* ಜಾಮೀನು ಸಿಕ್ಕರೂ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಬಿಡುಗಡೆ ಭಾಗ್ಯವಿಲ್ಲ*ವಿನಯ್​ ಕುಲಕರ್ಣಿ ಇನ್ನೊಂದು ದಿನ‌ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ* :ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್​ ಕುಲಕರ್ಣಿ

ಬೆಳಗಾವಿ, (ಆ.20): ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ.

"

ವಿನಯ್ ಕುಲಕರ್ಣಿ ಅವರಿಗೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಸಾಕ್ಷ್ಯನಾಶ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದ್ರೆ, ಜಾಮೀನು ಸಿಕ್ಕರೂ ಆದೇಶ ಪ್ರತಿ ಬಾರದ ಕಾರಣ ಇನ್ನೊಂದು ದಿನ‌ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. 

ಕೊನೆಗೂ ವಿನಯ್ ಕುಲಕರ್ಣಿಗೆ ಜಾಮೀನು.. 9 ತಿಂಗಳ ಸೆರೆವಾಸ ಮುಕ್ತಾಯ

ಜಾಮೀನು ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆ, ಜಾಮೀನು ನೀಡುವ ವೇಳೆಗೆ ಸ್ಥಳೀಯ ಕೋರ್ಟ್‌ನಲ್ಲಿ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿರುವ ಮಾಹಿತಿ ಲಭ್ಯವಾಗಿದೆ. ಆದರೆ ಇಂದು (ಆ.20) ನ್ಯಾಯಾಲಯಕ್ಕೆ ರಜೆ ಇರುವುದರಿಂದ ಶ್ಯೂರಟಿ ಪಡೆದುಕೊಳ್ಳಲು ಸಾಧ್ಯವಾಗೋದಿಲ್ಲ. ಹೀಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಡುಗಡೆ ಇಲ್ಲ ಎಂದು ತಿಳಿದುಬಂದಿದೆ. ನಾಳೆಯೇ ವಿನಯ್ ಕುಲಕರ್ಣಿ ಅವರ ಬಿಡುಗಡೆ ಸಾಧ್ಯತೆ ಇದೆ.

ಇನ್ನು ಮಾಜಿ ಸಚಿವರು ಇಂದು ಬಿಡುಗಡೆ ಆಗೋದಿಲ್ಲ ಎಂಬ ಕಾರಣಕ್ಕೆ ಜೈಲು ಅಧಿಕಾರಿ ಹಾಗೂ ಸಿಪಿಐ ಸುನೀಲ್ ಕುಮಾರ್ ಚರ್ಚೆ ನಡೆಸಿ ಜೈಲಿನ ಬಳಿ ಏರ್ಪಡಿಸಿದ್ದ ಭದ್ರತೆ ವಾಪಸ್ ಪಡೆದುಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ ಹಿಂಡಲಗಾ ಜೈಲಿನಿಂದ ವಾಪಸ್​ ಹೋಗಿದೆ.