Asianet Suvarna News Asianet Suvarna News

Karnataka crimes: ಸುಳ್ಳು ವೆಬ್‌ ಸೈಟ್‌ ಸೃಷ್ಟಿಸಿ .17 ಲಕ್ಷ ವಂಚನೆ

ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳು ಇಂಡಿಯಲ್‌ ಆಯಿಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಎಂದು ಸುಳ್ಳು ವೆಬ್‌ ಸೈಟ್‌ ಸೃಷ್ಟಿಸಿ ಶಿರಸಿಯ ಬಸವೇಶ್ವರ ಕಾಲನಿಯ ನಿವಾಸಿ ದೇವಿದಾಸ ವೀರಪ್ಪ ಪಾಲೇಕರ್‌ ಇವರಿಂದ ಬರೋಬ್ಬರಿ .17,24,000 ರೂ. ವಂಚನೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

Create fake website .17 lakh fraud in sirsi at uttara kannada rav
Author
First Published Jun 22, 2023, 4:36 AM IST

ಶಿರಸಿ (ಜೂ.22): ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳು ಇಂಡಿಯಲ್‌ ಆಯಿಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಎಂದು ಸುಳ್ಳು ವೆಬ್‌ ಸೈಟ್‌ ಸೃಷ್ಟಿಸಿ ಶಿರಸಿಯ ಬಸವೇಶ್ವರ ಕಾಲನಿಯ ನಿವಾಸಿ ದೇವಿದಾಸ ವೀರಪ್ಪ ಪಾಲೇಕರ್‌ ಇವರಿಂದ ಬರೋಬ್ಬರಿ .17,24,000 ರೂ. ವಂಚನೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

ಪಾಲೇಕರ ತಮ್ಮ ಮಗನಾದ ಸಂಖೇತ ಹೆಸರಿನಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾದ ಡೀಲರ್‌ ಶಿಪ್‌ ಪಡೆಯಲು ಹೋಗಿ ವಂಚಕರ ಬಲೆಗೆ ಬಿದ್ದು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಮುಂಬೈನ ಅಭಿಷೇಕ್‌ ಮಂಡಲ್‌ ಮತ್ತು ಮನೀಷ್‌ ಗ್ರೋವರ್‌ ಎಂಬ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Karnataka crimes: ದರೋಡೆಗೆ ಸಂಚು ಹಾಕಿದ್ದ ರೌಡಿ ಶೀಟರ್‌ನ ಐವರು ಸಹಚರರ ಸೆರೆ

ಆನ್‌ಲೈನ್‌ ಕ್ಲಾಸ್‌ ಹೆಸರಿನಲ್ಲಿ ಹಣ ಹಾಕಿಸಿಕೊಂಡು ವಂಚನೆ

ಚನ್ನಪಟ್ಟಣ: ಬೈಜೂಸ್‌ ಆನ್‌ಲೈನ್‌ ಕ್ಲಾಸ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ಹಣ ಹಾಕಿಸಿಕೊಂಡು ವಂಚಿಸಿರುವ ಘಟನೆ ನಗರದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಮಂಜುನಾಥ್‌ ತಮ್ಮ ಇಬ್ಬರು ಮಕ್ಕಳಿಗೆ ಬೈಜೂಸ್‌ ಆನ್‌ಲೈನ್‌ ಟಿಟೋರಿಯಲ್‌ನಲ್ಲಿ ಕೋರ್ಸ್‌ಗೆ ಸೇರಿಸಿದ್ದು, ಕೋರ್ಸ್‌ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಕೆಲ ದಿನಗಳ ಹಿಂದೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ನೀವು ಕೋರ್ಸ್‌ಗಾಗಿ ಪಾವತಿಸಿರುವ 64 ಸಾವಿರ ಹಣ ಹಿಂದಿರುಗಿಸಲಾಗುವುದು. ಆದರೆ, ನಿಮ್ಮ ಮಕ್ಕಳಿಗೆ ನೀಡಿರುವ ಟ್ಯಾಬ್‌, ಪುಸ್ತಕದ ಹಣ 15,300 ರು. ಪಾವತಿಸುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಮಂಜುನಾಥ್‌ ಯುಪಿಐ ಐಡಿ ಮುಖಾಂತರ ಹಣ ಪಾವತಿಸಿದ್ದು, ನಂತರ ವಿಚಾರಿಸಿದರೆ ಕೋರ್ಸ್‌ ರದ್ದಾಗಿಲ್ಲ. ಯಾರೋ ಸಂಸ್ಥೆ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬ ಮಾಹಿತಿ ಬೈಜೂಸ್‌ನಿಂದ ದೊರೆತಿದೆ. ಮಂಜುನಾಥ್‌ ರಾಮನಗರದ ಸಿಎನ್‌ಇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಗಳ್ಳನಿಂದ 8 ಲಕ್ಷ ಮೌಲ್ಯದ 161.8 ಗ್ರಾಂ ಚಿನ್ನಾ​ಭ​ರಣ ವಶ

