ನಾಚಿಕೆ ಬಿಟ್ಟ 6 ಮಾಯಾಂಗನೆಯರು ರಸ್ತೆಯಲ್ಲೇ ಖುಲ್ಲಂ ಖುಲ್ಲ!
ರಸ್ತೆ ಮಧ್ಯೆಯೇ ನಾಚಿಕೆ ಬಿಟ್ಟ ವರ್ತನೆ/ ಆರು ಜನ ಮಹಿಳೆಯರ ಬಂಧನ/ ಪುರುಷರನ್ನು ಬುಟ್ಟಿಗೆ ಹಾಕಿಕೊಂಡು ಹಣ ಪೀಕುವ ಜಾಲ/ ಗುಜರಾತ್ ನಲ್ಲಿ ಘಟನೆ

ಅಹಮದಾಬಾದ್( ಸೆ.11) ಪುರುಷರ ಧಿರಿಸು ಧರಿಸಿ ನಾಚಿಕೆ ಬಿಟ್ಟ ವರ್ತನೆ ತೋರುತ್ತಿದ್ದ ಆರು ಮಹಿಳೆಯರನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ.
ಗುಜರಾತ್ ನ ಅಮ್ರೆಲಿ ಜಿಲ್ಲೆಯ ರಾಜುಲಾ ಪಟ್ಟಣದಲ್ಲಿ ಘಟನೆ ನಡೆದಿದೆ. ಪುರುಷರನ್ನು ಬಲೆಗೆ ಕೆಡವಿ ಹಣ ವಸೂಲಿ ಮಾಡಲು ಹೊಂಚು ಹಾಕಿದ್ದರು ಎಂಬುದು ಗೊತ್ತಾಗಿದೆ. ಅಶ್ಲೀಲ ಭಾಷೆಯಲ್ಲಿ ಮಾತನಾಡುತ್ತಾ ಪುರುಷರನ್ನೇ ಫ್ಲರ್ಟ್ ಮಾಡುತ್ತಿದ್ದರು. ಮಹಿಳೆಯರನ್ನು ಬಂಧಿಸಲಾಗಿದ್ದು ಕೊರೋನಾ ಟೆಸ್ಟ್ ಗೆ ಕಳಿಸಲಾಗಿದೆ.
ಟೋಲ್ ಗೇಟ್ ನಲ್ಲೆ ಬಟ್ಟೆ ಕಳಚಿ ಬೆತ್ತಲಾಗಿ ಕುಳಿತ ಸ್ವಾಮೀಜಿ
ಪಟ್ಟಣದ ರಾಧಿಕಾ ಹೋಟೆಲ್ ಬಳಿ ಆರು ಮಹಿಳೆಯರು ನಾಚಿಕೆಬಿಟ್ಟು ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಾರುವೇಷದಲ್ಲಿದ್ದ ಪೊಲೀಸರ ಬಳಿಯೆ ತಮ್ಮ ವರಸೆ ತೋರಿಸಲು ಆರಂಭಿಸಿದ್ದಾರೆ. ನಾವು ಅಹಮದಾಬಾದಿನವರು ಎಂದು ಪರಿಚಯ ಮಾಡಿಕೊಂಡಿದ್ದಾರೆ.
ಹಾಗಾದರೆ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದಾಗ ಉತ್ತರ ಕೊಡಲು ತಡಬಡಾಯಿಸಿದ್ದಾರೆ. ವಶಕ್ಕೆ ಪಡೆದಾಗ ಒಂದೊಂದೆ ವಿಚಾರ ಬಯಲಾಗಿದೆ. ಪುರುಷರ ಮುಂದೆ ವೈಯ್ಯಾರ ತೋರಿಸಿ ಅವರನ್ನು ಬುಟ್ಟಿಗೆ ಹಾಕಿಕೊಂಡು ಹಣ ಪೀಕಿಸಲು ಮುಂದಾಗಿದ್ದ ಮಹಿಳೆಯರೀಗ ಪೊಲೀಸರ ಆತಿಥ್ಯದಲ್ಲಿದ್ದಾರೆ.