ಗಾಂಜಾ ಸೇದುವುದು ಹಿಂದೂಗಳ ಪರಂಪರೆ, ಯುವಕರಿಗೆ ಪ್ರೇರಣೆ ನೀಡಿದ ಹಿಂದೂ ಸಂಘಟನೆ ಮುಖಂಡ
* ಮದುವೆ ಸಮಾರಂಭದಲ್ಲಿ ಯುವತಿ ಚುಡಾವಣೆ ಹಿನ್ನೆಲೆ ಯುವಕರ ಹೊಡೆದಾಟ
* ಗಾಂಜಾ ಸೇದಿ ಎಂದು ಯುವಕರಿಗೆ ಪ್ರೇರಣೆ ನೀಡಿದ ಹಿಂದೂ ಸಂಘಟನೆ ಮುಖಂಡ
* ಮಹಿಳೆಯೊಬ್ಬರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಕಾಟ
* ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಹಾವಳಿ
ಬೆಂಗಳೂರು,(ಫೆ.18): ಮದುವೆ ಸಮಾರಂಭದಲ್ಲಿ (Marriage Function) ಯುವತಿ ಚುಡಾವಣೆ ಹಿನ್ನೆಲೆ ಯುವಕರ ಹೊಡೆದಾಟ, ಗಾಂಜಾ ಸೇದಿ ಎಂದು ಯುವಕರಿಗೆ ಪ್ರೇರಣೆ ನೀಡಿದ ಹಿಂದೂ ಸಂಘಟನೆ ಮುಖಂಡ. ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಮಹಿಳೆಗೆ ಕಾಟ. ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಹಾವಳಿ Fake Facebook Account). ಈ ಅಪರಾಧ ಸುದ್ದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಗಾಂಜಾ ಸೇದಿ ಎಂದು ಯುವಕರಿಗೆ ಪ್ರೇರಣೆ ನೀಡಿದ್ರಾ ಹಿಂದೂ ಮುಖಂಡ?
ಗಾಂಜಾ(Ganja) ಮಾರಾಟ ಹಾಗೂ ಸೇವನೆ ಕಾನೂನು ಅಪರಾಧವಾಗಿದೆ. ಆದ್ರೆ, ಹಿಂದೂ ಸಂಘಟನೆಯೊಂದರ ಮುಖಂಡ ಪುನೀತ್ ಕೆರೆಹಳ್ಳಿ ಗಾಂಜಾ ಸೇದಿ ಎಂದು ಯುವಕರಿಗೆ ಪ್ರೇರಣೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಭಂಗಿ ಹೊಡ್ದು ಭಜನೆ ಮಾಡ್ಬೇಕು. ಗಾಂಜಾ ಸೇದುವುದು ಹಿಂದೂಗಳ(Hindu) ಪರಂಪರೆ. ನಾವೇಲ್ಲ ಹಿಂದುಗಳು ನಮ್ಮ ಸಂಪ್ರದಾಯವನ್ನ ಬಿಡಬಾರದು. ಹಿಜಾಬ್ (Hijab) ಧರಿಸೋದು ನಿಮ್ಮ ಹಕ್ಕಾದ್ರೆ ಗಾಂಜಾ ಸೇದುವುದು ನಮ್ಮ ಹಕ್ಕು ಎಂದು ಕೆರೆಹಳ್ಳಿ ಕರೆ ಕೊಟ್ಟಿದ್ದಾರೆ.
ನಾವು ಸಹ ಭಂಗಿ ಸೇವಿಸಿ ಹರ ಸ್ಮರಣೆ ಮಾಡ್ಬೇಕೆಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸಕ್ಕೆ ಮುಂದಾದಗಿದ್ದಾರೆ ಎಂದು ಕೈ ಮುಖಂಡ ದೂರು ದಾಖಲಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಪಿ.ಆರ್ ರಮೇಶ್ ಅವರು ವಾಟ್ಸಪ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮದ್ವೆ ಮಂಟಪದಲ್ಲಿ ಘರ್ಷಣೆ, ಅಟ್ಟಾಡಿಸಿ ಹೊಡೆದ ಪೊಲೀಸ್ರು
ಮಂಗಳೂರು: ಮದುವೆ ಕಾರ್ಯಕ್ರಮದಲ್ಲಿ ಯುವಕನೊಬ್ಬ ಯುವತಿಯನ್ನು ಚುಡಾಯಿಸಿದ ಕಾರಣಕ್ಕೆ ಯುವಕರ ನಡುವೆ ಹೊಡೆದಾಡಿಕೊಂಡಿರುವ ಘಟನೆ ಉಳ್ಳಾಲದ ತೊಕ್ಕೊಟ್ಟಿನಲ್ಲಿ ನಡೆದಿದೆ.
