Asianet Suvarna News Asianet Suvarna News

4 ಗಂಟೆ ಆಸ್ಪತ್ರೆಗೆ ವಿದ್ಯುತ್ ಕಡಿತ, ನಾಲ್ವರು ಮಕ್ಕಳ ದಾರುಣ ಸಾವು!

ಅಂಬಿಕಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಸತತ 4 ಗಂಟೆ ವಿದ್ಯುತ್ ಕಡಿತಗೊಂಡಿದೆ. ಸರಿಪಡಿಸು ದೂರು ನೀಡಿದರೆ ಸರಿಯಾಗಿ ಸ್ಪಂದನೆ ಕೂಡ ವ್ಯಕ್ತವಾಗಿಲ್ಲ. ಪರಿಣಾಮ ಆಸ್ಪತ್ರೆಯ ನಾಲ್ಕು ಕಂದಮ್ಮಗಳು ದಾರುಣ ಅಂತ್ಯಕಂಡಿದೆ.

Four Infants Dies due to 4 hour power cut in Ambikapur medical college hospital Chhattisgarh order probe ckm
Author
First Published Dec 5, 2022, 5:03 PM IST

ರಾಯ್‌ಪುರ(ಡಿ.05): ಒಂದು ಸಣ್ಣ ತಪ್ಪು ಅತೀ ದೊಡ್ಡ ದುರಂತಕ್ಕೆ ಕಾರಣವಾಗಲಿದೆ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಹೀಗೆ ನಾಲ್ಕು ಗಂಟೆ ವಿದ್ಯುತ್ ಕಡಿತದಿಂದ ಆಸ್ಪತ್ರೆಯಲ್ಲಿ ಆಗಷ್ಟೇ ಹುಟ್ಟಿದ ನಾಲ್ಕು ಕಂದಮ್ಮಗಳ ಸಾವಿಗೆ ಕಾರಣವಾಗಿದೆ. ಈ ಘಟನೆ ನಡೆದಿರುವುದು ಚತ್ತೀಸಘಡದ ರಾಜಧಾನಿ ರಾಯ್‌ಪುರದಿಂದ 300 ಕಿಲೋಮೀಟರ್ ದೂರದಲ್ಲಿರುವ ಅಂಬಿಕಾಪುರ್ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆ 5.30ಕ್ಕೆ ವಿದ್ಯುತ್ ಕಡಿತಗೊಂಡಿದೆ. ಹೀಗೆ ವಿದ್ಯುತ್ ಕಡಿತಗೊಂಡಾದ 10 ರಿಂದ 15 ನಿಮಿಷದಲ್ಲಿ ಮತ್ತೆ ಬರುತ್ತಿತ್ತು. ಆದರೆ ಬೆಳಗ್ಗೆ 8.30ರ ವರೆಗೆ ವಿದ್ಯುತ್ ಕಡಿತಗೊಂಡಿತ್ತು. ಇದರಿಂಂದ ಆಗಷ್ಟೇ ಹುಟ್ಟಿದ ಪುಟ್ಟ ಕಂದಮ್ಮ  ಸೇರಿ ನಾಲ್ಕು ಮಕ್ಕಳು ದಾರುಣ ಸಾವು ಕಂಡಿದೆ. 

20 ನಿಮಿಷವಾದರೂ ವಿದ್ಯುತ್ ಕಡಿತ ಮುಂದುವರಿದಾಗ ಆಸ್ಪತ್ರೆ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ವಿದ್ಯುತ್ ನಿಗಮ ಕೂಡ ಸೂಕ್ತವಾಗಿ ಸ್ಪಂದಿಸಿಲ್ಲ. ವಿದ್ಯುತ್ ಸಮಸ್ಸೆ ಸರಿಪಡಿಸುವ ಅಥವಾ ಬದಲಿ ವ್ಯವಸ್ಥೆ ಮಾಡಿಕೊಳ್ಳುವ ಗೋಜಿಗೆ ಆಸ್ಪತ್ರೆ ಆಡಳಿತ ಮಂಡಳಿ ಕೂಡ ಕಾಳಜಿ ವಹಿಸಿಲ್ಲ. ಇದರ ಪರಿಣಾಮ ನಾಲ್ಕು ಪುಟ್ಟ ಕಂದಮ್ಮಗಳು ಅಂತ್ಯಕಂಡಿದೆ.

Infants Death : 7 ತಿಂಗಳಲ್ಲಿ ಒಂದೇ ಆಸ್ಪತ್ರೆಯಲ್ಲಿ 358 ಶಿಶು ಸಾವು!

