ಸಚಿವರ ಮನೆ ಮುಂದೆ ಬೆಳಗ್ಗೆ 9.45ರ ಸುಮಾರಿಗೆ ಎಡಗೈ ಕುಯ್ದುಕೊಂಡು ನಿತ್ರಾಣನಾಗಿ ನವೀನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಅಲ್ಲೇ ಭದ್ರತೆಯಲ್ಲಿ ಪೊಲೀಸರು ದಾಖಲಿಸಿದರು. ವೈದ್ಯಕೀಯ ಚಿಕಿತ್ಸೆಗೆ ಕಾನ್‌ಸ್ಟೇಬಲ್ ಸ್ಪಂದಿಸುತ್ತಿದ್ದು, ಆತ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ.
ಬೆಂಗಳೂರು(ಜ.12): ಜೀವನದಲ್ಲಿ ಜಿಗುಪ್ಸೆಗೊಂಡು ನಗರ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್‌ವೊಬ್ಬರು ಗೃಹ ಸಚಿವರ ಮನೆ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೆಗಡೆ ನಗರದ ನಿವಾಸಿ ನವೀನ್ ಕುಮಾರ್ (25) ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಯಮಹಲ್ ರಸ್ತೆಯಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಭದ್ರತಾ ಕರ್ತವ್ಯದಲ್ಲಿ ಮಂಗಳವಾರ ನವೀನ್ ನಿರತನಾಗಿದ್ದಾಗ ಈ ಘಟನೆ ನಡೆದಿದೆ.
ಸಚಿವರ ಮನೆ ಮುಂದೆ ಬೆಳಗ್ಗೆ 9.45ರ ಸುಮಾರಿಗೆ ಎಡಗೈ ಕುಯ್ದುಕೊಂಡು ನಿತ್ರಾಣನಾಗಿ ನವೀನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಅಲ್ಲೇ ಭದ್ರತೆಯಲ್ಲಿ ಪೊಲೀಸರು ದಾಖಲಿಸಿದರು. ವೈದ್ಯಕೀಯ ಚಿಕಿತ್ಸೆಗೆ ಕಾನ್‌ಸ್ಟೇಬಲ್ ಸ್ಪಂದಿಸುತ್ತಿದ್ದು, ಆತ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ: ಮದುವೆಗೆ ಹೆಣ್ಣು ಸಿಕ್ಕಿಲ್ಲ ಅಂತ ಆತ್ಮಹತ್ಯೆಗೆ ಯತ್ನಿಸಿದ ಭೂಪ..!
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಪನಹಳ್ಳಿ ಗ್ರಾಮದ ನವೀನ್, 2020ರಲ್ಲಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ಯ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದ. ಪ್ರಸುತ್ತ ಉತ್ತರ ವಿಭಾಗದ ಸಿಎಆರ್‌ನಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದು, ಗೃಹ ಸಚಿವರ ಮನೆ ಭದ್ರತೆಗೆ ನವೀನ್‌ನನ್ನು ಅಧಿಕಾರಿಗಳು ನಿಯೋಜಿಸಿದ್ದರು. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದ ನವೀನ್, ಈ ಹಿಂದೆ ಸಹ ಎರಡ್ಮೂರು ಬಾರಿ ಕೈ ಕುಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದ. ಅದೇ ರೀತಿ ಮಂಗಳವಾರ ಸಹ ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
