Asianet Suvarna News Asianet Suvarna News

ತಿರುಪತಿಯ ಹೊಟೇಲ್‌ನಲ್ಲಿ ನೇಣಿಗೆ ಶರಣಾದ ಜೋಡಿ

ಹಿಂದೂ ತೀರ್ಥಕ್ಷೇತ್ರ ತಿರುಪತಿಯ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ಯುವಜೋಡಿಯೊಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.

couple hanged themselves in lodge near Tirupati temple akb
Author
First Published Nov 10, 2022, 12:49 PM IST

ತಿರುಪತಿ: ಹಿಂದೂ ತೀರ್ಥಕ್ಷೇತ್ರ ತಿರುಪತಿಯ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ಯುವಜೋಡಿಯೊಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಪೂರ್ವ ಗೋದಾವರಿಯ ಕೊವ್ವುರು ನಿವಾಸಿ ಅನುಷಾ ಹಾಗೂ ಹೈದರಾಬಾದ್ ನಿವಾಸಿ ಕೃಷ್ಣರಾವ್ ಎಂದು ಗುರುತಿಸಲಾಗಿದೆ. ಈ ಜೋಡಿ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ರೂಮ್ ಪಡೆದಿದ್ದರು. 

ಆದರೆ ಲಾಡ್ಜ್‌ನಲ್ಲಿ(Lodge) ಕೆಲಸ ಮಾಡುವ ಸಿಬ್ಬಂದಿ ಹಲವು ಬಾರಿ ಬಾಗಿಲು (Door) ಬಡಿದರು ಒಳಗಿನಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಲಾಡ್ಜ್ ಮಾಲೀಕ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ನಂತರ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು(Police) ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಇಬ್ಬರ ಶವ ಕೊಠಡಿಯೊಳಗಿನ ಸೀಲಿಂಗ್ ಫ್ಯಾನ್‌ನಲ್ಲಿ (ceiling Fan) ನೇತಾಡುತ್ತಿರುವುದು ಕಂಡುಬಂದಿದೆ.

ಮೈಸೂರು: ಶಿಕ್ಷಕನ ಮನೆಯಲ್ಲಿ ನೋವಿನ ಮೇಲೆ ನೋವು, ಈಗ ಮತ್ತೊಂದು ಆತ್ಮಹತ್ಯೆ..!

ಅನುಷಾಗೆ ನಾಲ್ಕು ತಿಂಗಳ ಹಿಂದಷ್ಟೇ ಬೇರೆ ವ್ಯಕ್ತಿಯ ಜೊತೆ ವಿವಾಹವಾಗಿದ್ದು, ಆಕೆಯ ಸಮ್ಮತಿ ಇಲ್ಲದೇ ಪೋಷಕರು (Parents) ಒತ್ತಾಯಪೂರ್ವಕವಾಗಿ ಈ ವಿವಾಹ ಮಾಡಿದ್ದರು ಆದರೆ ಈಗ ಮತ್ತೊರ್ವ ಪುರುಷನೊಂದಿಗೆ ಹೊಟೇಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಷಾ ಪೋಷಕರು ಈ ಬಗ್ಗೆ ಕೊವ್ವುರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತಿರುಪತಿ ಪೊಲೀಸ್ ಠಾಣೆಯಲ್ಲಿ (Tirupati Police station) ಪ್ರಕರಣ ದಾಖಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬೆಚ್ಚಿ ಬೀಳಿಸುತ್ತಿದೆ ಹಾವೇರಿ ರೈತರ ಆತ್ಮಹತ್ಯೆ, 10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್!

couple hanged themselves in lodge near Tirupati temple akb

Follow Us:
Download App:
  • android
  • ios