ರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕ್ ಸಿಇಓ  ವಾಸುದೇವ್ ಮಯ್ಯ ಆತ್ಮಹತ್ಯೆ/ ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ಆತ್ಮಹತ್ಯೆ / ಮದ್ಯದಲ್ಲಿ ವಿಷ ಸೇರಿಸಿಕೊಂಡು ಸೇವನೆ

ಬೆಂಗಳೂರು(ಜು. 06) ರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕ್ ಸಿಇಓ ವಾಸುದೇವ್ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಸುಸೈಡ್ ಮಾಡಿಕೊಂಡಿದ್ದಾರೆ. ಬ್ಯಾಂಕ್ ವಿರುದ್ದ 1400 ಕೋಟಿ ರೂ. ಅವ್ಯವಹಾರ ಕೇಳಿ ಬಂದಿತ್ತು. . ಹಗರಣದಲ್ಲಿ ಪ್ರಮುಖ ಆರೋಪಿ ಆಗಿರುವ ವಾಸುದೇವ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಏನಿದು ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ

ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಠೇವಣಿದಾರರಿಗೆ ಮೋಸ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಬ್ಯಾಂಕ್ ಬಾಗಿಲು ಹಾಕಿದ್ದು ಠೇವಣಿದಾರರು ಮುತ್ತಿಗೆ ಹಾಕಿದ್ದು ಸುದ್ದಿಯಾಗಿತ್ತು. ಕೆಲ ದಿನಗಳ ಹಿಂದೆ ವಾಸುದೇವ್ ಮಯ್ಯ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿತ್ತು.