ರಾಂಚಿ(ಸೆ. 27)  ಆಘಾತಕಾರಿ ಘಟನೆಯೊಂದರಲ್ಲಿ, ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.  ಪುರುಷ ಮತ್ತು ಮಹಿಳೆಗೆ ಬೆದರಿಕೆ ಹಾಕಿ ಅವರನ್ನು ಊರಿನ ತುಂಬಾ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ.

ಮೆರವಣಿಗೆ ಮಾಡಿದ್ದು ಅಲ್ಲದೆ ಇಡೀ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಕ್ಕೆ ಬಿಡಲಾಗಿದೆ. ಹಳ್ಳಿಯ ಪಂಚಾಯಿತಿ ಪುರುಷ 5 ಲಕ್ಷ ರೂ. ದಂಡ ನೀಡಬೇಕು ಎಂದು  ತೀರ್ಮಾನ ನೀಡಿದೆ.  ಜೋಡಿ  ಸಮಾಜಕ್ಕೆ ಒಪ್ಪಿತವಲ್ಲದ ಭಂಗಿಯಲ್ಲಿ ಇತ್ತು ಎಂಬುದು ಗ್ರಾಮಸ್ಥರ ಆರೋಪ.

ನಾಚಿಕೆ ಬಿಟ್ಟ ಮಾಯಾಂಗನೆಯರು; ರಸ್ತೆಯಲ್ಲೇ ಖುಲ್ಲಂ ಖುಲ್ಲ

ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಕೋಪಗೊಂಡ ಗ್ರಾಮಸ್ಥರಿಂದ ಹತ್ಯೆಗೈಯ್ಯಲು ಹೊರಟಿದ್ದ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ. ಬರ್ಹರ್ವಾ ಸಾಹಿಬ್‌ಗಂಜ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಡಿಪಿಒ) ಪ್ರಮೋದ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮಹಾರಾಷ್ಟ್ರದಲ್ಲಿಯೂ ಕ್ಷುಲ್ಲಕ ಕಾರಣಕ್ಕೆ ದಂಪತಿ ಮೇಲೆ ದಾಳಿ ಮಾಡಿದ ಪ್ರಕರಣ ವರದಿಯಾಗಿದೆ.  ಈ ನೈತಿಕ ಪೊಲೀಸ್ ಗಿರಿಯನ್ನು ಅನೇಕ ಸಂಘಟನೆಗಳು ಖಂಡಿಸಿವೆ.