*  ಸಿಸಿಟಿವಿ ಕ್ಯಾಮೆರಾ ಆಧರಿಸಿ ಪತ್ತೆ ಹಚ್ಚಿದ ರೈಲ್ವೆ ಪೊಲೀಸರು *  ತಮಿಳುನಾಡಿನಲ್ಲಿ ಕಣ್ತಪ್ಪಿನಿಂದ ಬೇರೆ ಪ್ರಯಾಣಿಕರ ಮನೆಗೆ ಸೇರಿದ್ದ ಚಿನ್ನಾಭರಣವಿದ್ದ ಬ್ಯಾಗ್‌ *  ಈ ಬಗ್ಗೆ ಟೆಕ್ಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು  

ಬೆಂಗಳೂರು(ಜು.01): ತಮಿಳುನಾಡಿನಲ್ಲಿ ಕಣ್ತಪ್ಪಿನಿಂದ ಬೇರೆ ಪ್ರಯಾಣಿಕರ ಮನೆಗೆ ಸೇರಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರ 137 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಧರಿಸಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಮರಳಿಸಿದ್ದಾರೆ.

ರಾಜಾಜಿ ನಗರ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ನಿವಾಸಿ ಮಂಜುನಾಥ್‌ ಬ್ಯಾಗ್‌ ಕಳೆದುಕೊಂಡಿದ್ದು, ಜೂ.13ರಂದು ತಮಿಳುನಾಡಿನಿಂದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕುಟುಂಬದ ಜತೆ ಮರಳುವಾಗ ಅವರು ಬ್ಯಾಗ್‌ ಕಳೆದುಕೊಂಡಿದ್ದರು. ಈ ಬಗ್ಗೆ ಟೆಕ್ಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಡಿವೈಎಸ್ಪಿ ಗೀತಾ ನೇತೃತ್ವದ ಪಿಎಸ್‌ಐ ಪುರುಷೋತ್ತಮ್‌ ತಂಡವು, ರೈಲು ನಿಲ್ದಾಣದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಬ್ಯಾಗ್‌ ಪತ್ತೆ ಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ಸಿರಿಗೌರಿ ತಿಳಿಸಿದ್ದಾರೆ.

ಚಿನ್ನದ ಸರ ಹೊತ್ತು ಸಾಗುತ್ತಿರುವ ಪುಟ್ಟ ಸ್ಮಗ್ಲರ್‌ಗಳು: ಗೊಂದಲದಲ್ಲಿ ಪೊಲೀಸರು

ತಮಿಳುನಾಡಿನಿಂದ ರೈಲಿನಲ್ಲಿ ಮಂಜುನಾಥ್‌ ಕುಟುಂಬದ ಜತೆ ಅದೇ ಬೋಗಿಯಲ್ಲಿ ಬೇರೊಂದು ಕುಟುಂಬ ಸಹ ನಗರಕ್ಕೆ ಬಂದಿತ್ತು. ರೈಲ್ವೆ ನಿಲ್ದಾಣದಲ್ಲಿ ಇಳಿಯುವಾಗ ಕಣ್ತಪ್ಪಿನಿಂದ ಮಂಜುನಾಥ್‌ ಅವರಿಗೆ ಸೇರಿದ ಟ್ರಾಲಿ ಬ್ಯಾಗ್‌ ಅನ್ನು ಅವರು ತೆಗೆದುಕೊಂಡು ಹೋಗಿದ್ದರು.