ಶೃಂಗೇರಿ ಮಸೀದಿ ಎದುರು ಬಾವುಟ ಕಟ್ಟುವಾಗ ಗಲಾಟೆ, ಹೊಡೆದಾಟ
ಪಟ್ಟಣದ ವೆಲ್‌ಕಂ ಗೇಟ್ ಮಸೀದಿ ಎದುರು ಬಾವುಟ ಕಟ್ಟುವ ವಿಚಾರವಾಗಿ ಮಂಗಳವಾರ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಸಂಬಂಧ ಎರಡೂ ಕಡೆಯವರಿಂದ ದೂರು-ಪ್ರತಿದೂರು ದಾಖಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಶೃಂಗೇರಿ (ನ.09): ಮಸೀದಿ ಮುಂಭಾಗ ಕಟ್ಟಿದ್ದ ಕೇಸರಿ ಬಾವುಟದ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಶೃಂಗೇರಿಯ ವೆಲ್ ಕಮ್ ಗೇಟ್ ನಲ್ಲಿರುವ ಮಸೀದಿ ಮುಂಭಾಗ ಕೇಸರಿ ಬಾವುಟ, ಬಂಟಿಂಗ್ಸ್ ಗಳನ್ನು ಕಟ್ಟಲಾಗಿತ್ತು. ಈ ವಿಚಾರವಾಗಿ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ: ಜಿಲ್ಲೆಯಾದ್ಯಂತ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ಆರಂಭವಾಗಿದ್ದು, ಶೃಂಗೇರಿಯಲ್ಲೂ ಶ್ರೀ ರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಮಾಲೆ ಧರಿಸಿದ್ದು ನಿನ್ನೆ ಪಟ್ಟಣದಾದ್ಯಂತ ಕೇಸರಿ ಬಂಟಿಂಗ್ಸ್ ಹಾಗೂ ಬಾವುಟ ಕಟ್ಟಿದ್ದರು. ಈ ಹಿಂದೆ ನಡೆದಿದ್ದ ಕಾಂಗ್ರೆಸ್ ರ್ಯಾಲಿಯ ವೇಳೆಯಲ್ಲಿ ಅದೇ ಜಾಗದಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡಲು, ಬಾವುಟಗಳನ್ನು ಹಾಕಲು ಅನುಮತಿ ನೀಡಲಾಗಿತ್ತು, ಆದರೆ ನಿನ್ನೆ ಹಾಕಲಾಗಿದ್ದ ಕೇಸರಿ ಬಾವುಟಗಳನ್ನು ತೆರವು ಮಾಡಿಸಿರುವುದು ಸರಿಯಲ್ಲ ಎಂಬುದು ಹಿಂದೂ ಸಂಘಟನೆಗಳ ಮುಖಂಡರವಾದವಾಗಿದ್ದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಮುಸ್ಲಿಂ ಮುಖಂಡರು ಜಮಾವಣೆಗೊಂಡಿದ್ದರು.
ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಅವಮಾನ: ವಿದ್ಯಾರ್ಥಿ ಆತ್ಮಹತ್ಯೆ
ಪೊಲೀಸರು ಭೇಟಿ ಪರಿಸ್ಥಿತಿ ನಿಯಂತ್ರಣಕ್ಕೆ: ಘಟನಾ ಸಂಬಂಧ ಕೊಪ್ಪ ಎಎಸ್ ಪಿ ಗುಂಜನ್ ಆರ್ಯ ಶೃಂಗೇರಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿದ ಅವರು ಬಾವುಟಗಳನ್ನು ಕಟ್ಟಲು ಅನುಮತಿ ನೀಡುವುದು ಅಥವಾ ನಿರಾಕರಿಸುವುದು ಪಟ್ಟಣ ಪಂಚಾಯತ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸಂಬಂಧಪಟ್ಟಿರುತ್ತದೆ, ಈ ಮಧ್ಯೆ ಯಾವುದೇ ನಿಯಮಗಳನ್ನು ಅಳವಡಿಸಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬ್ಯಾಂಕ್ ಧೋಖಾ: ಐವರ ಬಂಧನ
ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ, ಜೀವಬೆದರಿಕೆ ಹಾಗೂ ಅಭದ್ರತೆ ನನಗೆ ಕಾಡುತ್ತಿದೆ, ಜೀವ ಭಯ ಇದೆ. ನಾನೋರ್ವ ಪಟ್ಟಣ ಪಂಚಾಯತ್ ಸದಸ್ಯನಾಗಿ ನನ್ನ ವಾರ್ಡ್ ನ ಜನರ ಪರವಾಗಿ ಮಾತನಾಡಬೇಕಾದ ಅವಶ್ಯಕತೆಯಿದೆ. ಸೂಕ್ತ ತನಿಖೆ ಹಾಗೂ ಭದ್ರತೆಗೆ ಕೋರಿ ಪಟ್ಟಣ ಪಂಚಾಯತ್ ಮೊದಲನೇ ವಾರ್ಡ್ ಸದಸ್ಯ ರಫೀಕ್ ಅಹಮದ್ ಶೃಂಗೇರಿ ಠಾಣೆಗೆ ದೂರು ದಾಖಲಿಸಿದ್ದಾರೆ. ಬಾವುಟದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ನನ್ನಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ರಾಮ ಸೇನಾ ಮುಖಂಡ ಅರ್ಜುನ್ ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ.