1.47 ಕೋಟಿ ಮೌಲ್ಯದ 491 ಕ್ಯಾರೆಟ್ ವಜ್ರ ಕದ್ದಿದ್ದ ಉದ್ಯೋಗಿಯ ಬಂಧನ
ಮುಂಬೈನಲ್ಲಿ ₹1.47 ಕೋಟಿ ಮೌಲ್ಯದ 491 ಕ್ಯಾರೆಟ್ ವಜ್ರಗಳನ್ನು ಕದ್ದ ಆರೋಪದ ಮೇಲೆ 40 ವರ್ಷದ ಉದ್ಯೋಗಿ ಸಚಿನ್ ಜೆ. ಮಕ್ವಾನಾ ಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ಮುಂಬೈ: ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ 1.47 ಕೋಟಿ ರೂಪಾಯಿ ಮೌಲ್ಯದ ವಜ್ರ ಕಳ್ಳತನ ಮಾಡಿದ್ದ ಆರೋಪದಡಿ ಉದ್ಯೋಗಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು 40 ವರ್ಷದ ಸಚಿನ್ ಜೆ. ಮಕ್ವಾನಾ ಎಂದು ಗುರುತಿಸಲಾಗಿದೆ. ಬಂಧಿತ ಸಚಿನ್ ಮುಂಬೈನ ವಜ್ರಾಭರಣಗಳ ಮಳಿಗೆಯಲ್ಲಿ ಕುಶಲಕರ್ಮಿಯಾಗಿ ಕೆಲಸ ಮಾಡಿಕೊಂಡದ್ದನು. ಡಿಸೆಂಬರ್ 10ರಂದ ವಜ್ರ ಕದ್ದಿದ್ದ ಆರೋಪಿ ಮುಂಬೈನಿಂದ ಕಾಲ್ಕಿತ್ತಿದ್ದನು. ಇದೀಗ ಪೊಲೀಸರು ಆರೋಪಿಯನ್ನು ರಾಜಸ್ಥಾನದಲ್ಲಿ ಬಂಧಿಸಿ ಮುಂಬೈಗೆ ಕರೆ ತಂದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ಮುಂಬೈನ ಗೋರೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿ, ನಮ್ಮ ತನಿಖಾಧಿಕಾರಿಗಳು 120ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಆರೋಪಿ ಸಚಿನ್ ಜೆ. ಮಕ್ವಾನಾ ಎಂಬಾತನನ್ನು ಬಂಧಿಸಿದ್ದಾರೆ. ಮುಂಬೈನ ವಜ್ರದ ವ್ಯಾಪಾರಿ ಕಿರಣ್ ರತಿಲಾಲ್ ರೊಕಾನಿ ಎಂಬವದು ಈ ಸಂಬಂಧ ದೂರು ನೀಡಿದ್ದರು. ದೂರಿನಲ್ಲಿ ಕುಶಲಕರ್ಮಿಯಾಗಿರುವ ಸಚಿನ್ ಜೆ. ಮಕ್ವಾನಾ ಎಂಬಾತನ . 47 ಕೋಟಿ ಮೌಲ್ಯದ 491 ಕ್ಯಾರೆಟ್ ವಜ್ರಗಳನ್ನು ಕಳ್ಳತನ ಮಾಡಿದ್ದಾನ ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ: 14ರ ಬಾಲಕಿಯನ್ನ ಗರ್ಭಿಣಿಯನ್ನಾಗಿಸಿದ ನೀಚ ಅಜ್ಜ, ತಂದೆ, ಚಿಕ್ಕಪ್ಪ
ದೂರು ದಾಖಲಿಸಿಕೊಂಡ ಪೊಲೀಸರು ಸಚಿನ್ ಜೆ. ಮಕ್ವಾನಾ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ್ದರು. ಸಚಿನ್ ಮಕ್ವಾನಾ ಪತ್ತೆಗಾಗಿ ಪೊಲೀಸರು ಗೋರೆಗಾಂವ್, ಮಲಾಡ್, ದಹಿಸರ್, ಚರೋಟಿ ಟೋಲ್, ಭಿಲಾಡ್, ವಾಪಿ, ಸೂರತ್, ಅಹಮದಾಬಾದ್, ಪಾಲನ್‌ಪುರ್ ಮತ್ತು ಇಂದೋರ್ ಸೇರಿದಂತೆ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರೋಪಿ ಸಚಿನ್ ಜೆ. ಮಕ್ವಾನಾ ಎಂಬಾತನನ್ನು ಮಂಗಳವಾರ ಬಂಧಿಸಲಾಯಿತು. ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಬಳಿಯಲ್ಲಿದ್ದ 77,380 ರೂ ನಗದು ಮತ್ತು 1.40 ಕೋಟಿ ಮೌಲ್ಯದ 470 ಕ್ಯಾರೆಟ್ ವಜ್ರಗಳು ಸೇರಿದಂತೆ ಕದ್ದ ಮಾಲುಗಳಲ್ಲಿ 97 ಪ್ರತಿಶತವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 10 ರಂದು ಗೋರೆಗಾಂವ್ ಪಶ್ಚಿಮದ ಜವಾಹರ್ ನಗರ ರಸ್ತೆಯಲ್ಲಿರುವ 68 ವರ್ಷದ ಕಿರಣ್ ರೊಕಾನಿ ಅವರ ಆಭರಣ ವರ್ಕ್‌ಶಾಪ್‌ನಲ್ಲಿ ಕಳ್ಳತನ ನಡೆದಿತ್ತು.
ಇದನ್ನೂ ಓದಿ: ಮೂರನೇ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೆಟ್ರೋಲ್ ಸುರಿದ ಪತ್ನಿಗೆ ಬೆಂಕಿ ಇಟ್ಟ ಗಂಡ