ಚನ್ನಪಟ್ಟಣ(ಜೂ.02): ಪ್ರೀತಿಯ ಮೋಹಕ್ಕೆ ಸಿಲುಕಿದ ಮಗಳು ಓಡಿಹೋಗಿ ಮದುವೆಯಾದಳು ಎಂಬ ಕಾರಣಕ್ಕೆ ಮನನೊಂದ ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತೆಂಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 

ಎಚ್‌.ಬ್ಯಾಡರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್‌(50), ಅವರ ಪತ್ನಿ ಶೈಲಜಾ(42) ಮೃತ ದುರ್ದೈವಿಗಳು. ಇವರ ಪುತ್ರಿ ಶಿಲ್ಪಾ, ಅದೇ ಗ್ರಾಮದ ಪುನೀತ್‌ ಎಂಬ ಯುವಕನೊಂದಿಗೆ ಮೇ 30ರಂದು ಓಡಿ ಹೋಗಿ ಮದುವೆಯಾಗಿದ್ದಳು ಎನ್ನಲಾಗಿದೆ.

ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸುಸೈಡ್ ಮಾಡಿಕೊಂಡ!

ಪ್ರೀತಿಸಿದ್ದಳು. ಇಬ್ಬರು ಒಂದೇ ಜಾತಿಯವರಾದರೂ ಮದುವೆಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮೇ 30ರಂದು ಶಿಲ್ಪಾ ಪ್ರಿಯಕರನ ಜತೆ ಓಡಿಹೋಗಿ ಮದುವೆಯಾಗಿದ್ದರಿಂದ, ಮನನೊಂದು ದಂಪತಿ ತಮ್ಮ ತೋಟದಲ್ಲಿ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.