ರಾಮ​ನ​ಗರ: ಮನೆ ಕಳ್ಳ​ತನ ಮಾಡು​ತ್ತಿದ್ದ ಆರೋ​ಪಿ​ಯೊ​ಬ್ಬ​ನನ್ನು ಕಗ್ಗ​ಲೀ​ಪುರ ಠಾಣೆ ಪೊಲೀ​ಸರು ಬಂಧಿಸಿ 8 ಲಕ್ಷ ರುಪಾಯಿ ಮೌಲ್ಯದ 161.8 ಗ್ರಾಂ ತೂಕದ ಚಿನ್ನಾ​ಭ​ರಣ ವಶ ಪಡಿ​ಸಿ​ಕೊಂಡಿ​ದ್ದಾರೆ. ಯಾದ​ಗಿರಿ ಜಿಲ್ಲೆ ಯಾದ​ಗಿರಿ ತಾಲೂಕು ಬಲಿ​ಚಕ್ರ ಗ್ರಾಮದ ವಾಸಿ ಮಲ್ಲಿ​ಕಾ​ರ್ಜುನ್‌ ಬಂಧಿತ ಆರೋಪಿ. ಬೆಂಗ​ಳೂರು ಉತ್ತ​ರ​ಹ​ಳ್ಳಿಯಲ್ಲಿ ವಾಸ​ವಾ​ಗಿದ್ದ ಈತ ಫ್ಲಿಪ್‌ ಕಾರ್ಚ್‌ನಲ್ಲಿ ಕೆಲಸ ಮಾಡು​ತ್ತಿ​ದ್ದನು. ಕಳೆದ ಜೂನ್‌ 5ರಂದು ಬೆಂಗ​ಳೂರು ದಕ್ಷಿಣ ತಾಲೂಕು ತಾತ​ಗುಣಿ ಗ್ರಾಮದ ಲತಾ ಅವರ ಮನೆಯ ಬೀಗ ಒಡೆದು ಚಿನ್ನಾ​ಭ​ರಣ ದೋಚಿ​ದ್ದನು. ಈ ಪ್ರಕ​ರ​ಣದ ಪತ್ತೆ​ಗಾಗಿ ರಚನೆ ಮಾಡಿದ್ದ ವಿಶೇಷ ತಂಡ ಆರೋ​ಪಿ​ಯನ್ನು ಸೆರೆ ಹಿಡಿದಿದ್ದಾರೆ. ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಕಾರ್ತಿಕ್‌ರೆಡ್ಡಿ , ಹೆಚ್ಚು​ವರಿ ಪೊಲೀಸ್‌ ವರಿಷ್ಠಾ​ಧಿ​ಕಾರಿ ಟಿ.ವಿ​.ಸು​ರೇಶ್‌ ಮಾರ್ಗ​ದ​ರ್ಶ​ನದಂತೆ ಡಿವೈ​ಎಸ್ಪಿ ದಿನ​ಕರ ಶೆಟ್ಟಿನೇತೃ​ತ್ವ​ದಲ್ಲಿ ನಡೆದ ಕಾರ್ಯಾ​ಚ​ರ​ಣೆ​ಯಲ್ಲಿ ನಿರೀ​ಕ್ಷಕ ವಿಜಯ ಕುಮಾರ್‌, ಪಿಎಸ್‌ಐ ಲೋಕೇಶ್‌, ಎಎಸ್‌ಐ ಮುನಿ​ರಾಜು, ಪೇದೆ​ಗ​ಳಾದ ಶೀಲ​ವಂತರ್‌, ಮುರ​ಳೀ​ಧರ್‌, ಲಿಂಗಪ್ಪ, ವಿರೂ​ಪಾ​ಕ್ಷ, ರವಿ ಪಾಲ್ಗೊಂಡಿ​ದ್ದರು.

ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್‌ ಖರೀದಿಸಿದ ಪತಿ: ಗನ್‌ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ

Follow Us:
Download App:
  • android
  • ios