ಶಾಲೆಯ 'ಸಮೃದ್ಧಿ'ಗಾಗಿ 11 ವರ್ಷದ ಬಾಲಕನನ್ನು ಬಲಿ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಶಾಲಾ ಮಾಲೀಕ, ಅವರ ಮಗ ಸೇರಿ ಐವರನ್ನು ಬಂಧಿಸಲಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ: ಶಾಲೆಯ ಸಮೃದ್ಧಿಯ ಉದ್ದೇಶ ಇರಿಸಿಕೊಂಡು ವಿದ್ಯಾರ್ಥಿಯೊಬ್ಬನನ್ನು ನರಬಲಿ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದಿದೆ. ಈ ಪೈಶಾಚಿಕ ಕೃತ್ಯ ಎಸಗಿದ ಐವರನ್ನು ಬಂಧಿಸಲಾಗಿದೆ.

ವಾಮಾಚಾರದ ಆಚರಣೆಗಳಲ್ಲಿ ನಂಬಿಕೆ ಇಟ್ಟಿದ್ದ ಡಿಎಲ್‌ ಪಬ್ಲಿಕ್‌ ಶಾಲೆಯ ಮಾಲೀಕ ಜಸೋಧನ್‌ ಸಿಂಗ್‌ ಎಂಬಾತ, ‘ಶಾಲೆ ಹಾಗೂ ಪರಿವಾರದ ಶ್ರೇಯಸ್ಸಿಗಾಗಿ’ ಮಗುವನ್ನು ಬಲಿ ಕೊಡುವಂತೆ ತನ್ನ ಮಗ ಹಾಗೂ ನಿರ್ದೇಶಕ ದಿನೇಶ್ ಭಗೇಲ್‌ಗೆ ಸೂಚಿಸಿದ್ದ. ಅದರ ಪ್ರಕಾರ 2ನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್‌ ಎಂಬ ವಿದ್ಯಾರ್ಥಿಯನ್ನು ಶಿಕ್ಷಕ ರಾಮಪ್ರಕಾಶ್‌ ಸೋಲಂಕಿ, ಭಗೇಲ್ ಮತ್ತು ಸಿಂಗ್‌ ಶಾಲೆಯ ವಸತಿಗೃಹದಿಂದ ಅಪಹರಿಸಿದ್ದರು.

ಹಾಸನ: 2ನೇ ತರಗತಿಯ ಮೂಕ, ಕಿವುಡ ಅಪ್ರಾಪ್ತ ಮೇಲೆ ಅತ್ಯಾಚಾರ

‘ಬಾಲಕನನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದಾಗ ಎಚ್ಚರಗೊಂಡು ಅಳತೊಡಗಿದ್ದ. ಅಲ್ಲಿ ಅವನನ್ನು ಕತ್ತು ಹಿಸುಕಿ ಕೊಂದ ಬಳಿಕ ಆತನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಭಗೇಲ್‌ರ ಕಾರಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಪೋಷಕರಿಗೆ ತಿಳಿಸಲಾಗಿತ್ತು. ಅನುಮಾನಗೊಂಡ ಅವರು ಕಾರನ್ನು ತಡೆಗಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು. ಕೃತಾರ್ಥ್‌ನನ್ನು ಉಸಿರುಗಟ್ಟಿಸಿ ಕೊಲ್ಲಲಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ’ ಎಂದು ಹತ್ರಾಸ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ ಹಾಗೂ ಅವರಿಗೆ ನೆರವಾದ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 103(1)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 5 ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.

21 ಸರ್ಕಾರಿ ಶಾಲಾ ಮಕ್ಕಳ ಮೇಲೆ 8 ವರ್ಷಗಳ ಕಾಲ ಬಲತ್ಕಾರ ಮಾಡಿದ್ದ ವಾರ್ಡನ್‌ಗೆ ಗಲ್ಲು