25ರ ವಸಂತಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 6 ವರ್ಷದ ಹಳೆ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ವೈಯಕ್ತಿಕ ವಿಚಾರಗಳಿಂದ ದೂರವಾದ ರಶ್ಮಿಕಾ-ರಕ್ಷಿತ್, ಸಾನ್ವಿ- ಕರ್ಣನಿಂದ ಮತ್ತೆ ಒಂದಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ, ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

ಕೊನೆಗೂ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ ರಕ್ಷಿತ್ ಶೆಟ್ಟಿ! 

'ಕಿರಿಕ್ ಪಾರ್ಟಿ ಚಿತ್ರದ ಆಡಿಷನ್‌ ವೇಳೆ ಸೆರೆ ಹಿಡಿದ ನಿನ್ನ ಬ್ಯೂಟಿಫುಲ್ ವಿಡಿಯೋವಿದು. ತುಂಬಾ ದೂರ ಪ್ರಯಣಿಸಿರುವೆ, ರಿಯಲ್ ವಾರಿಯರ್‌ ರೀತಿ ನಿನ್ನ ಕನಸುಗಳನ್ನು ಹುಡುಕಿಕೊಂಡು ಹೊರಟಿರುವೆ.  ಹೆಮ್ಮೆಯಾಗುತ್ತಿದೆ. ಹ್ಯಾಪಿ ಬರ್ತಡೇ. ಯಶಸ್ಸು ನಿನ್ನದಾಗಲಿ ರಶ್ಮಿಕಾ,' ಎಂದು ರಕ್ಷಿತ್ ಶೆಟ್ಟಿ ಟ್ಟೀಟ್ ಮಾಡಿದ್ದಾರೆ.

ತಮ್ಮ ಮೊದಲ ಚಿತ್ರಕ್ಕೆ  ಕರ್ನಾಟಕದ ಕ್ರಶ್‌ ಕಿರೀಟ ಪಡೆದ ರಶ್ಮಿಕಾ ಮಂದಣ್ಣ ಯಶಸ್ವಿಗೆ ಕ್ರೆಡಿಟ್‌ ನೀಡಬೇಕಿರುವುದು ರಕ್ಷಿತ್ ಶೆಟ್ಟಿಗೆ. ಇಬ್ಬರೂ ಪ್ರೀತಿಸಿ,  ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು, ಆದರೆ ಇಬ್ಬರ ನಡುವೆ ಏನಾಯಿತೋ, ಏನೋ ಗೊತ್ತಿಲ್ಲ ದೂರವಾದರು. ಈ ಕಾರಣಕ್ಕೆ ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಸದಾ ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಅಲ್ಲದೇ ಟ್ರೋಲ್ ಪೇಜ್‌ ಮೂಲಕ ಕಾಲೆಳೆಯಲು ಆರಂಭಿಸಿದ್ದರು. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ, ತಮ್ಮ ಕನಸುಗಳನ್ನು ಚೇಸ್ ಮಾಡಿಕೊಂಡು ಹೊರಟರು. ಕಣ್ಣ ಮುಂದೆಯೇ ಒಂದಾದ ಒಂದಾದ ಮೇಲೆ ಮತ್ತೊಂದು ಚಿತ್ರ ಮಾಡಿದ ರಶ್ಮಿಕಾ ಬರೀ ಸ್ಯಾಂಡಲ್‌ವುಡ್ ಮಾತ್ರವಲ್ಲ. ಟಾಲಿವುಡ್, ಕಾಲಿವುಡ್, ಇದೀಗ ಇಂದು ಬಾಲಿವುಡ್‌ ಅಂಗಳದಲ್ಲಿಯೂ ಮಿಂಚಲು ಸಿದ್ದವಾಗಿದ್ದಾರೆ. ಅದೂ ಅಮಿತಾಭ್ ಬಚ್ಚನ್ ಅವರಂಥ ಮಹಾನ್ ನಟರ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಕಾಶ್ಮೀರದಲ್ಲಿ ರಕ್ಷಿತ್‌ ಶೆಟ್ಟಿ;ಕೊರೆಯುವ ಚಳಿಯಲ್ಲೂ ಚಾರ್ಲಿ ಹಂಗಾಮ! 

'ಇವಳಿಗೆ ಕನ್ನಡ ಬರೋದಿಲ್ಲ, ಆದ್ರೂ ಅವಕಾಶ ಕೊಟ್ರಿ.. ಇವಳು ಬೇರೆ ಬಾಷೆ ಕಲಿಯೋ ಹುಮ್ಮಸ್ಸು ಕನ್ನಡ ಕಲಿಯೋದ್ರಲ್ಲಿ ತೋರಿಸಲಿಲ್ಲ; ಏನ್ ಕೊಡಗಿಂದ ಬಂದ್ರೆ ಎರಡು ಕೊಂಬಿರುತ್ತಾ.. ನನ್ನ ಹೆಂಡತಿನ ಕೊಡಗಿನ ಗೌಡತಿ.. ಇಷ್ಟೆಲ್ಲಾ ನಕರ ಆಡೋಲ್ಲ. ನೀವು ಬೆರಳು ತೋರಿಸಿದ್ರಿ, ಹಸ್ತ ನುಂಗಿ Back ತೋರಿಸಿ ಕೈಕೊಟ್ಟು ಹೋದ್ಲು. ಅದೃಷ್ಟ ಅನ್ನೋದು ಯಾರಪ್ಪನ ಗಂಟು,' ಎಂದು ರಕ್ಷಿತ್ ವಿಶ್‌ಗೆ ನೆಟ್ಟಿಗನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕೈ ಕೊಟ್ಟರೂ ರಶ್ಮಿಕಾ ಹುಟ್ಟಿದಬ್ಬಕ್ಕೆ ವಿಶ್ ಮಾಡಿ, ಒಳ್ಳೇಯದಾಗಲೆಂದು ಹೃದಯ ವೈಶಾಲ್ಯತೆ ತೋರಿದ ರಕ್ಷಿತ್ ವಿಶ್ ಹಲವರು ಗ್ರೇಟ್ ಎಂದು ಹೇಳಿದ್ದಾರೆ.