Asianet Suvarna News Asianet Suvarna News

ಲಹರಿ ವರ್ಸಸ್ ಕಿರಿಕ್ ಪಾರ್ಟಿ,  ಕೋರ್ಟ್‌ಗೆ ಬಂದ ರಕ್ಷಿತ್‌ ಶೆಟ್ಟಿ

ಕೋರ್ಟ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಜರ್/ ಕಿರಿಕ್ ಪಾರ್ಟಿ ಸಿನಿಮಾ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ ಲಹರಿ ಸಂಸ್ಥೆ/ ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ ಲಹರಿ ಆಡಿಯೋ ಸಂಸ್ಥೆ/ ಕಳೆದ ಕೆಲ ವರ್ಷಗಳಿಂದ ಕೋರ್ಟ್ ನಲ್ಲಿ ಕೇಸ್ ನ ವಿಚಾರಣೆ ನಡೆಯುತ್ತಿತ್ತು/ ವಿಚಾರಣಗೆ ಹಾಜಾರಾಗದ ಹಿನ್ನೆಲೆ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ ವಾರೆಂಟ್ ನೀಡಲಾಗಿತ್ತು

Copyright Violation case Actor Rakshit Shetty appears before court mah
Author
Bengaluru, First Published Apr 12, 2021, 3:08 PM IST

ಬೆಂಗಳೂರು(ಏ. 12) ನ್ಯಾಯಾಲಯಕ್ಕೆ ರಕ್ಷಿತ್ ಶೆಟ್ಟಿ ಹಾಜರ್ ಆಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಲಹರಿ ಸಂಸ್ಥೆ  ಮುಂದಾಗಿತ್ತು. ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿತ್ತು.

ಕಳೆದ ಕೆಲ ವರ್ಷಗಳಿಂದ ಕೋರ್ಟ್ ನಲ್ಲಿ ಕೇಸ್ ನ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಗೆ ಹಾಜಾರಾಗದ ಹಿನ್ನೆಲೆ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ   ಜಾಮೀನು ರಹಿತ ವಾರೆಂಟ್ ನೀಡಲಾಗಿತ್ತು

ಸೋಮವಾರ 9ನೇ ಎಸಿಎಮ್ಎಮ್ ಕೋರ್ಟ್ ಮುಂದೆ ಹಾಜಾರಾದ ನಟ ರಕ್ಷಿತ್ ಶೆಟ್ಟಿಗೆ ನಗದು ಶ್ಯೂರಿಟಿ ಕೊಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ನಗದು ಶ್ಯೂರಿಟಿಗೆ ಶೆಟ್ಟಿ ವ್ಯವಸ್ಥೆ ಮಾಡಿದ್ದಾರೆ.

ರಶ್ಮಿಕಾಗೆ ಶೆಟ್ಟರಿಂದ ವಿಶಿಷ್ಟ ಬರ್ತಡೆ ವಿಶ್

ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು.

"

ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್  ಕಾನೂನು ಹೋರಾಟ ಆರಂಭಿಸಿತ್ತು.  ಕಾಪಿ ರೈಟ್ಸ್ ಆಕ್ಟ್ 63ಎ ಮತ್ತು  63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು..

ಸೆಪ್ಟಂಬರ್ 28, 2019 ರಲ್ಲಿ ಕೇಸು ದಾಖಲಾಗಿತ್ತು. ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಕೊನೆಗೆ ಆಡರ್ ಟೆಕಿಂಗ್ ಪಡೆದುಕೊಂಡು ಸಿನಿಮಾ ರಿಲೀಸ್ ಆಗಿತ್ತು. ಕ್ರಿಮಿನಲ್ ಕೇಸ್ ವಿಚಾರಣೆ ಎಸಿಎಂಎಂ ಕೋರ್ಟ್ ನಲ್ಲಿ ಮುಂದುವರೆದಿತ್ತು.

 

Follow Us:
Download App:
  • android
  • ios