ಮನೆ ಮುಂದಿನ ಕಸ ತೆಗೆಯದ್ದಕ್ಕೆ ಪೌರಕಾರ್ಮಿಕ ಮಹಿಳೆ ಮೇಲೆ ತಾಯಿ-ಮಗನಿಂದ ಹಲ್ಲೆ!

ಮನೆ ಮುಂದಿನ ಕಸ ತೆಗೆದುಕೊಳ್ಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪೌರಕಾರ್ಮಿಕ ಮಹಿಳೆಗೆ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ ನಗರದಲ್ಲಿ ನಡೆದಿದೆ.

civil servent woman assaulted by mother and son at byadarahalli bengaluru rav

ಬೆಂಗಳೂರು (ಸೆ.17):  ಮನೆ ಮುಂದಿನ ಕಸ ತೆಗೆದುಕೊಳ್ಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪೌರಕಾರ್ಮಿಕ ಮಹಿಳೆಗೆ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ ನಗರದಲ್ಲಿ ನಡೆದಿದೆ.

ನಾಗರತ್ನ, ಚಂದ್ರು ಹಲ್ಲೆ ಮಾಡಿದ ತಾಯಿ-ಮಗ.  ಹಲ್ಲೆ ವೇಳೆ ಘಟನೆಯ ವಿಡಿಯೋ ಮಾಡಿಕೊಳ್ಳುತ್ತಿದ್ದ ಇನ್ನೊರ್ವ ಕಾರ್ಮಿಕನಿಗೂ ಅವಾಚ್ಯವಾಗಿ ಬೈದು ಮೊಬೈಲ್ ಕಿತ್ತು ಎಸೆದು ಮೊಬೈಲ್ ಸಹ ಒಡೆದು ಹಾಕಲಾಗಿದೆ. ಜಾತಿ ನಿಂದನೆ ಮಾಡಿರುವ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಪೌರಕಾರ್ಮಿಕ ಮಹಿಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಗೂ ಬಂತು ಚಿರತೆ, ಆತಂಕದಲ್ಲಿ ಐಟಿ ಬಿಟಿ ಉದ್ಯೋಗಿಗಳು!

ಏನಿದು ಘಟನೆ?

ರಸ್ತೆಯಲ್ಲಿ ಕಸ ಗುಡಿಸುವಾಗ ಮನೆ ಮುಂದೆ ಬಿದ್ದಿದ್ದ ಕಸದ ಚೀಲ ತೆಗೆಯಲು ಹೇಳಿದ್ದ ನಾಗರತ್ನ. ಆದರೆ ಮನೆ ಮುಂದೆ ಬಿದ್ದ ಕಸ ನಾವು ತೆಗೆಯುವುದಿಲ್ಲ. ಮನೆ ಮುಂದಿನ ಕಸ ತೆಗೆದುಕೊಂಡು ಹೋಗಲು ಬಿಬಿಎಂಪಿ ಆಟೋ ಬರುತ್ತದೆ ಆಟೋಗೆ ಕೊಡಿ, ನಾವು ರಸ್ತೆ ಕಸ ಗೂಡಿಸುವವರು ಎಂದು ಹೇಳಿರುವ ಪೌರಕಾರ್ಮಿಕ ಮಹಿಳೆ. ಅದಕ್ಕೆ ಕೋಪಗೊಂಡ ನಾಗರತ್ನ 'ನೀವು ಕಸ ತೆಗೆಯುವುದಿಲ್ವ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಮಗ ಚಂದ್ರು ಜೊತೆ ಸೇರಿ ಪೌರಕಾರ್ಮಿಕ ಮಹಿಳೆಗೆ ಬೈದಿದ್ದಲ್ಲದೆ ಜಾತಿ ನಿಂದನೆ ಮಾಡಲಾಗಿದೆ ಎಂಬ ಆರೋಪಿಸಲಾಗಿದೆ.   ಜಾತಿನಿಂದನೆ, ಹಲ್ಲೆ ಮಾಡಲಾಗಿದೆ ಎಂದು ದೂರು ದಾಖಲಿಸಿರುವ ಪೌರಕಾರ್ಮಿಕ ಮಹಿಳೆಯರು.

Latest Videos
Follow Us:
Download App:
  • android
  • ios