Asianet Suvarna News Asianet Suvarna News

ಲವ್-ಸೆಕ್ಸ್-ದೋಖಾ: ಮೋಸ ಮಾಡಿದವನನ್ನು ಗಲ್ಲಿಗೇರಿಸಿ ಎಂದು ಪ್ರಾಣ ಬಿಟ್ಟ ಯುವತಿ

* ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
* ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ ಎಂದು ಡೆತ್‌ ನೋಟ್
* ತನಿಖೆ ಕೈಗೊಂಡ ಹುಲ್ಲಹಳ್ಳಿ ಪೊಲೀಸರು

College Student commits suicide by hanging after Boy Friend cheating at Mysuru District rbj
Author
Bengaluru, First Published Oct 16, 2021, 9:39 PM IST
  • Facebook
  • Twitter
  • Whatsapp

ಮೈಸೂರು, (ಅ.16): ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ ಎಂದು ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

 ಈ ಘಟನೆ ಇಂದು (ಅ.16) ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ. ಬಿಎ ವ್ಯಾಸಂಗ ಮಾಡುತ್ತಿದ್ದ ಶೋಭಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ.

ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳ ಕಾಲ ನನ್ನನ್ನು ಪ್ರೀತಿಸಿ (Love) ಎಲ್ಲ ರೀತಿಯಲ್ಲೂ ಬಳಸಿಕೊಂಡು ನಂತರ ಮೋಸ (Cheating) ಮಾಡಿದ ಗ್ರಾಮದ ಲೋಕೇಶನನ್ನು ಗಲ್ಲೆಗೇರಿಸಬೇಕು ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ

ಶೋಭಾಳ ಶವ ಸಂಸ್ಕಾರ ನಡೆದ ನಂತರ ಮನೆ ಸ್ವಚ್ಛ ಗೊಳಿಸುವಾಗ ಡೆತ್ ನೋಟ್ ದೊರೆತಿದ್ದು, ಯುವತಿಯ ತಾತ ಚೆನ್ನ ಪಟ್ಟಣನ ಕರಿಯ್ಯಯ್ಯ, ಹುಲ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶೋಭಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದು ಈಗ ಆತ ದುರವಾಗಿರುವ ಕಾರಣ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದ ಪತ್ರವನ್ನು ದೂರಿನಲ್ಲಿ ಕರಿಯಯ್ಯ ದಾಖಲಿಸಿದ್ದಾರೆ.

ಹುಲ್ಲಹಳ್ಳಿ ಪೊಲೀಸರು ಈಗ ಶೋಭಾಳ ಸಾವು ,ಆಕೆಯ ಶವವನ್ನು ದಹಿಸಿದ ರೀತಿ ಮತ್ತು ಆಕೆಯ ಡೆತ್ ನೊಟ್ ಸತ್ಯಾಸತ್ಯತೆಯ ಕುರಿತು ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios