ಇಲ್ಲೊಬ್ಬ ಕಟ್ಟಿ ಹಾಕಿದ್ದ ಹಸುವಿಗೆ ಒದ್ದು ಅದರ ಬಾಲವನ್ನು ತಿರುವಿ ತಿರುವಿ ಹಿಂಸೆ ನೀಡಿದ್ದಾನೆ. ಒದ್ದಾಗ ಸುಮ್ಮನಿದ್ದ ಹಸು ಬಾಲ ತಿರುವಿದ ವೇಳೆ ತಾಳ್ಮೆ ಕಳೆದುಕೊಂಡಿದ್ದು, ಬಾಲ ತಿರುವಿದವನಿಗೆ ಸರಿಯಾಗಿ ಗುಮ್ಮಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ನವದೆಹಲಿ: ಸುಮ್ಮನಿರುತ್ತವೆ ಎಂದು ಯಾರ ತಾಳ್ಮೆಯನ್ನು ಕೂಡ ಪರೀಕ್ಷಿಸಬಾರದು. ಹೀಗೆ ಸುಮ್ಮನಿದ್ದವರ ಕೆಣಕಲು ಹೋದರೆ ಪರಿಣಾಮ ಕೆಲವೊಮ್ಮೆ ಘೋರವಾಗಿರುವುದು ಎಂಬುದಕ್ಕೆ ಈ ಘಟನೆಯೇ ಉತ್ತಮ ನಿದರ್ಶನ. ಪ್ರಾಣಿಗಳು ಸಾಮಾನ್ಯವಾಗಿ ಕೆಣಕದ ಹೊರತು ದಾಳಿ ಮಾಡಲು ಬರುವುದಿಲ್ಲ. ಅದರಲ್ಲೂ ಹಸುಗಳು ಸಾಧು ಪ್ರಾಣಿಗಳೆಂದೆ ಹೆಸರುವಾಸಿ. ಅದರೆ ಇಲ್ಲೊಬ್ಬ ಕಟ್ಟಿ ಹಾಕಿದ್ದ ಹಸುವಿಗೆ ಒದ್ದು ಅದರ ಬಾಲವನ್ನು ತಿರುವಿ ತಿರುವಿ ಹಿಂಸೆ ನೀಡಿದ್ದಾನೆ. ಒದ್ದಾಗ ಸುಮ್ಮನಿದ್ದ ಹಸು ಬಾಲ ತಿರುವಿದ ವೇಳೆ ತಾಳ್ಮೆ ಕಳೆದುಕೊಂಡಿದ್ದು, ಬಾಲ ತಿರುವಿದವನಿಗೆ ಸರಿಯಾಗಿ ಗುಮ್ಮಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಈ ಹಸು(Cow) ಪ್ರಾರಂಭದಲ್ಲಿ ತಾಳ್ಮೆಯಿಂದ ನಿಂತುಕೊಂಡಿತ್ತು. ಹಸುವಿನ ತಾಳ್ಮೆ ನೋಡಿದ ಆ ಕಿಡಿಗೇಡಿ ವ್ಯಕ್ತಿ ಸುಮ್ಮನಿರಲಾರದೇ ಕೆಣಕಲು ಹೋಗಿದ್ದು, ಮೊದಲಿಗೆ ಕಾಲಿನಿಂದ ಹಸುವನ್ನು ಒದ್ದಿದ್ದಾನೆ. ನಂತರ ಅದರ ಬಾಲವನ್ನು ಒಂದೇ ಸಮನೇ ಕ್ರೂರವಾಗಿ ತಿರುವಲು ಯತ್ನಿಸಿದ್ದಾನೆ. ಇದರಿಂದ ಹಸುವಿಗೂ ನೋವಾಗಲು ಶುರುವಾಗಿದ್ದು, ಒಮ್ಮೆಲೆ ಸಿಟ್ಟಿಗೆದ್ದು ಗೂಳಿಯಂತೆ ಗುಮ್ಮಿ ಬಾಲ ತಿರುವಿದವನನ್ನು ಹಣ್ಣಗಾಯಿ ನೀರುಗಾಯಿ ಮಾಡಿದೆ.

