ಕೌಟುಂಬಿಕ ಕಲಹದಲ್ಲಿ ತಂದೆಯೇ ತನ್ನ ಸ್ವಂತ ಮಗಳನ್ನು 25 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.

ಸೂರತ್‌: ಕೌಟುಂಬಿಕ ಕಲಹದಲ್ಲಿ ತಂದೆಯೇ ತನ್ನ ಸ್ವಂತ ಮಗಳನ್ನು 25 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಆರೋಪಿ ರಾಮಾನುಜ (Ramanuja) ತನ್ನ ಇತರ ಮಕ್ಕಳು ಹಾಗೂ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾನೆ. ಈ ಎಲ್ಲ ದೃಶ್ಯವೂ ಸಿಸಿಟಿವಿಯಲ್ಲಿ(cctv) ಸೆರೆಯಾಗಿದ್ದು ಇದೀಗ ವೈರಲ್‌ ಆಗಿದೆ. ಮೇ.18 ರಂದು ಸೂರತ್‌ನ ಕಡೊದರಾದಲ್ಲಿ ಘಟನೆ ನಡೆದಿದ್ದು ಮಗಳನ್ನು ಕೊಂದ ಪತಿ ಮೇಲೆ ಪತ್ನಿ ರೇಖಾ (Rekha) ದೂರು ನೀಡಿದ್ದಾರೆ. ಮೇ.20 ರಂದು ರಾಮಾನುಜನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಗಳು ತಾರಸಿ ಮೇಲೆ ಮಲಗುವ ವಿಚಾರಕ್ಕೆ ಆರಂಭವಾದ ಸಣ್ಣ ಜಗಳದಿಂದ ಇಂಥದ್ದೊಂದು ಘೋರ ಅವಾಂತರ ನಡೆದಿದ್ದು ತಂದೆಯ ಚಾಕು ಇರಿತದಿಂದ ತಪ್ಪಿಸಿಕೊಳ್ಳಲು ಮಗಳು ಯತ್ನಿಸಿದರೂ ಆಕೆಯನ್ನು ಬೆನ್ನಟ್ಟಿ ತಂದೆಯೇ ಸಾಯಿಸಿರುವ ವಿಡಿಯೋ ಮನಕಲಕುವಂತಿದೆ. ಗಾಯಗೊಂಡ ಇತರ ಮಕ್ಕಳು ಮತ್ತು ಪತ್ನಿ ಚಿಕಿತ್ಸೆ ಪಡೆದಿದ್ದಾರೆ.

Scroll to load tweet…

ಬೆಂಗಳೂರಲ್ಲಿ ಹೆತ್ತ ಮಗಳನ್ನೇ ಕೊಲೆಗೈದ ದುಷ್ಟ ತಂದೆ: ದೊಣ್ಣೆಯಿಂದ ಹಲ್ಲೆ

ಆಂಧ್ರದಲ್ಲಿ 'ಮರ್ಯಾದೆಗೇಡು ಹತ್ಯೆ', ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಪ್ರಕರಣ ಸಂಚಲನ ಮೂಡಿಸಿದೆ. ಬೇರೆ ಜಾತಿಯ ಹುಡುಗನನ್ನು ಪ್ರೀತಿ ಮದುವೆಯಾಗಿದ್ದ ಮಗಳನ್ನು ತಂದೆ ಸಿಟ್ಟಿನಲ್ಲಿ ಕೊಂದಿದ್ದಾನೆ. ಆಕೆಯ ರುಂಡ-ಮುಂಡವನ್ನು ಬೇರ್ಪಡಿಸಿ ಭೀಕರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಈ ಘಟನೆ ನಡೆದಿದೆ. ಆದರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಾಣ್ಯಂ ಪೊಲೀಸರು ಈ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಎಂಬುವವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳ ಹೆಸರು ಪ್ರಸನ್ನ (21). ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ತಂದೆಯ ಇಷ್ಟದಂತೆ ನಡೆದ ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಮದುವೆಯಾಗಿ ಎರಡು ವರ್ಷದ ಬಳಿಕ ಹೈದರಾಬಾದಿನಿಂದ ಹಳ್ಳಿಗೆ ಬಂದು ತನ್ನ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆ ಮದುವೆಗೂ ಮುನ್ನ ಪ್ರೇಮ ಸಂಬಂಧ ಹೊಂದಿದ್ದವನ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದಲ್ಲದೆ, ಹೈದರಾಬಾದ್‌ಗೆ ಹೋಗೋಕು ಮನಸ್ಸು ಮಾಡಿರಲಿಲ್ಲ. ಇದು ತಂದೆಗೆ ಇಷ್ಟವಾಗಿರಲಿಲ್ಲ. ಇದರಿಂದ ತನ್ನ ಪ್ರತಿಷ್ಠೆ ಹಾಳಾಗುತ್ತದೆ ಎಂದು ಕೋಪಗೊಂಡಿದ್ದರು. ಅದೇ ಕಾರಣಕ್ಕೆ ಇದೇ ತಿಂಗಳ 10 ರಂದು ದೇವೇಂದ್ರ ರೆಡ್ಡಿ ಮನೆಯಲ್ಲಿಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.

ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಕುಟುಂಬ

ಬಳಿಕ ದೇವೇಂದ್ರ ರೆಡ್ಡಿ ಕೆಲವರ ಜತೆ ಸೇರಿ ಕಾರಿನಲ್ಲಿ ಮಗಳ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಮಗಳ ದೇಹದ ರುಂಡ ಹಾಗೂ ಮುಂಡವನ್ನು ಬೇರೆ ಮಾಡಿದ್ದಾರೆ. ರುಂಡವನ್ನು ಕಾಡಿನ ಒಂದು ಕಡೆ ಎಸೆದಿದ್ದರೆ, ಇನ್ನೊಂದು ಕಡೆ ಉಳಿದ ಭಾಗವನ್ನು ಎಸೆದು ಮನೆಗೆ ಬಂದಿದ್ದರು. ಅದಾದ ಬಳಿಕ ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದ. ಈ ವೇಳೆ ದೇವೇಂದ್ರ ರೆಡ್ಡಿ ಅವರ ತಂದೆ ಶಿವಾರೆಡ್ಡಿ ಮೊಮ್ಮಗಳು ಪ್ರಸನ್ನ ಎಲ್ಲಿದ್ದಾರೆ ಎಂದು ಪ್ರಶ್ನಿಸಲು ಪ್ರಾರಂಭಿಸಿದರು. ಕೊನೆಗೆ ದೇವೇಂದ್ರ ರೆಡ್ಡಿ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಗುರುವಾರ ದೂರು ದಾಖಲಿಸಿಕೊಂಡ ಪೊಲೀಸರು ದೇವೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.