ರಾತ್ರಿ‌ ನಾಟಕ ಪ್ರದರ್ಶನ ನೋಡಿ ತನ್ನೂರಿಗೆ ತೆರಳ್ತಿದ್ದ ಯುವಕ ಸಾವನ್ನಪ್ಪಿರೋ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಆದ್ರೆ ಬೈಕ್ ಒಂದು ಕಡೆ, ಮೃತ ದೇಹ ಒಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದಿರೋದಕ್ಕೆ ಮೃತನ ಸಂಬಂಧಿಕರು ಕೊಲೆ  ಎಂದು ಗಂಭೀರ ಆರೋಪ ಮಾಡಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿತ್ರದುರ್ಗ (ಫೆ.24): ರಾತ್ರಿ‌ ನಾಟಕ ಪ್ರದರ್ಶನ ನೋಡಿ ತನ್ನೂರಿಗೆ ತೆರಳ್ತಿದ್ದ ಯುವಕ ಸಾವನ್ನಪ್ಪಿರೋ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಆದ್ರೆ ಬೈಕ್ ಒಂದು ಕಡೆ, ಮೃತ ದೇಹ ಒಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದಿರೋದಕ್ಕೆ ಮೃತನ ಸಂಬಂಧಿಕರು ಕೊಲೆ ಇರಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಪಘಾತ ಆಗಿರುವ ರೀತಿ ನುಜ್ಜು ಗುಜ್ಜಾಗಿ ಬಿದ್ದಿರುವ ಬೈಕ್, ಅಲ್ಲೇ ಸ್ವಲ್ಪ ದೂರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ ಮಧು(23) ವಿನ ಮೃತದೇಹ. ಇಂತಹ ಘಟನೆಯನ್ನು ಕಂಡು ಕಣ್ಣೀರು ಹಾಕುತ್ತ ರೋಧನೆ ಪಡ್ತಿರೋ ಮೃತ ಯುವಕನ ಕುಟುಂಬ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಕಾಟಪ್ಪನಹಟ್ಟಿ ಬಡಾವಣೆಯ ಬಳಿ. ರಾತ್ರಿ ನಮ್ಮ ಅಳಿಯ ಕಾಲ್ ಮಾಡಿ ದುಗ್ಗಾವರ ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿದೆ ನೋಡಿಕೊಂಡು ಬರ್ತೀನಿ ಎಂದು ಹೇಳಿ ಹೋದ. ಆದ್ತೆ ಬೆಳಗ್ಗೆ ನಾವು ನೋಡಿದ್ರೆ ಈ ರೀತಿ ಘಟನೆ ನಡೆದಿದೆ. ಬೈಕ್ ಒಂದ್ಕಡೆ ಇದೆ, ಮೃತ ದೇಹ ಒಂದ್ಕಡೆ ಬಿದ್ದಿದೆ. ಇದನ್ನೆಲ್ಲಾ ನೋಡಿದ್ರೆ, ಯಾರೋ ಕೊಲೆ ಮಾಡಿರಬಹುದು ಎಂದು ಅನುಮಾನ ಬಂದಿದೆ. ಯಾಕಂದ್ರೆ ಬೈಕ್ ಗೆ ಅಷ್ಟಾಗಿ ಸ್ಕ್ರಾಚಸ್ ಆಗಿಲ್ಲ. ನಾವು ಕೂಡ ಘಟನೆ ನಡೆದಿರೋ ಜಮೀನು ಸುತ್ತ ಪರಿಶೀಲಿನೆ ಮಾಡಿದ್ವಿ. ಈ ಕುರಿತು ಪೊಲೀಸರು ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕಿದೆ ಅಂತಾರೆ ಮೃತನ ಸಂಬಂಧಿಕರು.

28 ಲಕ್ಷ ರು. ಸಾಲ ಪಡೆದು ವಂಚಿಸಿದ್ದ ಆನ್‌ಲೈನ್‌ ಗೆಳತಿ: ಶಿಕ್ಷಕ ಆತ್ಮಹತ್ಯೆ

ಯಾವುದೇ ಅಪಘಾತ ಆದ್ರೆ ಮೈ ಮೇಲೆ ಇರುವ ಬಟ್ಟೆಯಾದ್ರು ಹರಿದು ಹೋಗಬೇಕಿತ್ತು. ಆದ್ರೆ ಇಲ್ಲಿ ಅಗಿರೋ ಘಟನೆ ನೋಡಿದ್ರೆ ಅಪಘಾತ ಅಂತ ನಂಬೋಕೆ ಆಗ್ತಿಲ್ಲ. ಕೇವಲ ಮುಖದ ಮೇಲೆ ಗಾಯಗಳು ಅಗಿವೆ ಬಿಟ್ರೆ, ಬೇರೆ ಯಾವುದೇ ಭಾಗದಲ್ಲಿಯೂ ಕಲೆಗಳು ಆಗಿಲ್ಲ. ಇದನ್ನೆಲ್ಲಾ‌ ನೋಡಿದಾಗ ರಾತ್ರಿ ಏನೋ ಆಗಿ ಕೊಲೆ ಆಗಿರಬೇಕು ಎಂದು ಅನುಮಾನ ಮೂಡಿದೆ. ಅವನಿಗೆ ಯಾವುದೇ ಶತೃಗಳು ಇರಲಿಲ್ಲ ಹಾಗಾಗಿ ಯಾರ ಮೇಲು ಅನುಮಾನ ಇಲ್ಲ ದಯಮಾಡಿ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಿ ಎಂದು ಮೃತನ‌ ಸಹೋದರ ಒತ್ತಾಯಿಸಿದರು.

ಚಿಕ್ಕಮಗಳೂರು ಜೋಡಿ ಕೊಲೆ: ಚುನಾವಣೆ ಹೊಸ್ತಿಲಲ್ಲಿ ಪೊಲೀಸ್ ಹೈ ಅಲರ್ಟ್

ಒಟ್ಟಾರೆಯಾಗಿ ತಡರಾತ್ರಿ ಮನೆಯಿಂದ ನಾಟಕ‌ ನೋಡಲು ಹೋದವ ಬೆಳಗ್ಗೆ ಹೆಣವಾಗಿ ಬಿದ್ದಿರೋದನ್ನ ಕಂಡ ಇಡೀ ಕುಟುಂಬ ಕಣ್ಣೀರಲ್ಲಿಯೇ ಮುಳುಗಿ ಹೋಗಿದೆ. ಹಾಗಾಗಿ ಪೊಲೀಸರು ಕೂಡಲೇ ಇದನ್ನು ಪರಿಶೀಲಿಸಿ ಕೊಲೆಯೋ? ಅಪಘಾತವೋ ಎಂದು ಸ್ಪಷ್ಟಪಡಿಸಿ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕಿದೆ.