14ರ ಬಾಲಕಿಯನ್ನ ಗರ್ಭಿಣಿಯನ್ನಾಗಿಸಿದ ನೀಚ ಅಜ್ಜ, ತಂದೆ, ಚಿಕ್ಕಪ್ಪ

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಕೆಯ ಅಜ್ಜ, ತಂದೆ ಮತ್ತು ಚಿಕ್ಕಪ್ಪನನ್ನು ಬಂಧಿಸಲಾಗಿದೆ. ಬಾಲಕಿ ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

14 Year old Girl s father among 3 arrested for raping in UP s Auraiya mrq

ಖಾನ್‌ಪುರ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾದ ಆರೋಪದಡಿ ಆಕೆಯ ಅಜ್ಜ, ತಂದೆ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆ ಹೇಳಿಕೆಯನ್ನಾಧರಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. 

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಎಎಸ್‌ಪಿ ಅಲೋಕ್ ಕುಮಾರ್ ಮಿಶ್ರಾ,  ಸಂತ್ರಸ್ತೆಯ ಸಂಬಂಧಿ ಮಹಿಳೆ ಸ್ಥಳೀಯ ಬಿದುನಾ ಪೊಲೀಸ್ ಠಾಣೆಗೆ ತೆರಳಿ ಮೂವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ದೂರಿನಲ್ಲಿ ತಮ್ಮ ಅಜ್ಜ, ತಂದೆ ಮತ್ತು  ಚಿಕ್ಕಪ್ಪನೇ ಕಳೆದ ಕೆಲವು ತಿಂಗಳಿನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದಿದ್ದಾಳೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

ಬಾಲಕಿಯನ್ನು ವೈದ್ಯಕೀಯ ತಪಾಸನೆಗೆ ಒಳಪಡಿಸಲಾಗಿದ್ದು, ಆಕೆ 2 ತಿಂಗಳ ಗರ್ಭಿಣಿ ಎಂದು ದೃಢವಾಗಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರಿದಿದೆ ಎಂದು ಎಎಸ್‌ಪಿ ಅಲೋಕ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಮೃತದೇಹದ ಜೊತೆ ಲೈಂಗಿಕ ಕ್ರಿಯೆ ಅಪರಾಧ ಅಲ್ಲ: ರೇಪ್ ಆರೋಪಿಯ ಖುಲಾಸೆ ಮಾಡಿದ ಹೈಕೋರ್ಟ್

ಸೆಕ್ಷನ್ 64 (ಎಫ್) (ಸಂಬಂಧಿ, ರಕ್ಷಕ ಅಥವಾ ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ, 65 (1) (16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ), 232 (ಯಾವುದೇ ವ್ಯಕ್ತಿಗೆ ಬೆದರಿಕೆ ಹಾಕುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಮುನಿರತ್ನ ರೇಪ್‌, ಏಡ್ಸ್‌ಟ್ರ್ಯಾಪ್‌ ನಿಜ: ಎಸ್‌ಐಟಿ ಚಾರ್ಜ್‌ಶೀಟ್‌

Latest Videos
Follow Us:
Download App:
  • android
  • ios