ಸ್ಥಿತಿಯನ್ನು ಅರಿವಿಗೆ ತಂದುಕೊಂಡ ಗೋಯಾನಿ, ಚಾಕುವಿನಿಂದ ಕೈಗಳನ್ನು ಕತ್ತರಿಸಿಕೊಂಡಿದ್ದ" ಸೂರತ್ ಗ್ರಾಮಾಂತರದ ಧಾಂಗ್ ವಿಭಾಗದ ಎಸ್ ಪಿ ರವಿರಾಜ್ ಸಿನ್ಹಾ ಜಡೇಜಾ (Ravirajsinh Jadeja) ಹೇಳಿದ್ದಾರೆ. ಗೋಯಾನಿ, ಗ್ರೀಷ್ಮಾರನ್ನು ಬಿಟ್ಟು ಓಡುತ್ತಿದ್ದಂತೆ ಕುಟುಂಬಸ್ಥರು ಮೂವರನ್ನೂ ಸ್ಥಳೀಯ ಸಿಮ್ಮೆರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ, ಈ ವೇಳೆಗಾಗಲೇ ಗ್ರೀಷ್ಮಾ ಸಾವನ್ನಪ್ಪಿದ್ದರು.

Bengaluru Crime: ಕೆಲಸ ಕೊಡಿಸೋದಾಗಿ ಹಣ ಪಡೆದು ವಂಚನೆ: ಮೂವರ ಬಂಧನ
ಫೆನಿಲ್ ಗೋಯಾನಿ ಕಳೆದ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದರೂ ಗ್ರೀಷ್ಮಾ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿರಲಿಲ್ಲ. ಇಬ್ಬರೂ ಒಂದೇ ಸಮುದಾಯದವರಾಗಿದ್ದ ಕಾರಣ ಎರಡೂ ಕುಟುಂಬಗಳು ಮಾತುಕತೆಯೊಂದಿಗೆ ಪ್ರಕರಣ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.