ಪತ್ನಿ ತಲೆ ಕಡಿದು ಪೊಲೀಸ್ ಠಾಣೆಗೆ ಆಗಮಿಸಿದ ಕ್ರೂರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್!

ಪತ್ನಿ ತಲೆಯನ್ನು ಕಡಿದು ಪೊಲೀಸ್ ಠಾಣೆಗೆ ನಡೆದುಕೊಂಡು ಬಂದು ಶರಣಾದ ಪಾಪಿ ಪತಿಗೆ ಇದೀಗ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಆದರೆ ಈ ಶಿಕ್ಷೆಗೆ ಬರೋಬ್ಬರಿ 60 ದಿನಾಂಕ, ಐವರು ಜಡ್ಜ್, 11 ಸಾಕ್ಷಿಗಳನ್ನು ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ.
 

Court sentence Death penalty to Man who killed and beheaded wife for illicit relationship UP ckm

ಲಖನೌ(ಆ.01) ಅಕ್ರಮ ಸಂಬಂಧ ಅನುಮಾನ ಮೇಲೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಗಂಡ ತಲೆ ಕತ್ತರಿಸಿದ್ದ. ಬಳಿಕ ತಲೆ ಹಿಡಿದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಪಾಪಿಗೆ ಇದೀಗ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಸುದೀರ್ಘ ವಿಚಾರಣೆಗಳ ಬಳಿಕ ಉತ್ತರ ಪ್ರದೇಶದ ಬಂದಾ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದೆ.  39 ವರ್ಷದ ಕಿನ್ನರ್ ಯಾದವ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. 

ನೇತಾ ಪಟ್ಟಣದ ಬಬೇರೋ ಕೋತ್ವಾಲಿ ವಲಯದ ಕಿನ್ನರ್ ಯಾದವ್ ತನ್ನ ಪತ್ನಿ ವಿಮಲಾ ದೇವಿಯನ್ನು 2020ರಲ್ಲಿ ಹತ್ಯೆಗೈದಿದ್ದ. ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇದೆ ಅನ್ನೋದು ಆರೋಪ. ನಾಲ್ಕು ವರ್ಷಗಳ ಹಿಂದೆ ಪತ್ನಿ, ಬೇರೊಬ್ಬನ ಜೊತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಳು. ಇದು ಕಿನ್ನರ್ ಯಾದವ್ ಆಕ್ರೋಶ ಹೆಚ್ಚಿಸಿತ್ತು. ವಾರ್ನಿಂಗ್ ಬಳಿಕವೂ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ಕೊಡಲಿಯಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದ. 

ಹಾಡ ಹಗಲೇ ಮಹಿಳೆ ಹತ್ಯೆಗೈದು ಮೃತದೇಹ ಗಂಗಾ ನದಿಗೆ ಎಸೆದ ದೃಶ್ಯ ಸೆರೆ, ಪೊಲೀಸರು ಅಲರ್ಟ್!

ಇಷ್ಟಕ್ಕೆ ಕಿನ್ನರ್ ಯಾದವ್ ಆಕ್ರೋಶ ತಣಿದಿರಲಿಲ್ಲ. ಅದೇ ಕೊಡಲಿಯಿಂದ ರುಂಡವನ್ನೇ ಬೇರ್ಪಡಿಸಿದ್ದ. ರಕ್ಷಣೆಗೆ ಧಾವಿಸಿದ ಪತ್ನಿಯ ಗೆಳೆಯನ ಮೇಲೂ ಈತ ಹಲ್ಲೆ ನಡೆಸಿದ್ದ. ಪತ್ನಿಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸಾಗಿದ್ದ. ನಡೆದುಕೊಂಡೇ ಪೊಲೀಸ್ ಠಾಣೆಗೆ ತೆರಳಿ ನಡದ ಘಟನೆ ವಿವರಿಸಿ ಶರಣಾಗಿದ್ದ. ಕಿನ್ನರ್ ಯಾದವ್ ಬಂಧಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿದ ಪೊಲೀಸರು ಕಠಿಣ ಶಿಕ್ಷೆಗೆ ಕೋರ್ಟ್ ಮುಂದೆ ಮನವಿ ಮಾಡಿದ್ದರು. ಇತ್ತ ಉತ್ತರ ಪ್ರದೇಶದ ಬಂದಾ ಕೋರ್ಟ್ ಈ ಪ್ರಕರಣದ ವಿಚಾರಣೆಗೆ ಒಟ್ಟು 60 ದಿನಾಂಕ ಫಿಕ್ಸ್ ಮಾಡಿ ವಿಚಾರಣೆ ಮಾಡಿತ್ತು. ಕೋರ್ಟ್ ಮುಂದೆ 11 ಪ್ರತ್ಯಕ್ಷ ಸಾಕ್ಷಿಗಳು ಸಾಕ್ಷಿ ನುಡಿದಿದ್ದರು. ಎಲ್ಲಾ ದಾಖಲೆ, ಸಾಕ್ಷಿಗಳನ್ನು ಪರಿಗಣಸಿದ ಕೋರ್ಟ್, ಕಿನ್ನರ್ ಯಾದವ್ ದೋಷಿ ಎಂದು ತೀರ್ಪ ನೀಡಿತು. ಪತ್ನಿ ಹತ್ಯೆ ಬಳಿಕ ಪತ್ನಿ ಅಕ್ರಮ ಸಂಬಂಧ ಬೆಳೆಸಿದ ಎನ್ನಲಾದ ವ್ಯಕ್ತಿ ರಕ್ಷಣೆಗೆ ಧಾವಿಸಿದಾಗ ಆತನ ಮೇಲೂ ಹಲ್ಲೆ ಮಾಡಲಾಗಿತ್ತು. ಈ ಘಟನೆ ಬಳಿಕ ಈತ ಊರು ಬಿಟ್ಟಿದ್ದ. 2.5 ವರ್ಷ ಪೊಲೀಸರು ಹುಡುಕಾಡಿ ಕೊನೆಗೆ ಈ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದರು. ಬಳಿಕ ಈತನಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಈತ ಚಿಕಿತ್ಸೆ ಪಡೆದ ಕ್ಲಿನಿಕ್ ದಾಖಲೆಗಳನ್ನು ತೆಗೆದು ಕೋರ್ಟ್‌ಗೆ ಸಲ್ಲಿಸಲಾಗಿತ್ತು. 

ಮಕ್ಕಳಿಗೆ ಭಾರವಾಗಿ ಬದುಕಲು ಸಾಧ್ಯವಿಲ್ಲ ಎಂದು ಬದುಕು ಅಂತ್ಯಗೊಳಿಸಿದ ಹಿರಿಯ ಪೋಷಕರು!

ಬಳಿಕ ಶಿಕ್ಷೆ ಪ್ರಕಟಿಸಿತ್ತು. ಕ್ರೂರವಾಗಿ ಪತ್ನಿಯ ಹತ್ಯೆಗೈದ ಕಿನ್ನರ್ ಯಾದವ್‌ಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಈ ವಿಚಾರಣೆ ನಡುವೆ ಬಂದಾ ಕೋರ್ಟ್‌ನಲ್ಲಿ ಐವರು ನ್ಯಾಯಾಧೀಶರು ಬದಲಾಗಿದ್ದಾರೆ. ಹತ್ಯೆ ನಡೆದ 4.5 ವರ್ಷಗಳ ಬಳಿಕ ನ್ಯಾಯ ಹೊರಬಿದ್ದಿದೆ.

Latest Videos
Follow Us:
Download App:
  • android
  • ios