ಗಲಾಟೆ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೊಲೀಸರು ಹಲ್ಲೆ ಮಾಡಿದವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
ಗುರುವಾರ ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣದಲ್ಲಿ ಮದುವೆ ಸಮಾರಂಭ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕಾಸರಗೋಡಿನ ವರನಿಗೆ ಮದುವೆ ನಡೆದಿತ್ತು. ಸಮಾರಂಭದಲ್ಲಿ ವರನ ಕಡೆಯ ಯುವಕ, ವಧುವಿನ ಕಡೆಯ ಯುವತಿಯ ಹಿಂದೆ ಬಿದ್ದು ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ, ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದಾನೆ.
ಅದರ ಪರಿಣಾಮ ಪರಸ್ಪರ ಯುವಕರ ಗುಂಪಿನ ನಡುವೆ ಬೀದಿ ಕಾಳಗವೇ ನಡೆದಿದೆ. ಈ ವೇಳೆ ಉಳ್ಳಾಲ ಉರೂಸ್ ಬಂದೋಬಸ್ತ್‌ನಲ್ಲಿದ್ದ ಪೊಲೀಸರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡು ಇತರ ಪೊಲೀಸರು ಹಲ್ಲೆ ಮಾಡಿದವರನ್ನು ಅಟ್ಟಾಡಿಸಿ ಹೊಡೆದು, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನಿವಾಸಿಗಳಾದ ಶರಣ್, ಪ್ರಮೋದ್ ಮತ್ತು ಅಜೀಶ್ ಬಂಧಿತ ಆರೋಪಿಗಳು.
ಅಶ್ಲೀಲ ಫೋಟೋ, ವಿಡಿಯೋ ಕಾಟ
ಬೆಂಗಳೂರು: ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಕಾಟ ಕೊಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕೆ.ಎನ್.ಹರೀಶ್(26) ಬಂಧಿತ ಆರೋಪಿ. ಈತ ಫೇಸ್ ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡ್ತಿದ್ದ. ವಿಡಿಯೋ ಕಳಿಸಿ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ. ತನಿಖೆ ವೇಳೆ 10 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಕಾಟ ಕೊಟ್ಟಿರೋದು ಬೆಳಕಿಗೆ ಬಂದಿದೆ. ತನ್ನ ಪತ್ನಿಗೆ ಇದೇ ರೀತಿ ಕಾಟ ಕೊಡಲಾಗುತ್ತಿದೆ ಎಂದು ಪತಿಯೊಬ್ಬರು ದೂರು ನೀಡಿದ್ರು. ಆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಹಾವಳಿ
ಫೇಸ್ ಬುಕ್ ನಕಲಿ ಅಕೌಂಟ್ ಹಾವಳಿ ಮಿತಿ ಮಿರಿದೆ. ದೊಡ್ಡ-ದೊಡ್ಡವರ ಹೆಸರಿನ ಮೇಲೆ ನಕಲಿ ಅಕೌಂಟ್ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ. ಅದರಂತೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ಹಣ ಪಿಕಲು ಅಧಿಕಾರಿಗಳನ್ನೆ ಬಂಡವಾಳ ಮಾಡಿಕೊಂಡಿಕೊಂಡಿರುವ ಪ್ರರಣ ಬೆಳಕಿಗೆ ಬಂದಿದೆ.
ಸಂಪಿಗೆ ಹಳ್ಳಿ ಉಪವಿಭಾಗದ ಎಸಿಪಿ ರಂಗಪ್ಪ ಹೆಸರಲ್ಲಿ ಖದೀಮರು ನಕಲಿ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿ ಬಳಿಕ ಫೇಸ್ ಪ್ರೇಂಡ್ ರಿಕ್ವೇಸ್ಟ್ ಕಳಿಸಿ ಹಣ ಕೇಳುತ್ತಿದ್ದಾರೆ. ಅರ್ಜೆಂಟ್ ಇದೇ ತ್ವರಿತವಾಗಿ ಹಣ ಕಳಿಸಿಕೊಡುವಂತೆ ಆನ್ ಲೈನ್ ಖದೀಮರು ರಿಕ್ವೇಸ್ಟ್ ಮಾಡಿಕೊಳ್ಳುತ್ತಿದ್ದಾರೆ.