Scroll to load tweet…

ಟ್ವಿಟ್ಟರ್‌ನಲ್ಲಿ(Twitter) ಈ ವಿಡಿಯೋವನ್ನು @gharkekalesh ಎಂಬುವವರು ಪೋಸ್ಟ್ ಮಾಡಿದ್ದು, 16 ಸೆಕೆಂಡುಗಳ ಈ ವಿಡಿಯೋವನ್ನು 74 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ 3400 ಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಸು ಹಿಂಸೆ ನೀಡಿದವನಿಗೆ ಸರಿಯಾಗಿ ಪಾಠ ಕಲಿಸಿದೆ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಪೊಲೀಸ್‌ನ್ನು ಎತ್ತಿ ಬಿಸಾಕಿದ ಗೂಳಿ

ವಿಡಿಯೋದಲ್ಲಿ ಕಾಣಿಸುವಂತೆ ವಸತಿ ಪ್ರದೇಶಗಳಿರುವ ಓಣಿಯೊಂದರಲ್ಲಿ ಹಸುವಿನ ಕುತ್ತಿಗೆಗೆ ಹಗ್ಗ ಹಾಕಿ ಒಬ್ಬ ಹಿಡಿದುಕೊಂಡಿದ್ದು, ಇನ್ನೊಬ್ಬ ಹಸುವಿನ ಕಾಲಿಗೆ ಹಗ್ಗ ಹಾಕಿ ಹಿಡಿದುಕೊಂಡು ಮೊದಲಿಗೆ ಒದಿಯುತ್ತಾನೆ. ಈ ವೇಳೆ ಹಸು ಸುಮ್ಮನಿದ್ದು, ನಂತರ ಆತ ನಿರಂತರವಾಗಿ ಹಸುವಿನ ಬಾಲವನ್ನು (tail) ತಿರುವಿದ್ದಾನೆ. ಈ ವೇಳೆ ತಾಳ್ಮೆಕೆಟ್ಟ ಹಸು ಆತನನ್ನು ನೆಲಕ್ಕೆ ಕುಕ್ಕಿ ಸರಿಯಾಗಿ ತನ್ನ ಕೊಂಬಿನಿಂದ (Horn) ಕುತ್ತಿ ಕಾಲಿನಿಂದ ತುಳಿದು ಬುದ್ದಿ ಕಲಿಸಿದೆ. ಈ ವೇಳೆ ಅಲ್ಲಿದ್ದವರೆಲ್ಲಾ ಜೋರಾಗಿ ಬೊಬ್ಬೆ ಹೊಡೆಯುವುದನ್ನು ಕಾಣಬಹುದು. 

ಮೊಬೈಲ್‌ ಶೋರೂಂಗೆ ನುಗ್ಗಿದ ಗೂಳಿ! ಮುಂದೇನಾಯ್ತು ನೋಡಿ

ವಿಡಿಯೋ(Video) ನೋಡಿದ ಅನೇಕರು ವ್ಯಕ್ತಿಯ ಹಿಂಸಾತ್ಮಕ ಪ್ರವೃತ್ತಿ ಬಗ್ಗೆ ಕೆಂಡಕಾರಿದ್ದು, ಇದು ಆ ವ್ಯಕ್ತಿಯದ್ದೇ ತಪ್ಪು ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಹಸು ಚೆನ್ನಾಗಿ ಮಾಡಿದೆ. ಆತ ಈ ಶಿಕ್ಷೆಗೆ ಅರ್ಹನಾಗಿದ್ದ. ನೀವು ದೇವರ ಈ ಸುಂದರ ಸೃಷ್ಟಿಯನ್ನು ಗೌರವಿಸದಿದ್ದರೆ, ಅವುಗಳು ಕೂಡ ನಿಮ್ಮನ್ನು ಗೌರವಿಸುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನನಗೆ ತುಂಬಾ ಖುಷಿ ನೀಡಿತು. ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ನಿಲ್ಲಿಸಿ. ಹಸುವಿನ ಪ್ರತೀಕಾರ ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬುದರ ಬಗ್ಗೆ ಉಲ್ಲೇಖವಿಲ್ಲ.