ಬೆಂಗಳೂರು(ಜು.  06)  ನವರಸ ನಾಯಕ ಜಗ್ಗೇಶ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಕಾಂಗ್ರೆಸ್ ಐಟಿ ಸೇಲ್ ನ ಉಸ್ತುವಾರಿ  ಸಂದೀಪ್ ಅನಬೇರು ದೂರು ನೀಡಿದ್ದಾರೆ.

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ದ ಉಸ್ತುವಾರಿಯಿ ಸಂದೀಪ್ ದೂರು ನೀಡಿದ್ದಾರೆ.  ಮಾತನಾಡಿದ್ದ ಯುವಕ ಬಿಜೆಪಿಯನ್ನು ತೆಗಳಿದ್ದ.  ಬೆಂಗಳೂರು ಬಿಟ್ಟು ಊರಿಗೆ ತೆರಳುತ್ತಿದ್ದ ಯುವಕ ಮೋದಿ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ.

ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಸಿಇಒ ವಾಸುದೇವ್ ಮಯ್ಯ ಆತ್ಮಹತ್ಯೆ

ಇದಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆ ವ್ಯಕ್ತಿ ಸಂದೀಪ್ ಎಂದು ಬಿಂಬಿತವಾಗಿತ್ತು. ಬಿಜೆಪಿಯವರು ನನ್ನ ಫೋಟೋ ಎಡಿಟ್ ಮಾಡಿ ನನ್ನ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಸಂದೀಪ್ ದೂರು ನೀಡಿದ್ದಾರೆ.

ನಟ ಜಗ್ಗೇಶ್ ಸಹ ಈ ಪೋಟೋ ಹಂಚಿಕೊಂಡಿದ್ದರು. ಇದರಿಂದ ತನ್ನ ಗೌರವಕ್ಕೆ ಧಕ್ಕೆಯಾಗಿದೆ ಅಂತ ಸಂದೀಪ್ ದೂರು ದಾಖಲಿಸಿದ್ದಾರೆ.