ಕೊನೆಗೂ ವಿನಯ್ ಕುಲಕರ್ಣಿಗೆ ಜಾಮೀನು.. 9 ತಿಂಗಳ ಸೆರೆವಾಸ ಮುಕ್ತಾಯ

* ಯೋಗೇಶ್ ಗೌಡ ಹತ್ಯೆ ಪ್ರಕರಣ
* ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೊನೆಗೂ ಜಾಮೀನು
* ಸಾಕ್ಷ್ಯನಾಶ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ
* ಕಳೆದ ಒಂಭತ್ತು ತಿಂಗಳಿನಿಂದ ವಿನಯ್ ಜೈಲಿನಲ್ಲಿದ್ದರು 

First Published Aug 19, 2021, 7:25 PM IST | Last Updated Aug 19, 2021, 7:28 PM IST

ಬೆಂಗಳೂರು(ಆ. 19)  ಬಿಜೆಪಿ ಮುಖಂಡ ಯೋಗೇಶ್ ಗೌಡ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ  ಕಾಂಗ್ರೆಸ್  ಮುಖಂಡ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ. ಸುಪ್ರೀಂ ಕೋರ್ಟ್ ಸಹ ಜಾಮೀನು ನಿರಾಕರಣೆ ಮಾಡಿತ್ತು.ಒಂದು ಕಡೆ ವಿನಯ್ ಕುಲಕರ್ಣಿ ಬೆಂಬಲಿಗರು ಸಂಭ್ರಮ ಆಚರಿಸುತ್ತಿದ್ದಾರೆ.

ಯೋಗೇಶ್ ಗೌಡ ಕೇಸಿನಲ್ಲಿ ಕೆಎಎಸ್ ಅಧಿಕಾರಿಗಳಿಗೂ ಕಂಟಕ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ಜಾಮೀನು ನೀಡಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಂಡಿತ್ತು.  ಯೋಗೇಶ್ ಗೌಡ ಹತ್ಯೆ ಪ್ರಕರಣ ಸಿಬಿಐ ಅಂಗಣವನ್ನು ತಲುಪಿ ವಿಚಾರಣೆ ನಡೆಯುತ್ತಿದೆ.

 

Video Top Stories