ಇದೀಗ ನಾಲ್ಕು ಕಂದಮ್ಮಗಳ ಸಾವಿಗೆ ವಿದ್ಯುತ್ ಕಡಿತ ಕಾರಣವಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣಾಗಿದೆ. ಘಟನೆ ಉದ್ವಿಘ್ನಗೊಳ್ಳುತ್ತಿದ್ದಂತೆ ಚತ್ತೀಸಘಡ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೋ ತನಿಖೆಗ ಆದೇಶಿಸಿದ್ದಾರೆ. ಈ ಕುರಿತು ಆರೋಗ್ಯ ಕಾರ್ಯದರ್ಶಿಗೆ ತನಿಖಾ ತಂಡ ರಚಿಸುವಂತೆ ಆದೇಶ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಬದಲಿ ವ್ಯವಸ್ಥೆ ಇದೆ. ಮಕ್ಕಳ ಸಾವಿಗೂ ವಿದ್ಯುತ್ ಕಡಿತಕ್ಕೂ ಸಂಬಂಧವಿಲ್ಲ ಎಂದು ಆಡಳಿತ ಅಧಿಕಾರಿಗಳು ಹೇಳಿದ್ದಾರೆ. 

ಮಕ್ಕಳ ಸಾವಿನ ಪ್ರಮಾಣ ಇಳಿಕೆ: ಕರ್ನಾಟಕ ನಂ.1
5 ವರ್ಷಕ್ಕಿಂತ ಚಿಕ್ಕ ಮಕ್ಕಳ ಮರಣ ಪ್ರಮಾಣದಲ್ಲಿ 3 ಅಂಶಗಳ ಇಳಿಕೆ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ. ರಿಜಿಸ್ಟ್ರಾರ್‌ ಜನಲರ್‌ ಆಫ್‌ ಇಂಡಿಯಾ ಬಿಡುಗಡೆ ಮಾಡಿರುವ ವರದಿ ಅನ್ವಯ 2019ರಲ್ಲಿ ಭಾರತದಲ್ಲಿ ಜನಿಸಿದ ಪ್ರತಿ 1000 ಮಕ್ಕಳಿಗೆ 35 ಮಕ್ಕಳು ನಾನಾ ಕಾರಣದಿಂದ 5 ವರ್ಷಕ್ಕಿಂತ ಮೊದಲೇ ಸಾವನ್ನಪ್ಪುತ್ತಿದ್ದರೆ, 2020ರಲ್ಲಿ ಆ ಪ್ರಮಾಣ 32ಕ್ಕೆ ಇಳಿದಿದೆ. ಇನ್ನು ಈ ಇಳಿಕೆ ಪ್ರಮಾಣದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ ರಾಜ್ಯಗಳು ದೇಶದಲ್ಲೇ ಮೊದಲ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

ಮಕ್ಕಳ ಸಾವಿನ ಪ್ರಮಾಣದಲ್ಲಿ ಗಂಡುಮಕ್ಕಳ ಪ್ರಮಾಣ 33 ಇದ್ದರೆ, ಹೆಣ್ಣು ಮಕ್ಕಳ ಪ್ರಮಾಣ 31 ಇದೆ. ಇನ್ನು ಜನನ ಸಮಯದಲ್ಲಿ ಸಂಭವಿಸುವ ಮಕ್ಕಳ ಸಾವಿನ ಪ್ರಮಾಣವೂ ಪ್ರತಿ 1000ಕ್ಕೆ 30ರಿಂದ 28ಕ್ಕೆ ಇಳಿದಿದೆ. ಜನ್ಮ ಸಮಯದಲ್ಲಿ ಮಕ್ಕಳ ಸಾವು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (43) ಇದ್ದರೆ, ಕೇರಳದಲ್ಲಿ (6) ಅತಿ ಕಡಿಮೆ ಇದೆ ಎಂದು ವರದಿ ಹೇಳಿದೆ.

ಸರ್ಕಾರಿ ಆಸ್ಪತ್ರೆಗೆ ಬೆಂಕಿ: 10 ನವಜಾತ ಶಿಶುಗಳ ದಾರುಣ ಸಾವು!

ಇನ್ನು ಜನನ ಸಮಯದಲ್ಲಿ ಹೆಣ್ಣು ಗಂಡಿನ ಅನುಪಾತದಲ್ಲೂ 3 ಅಂಶಗಳ ಏರಿಕೆ ಕಂಡುಬಂದಿದೆ. 2017-19ರಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 904 ಹೆಣ್ಣು ಮಕ್ಕಳು ಹುಟ್ಟುತ್ತಿದ್ದರೆ, 2018-20ರಲ್ಲಿ ಅದು 907ಕ್ಕೆ ಏರಿದೆ. ಇನ್ನು 2019ರಲ್ಲಿ ಪ್ರತಿ ದಂಪತಿಗೆ ಸರಾಸರಿ 2.1 ಮಕ್ಕಳ ಜನನವಾಗುತ್ತಿದ್ದರೆ, 2020ರಲ್ಲಿ ಅದು 2ಕ್ಕೆ ಕುಸಿದಿದೆ. ಬಿಹಾರದಲ್ಲಿ ಈ ಪ್ರಮಾಣ ಗರಿಷ್ಠ ಮೂರು ಇದ್ದರೆ, ದೆಹಲಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕನಿಷ್ಠವಾದ 1.4 ದಾಖಲಾಗಿದೆ ಎಂದು ವರದಿ ಹೇಳಿದೆ.
 

Follow Us:
Download App:
  • android
  • ios