ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್ ಖರೀದಿಸಿದ ಪತಿ: ಗನ್ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ
ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನದಿಂದ ಪತ್ನಿಯನ್ನೇ ಕೊಲ್ಲುವುದಕ್ಕೆ ಪಿಸ್ತೂಲು ಖರೀದಿಸಿದ ಗಂಡ ಅದನ್ನು ಇಟ್ಟುಕೊಳ್ಳುವುದಕ್ಕಾಗಿದೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿ (ಜೂ.17): ಮನೆಯವರೆಲ್ಲರೂ ಒಟ್ಟುಗೂಡಿ ನೂರ್ಕಾಲ ಸುಖವಾಗಿರಿ ಎಂದುರ ಹರಸಿ ಅದ್ಧೂರಿಯಾಗಿ ಮದುವೆ ಮಾಡಿದರೆ, ಕೆಲವೇ ವರ್ಷಗಳಲ್ಲಿ ನನ್ನ ಹೆಂಡತಿಗೆ ಬೇರೊಂದು ಕಡೆ ಸಂಬಂಧವಿದೆ ಎಂದು ಅನುಮಾನಗೊಂಡ ಹೆಂಡತಿಯನ್ನೇ ಕೊಲೆ ಮಾಡಲು ಕಂಟ್ರಿ ಪಿಸ್ತೂಲ್ ಖರೀದಿ ಮಾಡಿದ ಪತಿರಾಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೆಂಡತಿಯನ್ನು ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿ ಪೊಲೀಸರ ಅತಿಥಿಯಾದ ಪಾಪಿ ಪತಿರಾಯನ ಸ್ಟೋರಿ ಇಲ್ಲಿದೆ ನೋಡಿ. ಕಳೆದ 15 ದಿನಗಳ ಹಿಂದಷ್ಟೆ ಡಿವೋರ್ಸ್ ನೀಡಿ ಕೊಲ್ಲಲು ಸ್ಕೆಚ್ ಹಾಕಿದ್ದನು. ಹೆಂಡತಿಗೆ ಬೇರೆಯವರ ಜತೆಗೆ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆಗೆ ಸ್ಕೆಚ್ ಹಾಕಿದ್ದನು. ಸಚಿನ್ ಬಾಬಾಸಾಹೇಬ್ ರಾಯಮಾನೆ ಬಂಧಿತ ಆರೋಪಿಯಾಗಿದ್ದಾನೆ. ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿದ್ದನು.
ಬೆಂಗಳೂರು: ಓಲಾ, ಊಬರ್ ಚಾಲಕರೇ ಈತನ ಟಾರ್ಗೆಟ್, ಖರ್ತನಾಕ್ ಖದೀಮನ ಬಂಧನ
ಗನ್ ಇಟ್ಕೋಳೋಕೆ ಗೊತ್ತಾಗದೇ ಪೊಲೀಸರಿಗೆ ಸಿಕ್ಕಿಬಿದ್ದ: ಇನ್ನು ಹೆಂಡ್ತಿ ಕೊಲ್ಲುವುದಕ್ಕೆ ಪಿಸ್ತೂಲ್ ಖರೀದಿ ಮಾಡಿದರೂ ಅದನ್ನು ಇಟ್ಟುಕೊಳ್ಳುವುದಕ್ಕೆ ಆತನಿಗೆ ಆತಂಕವಾಗಿದೆ. ಆದ್ದರಿಂದ ಪಿಸ್ತೂಲ್ ಖರೀದಿಸಿದ ನಂತರ ಮೀರಜ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಚಿನ್ ಓಡಾಡುತ್ತಿದ್ದನು. ಇದರಿಂದ ಅನುಮಾನಗೊಂಡ ಮಹಾರಾಷ್ಟ್ರದ ಪೊಲೀಸರು ಬಂದು ಬಂದು ಸಚಿನ್‌ನನ್ನು ವಿಚಾರಣೆ ಮಾಡಿದ್ದಾರೆ. ಆಗ ವಿಚಿತ್ರವಾಗಿ ವರ್ತನೆ ತೋರಿದ ಸಚಿನ್‌ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ, ಆತನ ಬಳಿ ಕಂಟ್ರಿ ಪಿಸ್ತೂಲ್ ಇರುವುದು ಕೂಡ ಪತ್ತೆಯಾಗಿದೆ.
ಪತ್ನಿಯಿಂದಲೂ ಗಂಡನ ಮೇಲೆ ದೂರು: ಇನ್ನು ಪೊಲೀಸರ ವಿಚಾರಣೆ ವೇಳೆ ಹೆಂಡತಿಯನ್ನು ಕೊಲ್ಲಲು ರಿವಾಲ್ವಾರ ಖರೀದಿಸಿದ್ದಾಗಿ ಪತಿ ಸಚಿನ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದ ಮೀರಜ್ ನಗರದ ಗಾಂಧಿಚೌಕ್ ಠಾಣೆಯ ಪೊಲೀಸರು, ಈ ಬಗ್ಗೆ ಮಾಹಿತಿನ್ನು ಚಿಕ್ಕೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿಯಾಗಿರುವ ಸಚಿನ್ ವಿರುದ್ಧ ಪತ್ನಿಯೂ ಕೂಡ ತನ್ನ ಪತಿ ಕಿರುಕುಳ ನೀಡುತ್ತಿರುವುದಾಗಿ ದೂರು ದಾಖಲಿಸಿದ್ದಳು. ತನಗೆ ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆನಾದರೂ ಆದರೆ ಅದಕ್ಕೆ ಪತಿ ಸಚಿನ್ ಕಾರಣ ಎಂದು ದೂರು ದಾಖಲಿಸಿದ್ದಳು. ಈಗ ಸಚಿನ್ ವಿರುದ್ಧ ಮೀರಜ್‌ನ ಗಾಂಧಿ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಆಗಿದೆ.